For Quick Alerts
  ALLOW NOTIFICATIONS  
  For Daily Alerts

  ದರ್ಶನ್ 'ಮದಕರಿ ನಾಯಕ' ಅಪ್‌ಡೇಟ್ ನೀಡಿದ ರಾಜೇಂದ್ರ ಸಿಂಗ್ ಬಾಬು

  |

  'ರಾಬರ್ಟ್' ಸಿನಿಮಾ ಮುಗಿಸಿದ ಬಳಿಕ ನಟ ದರ್ಶನ್ ಯಾವ ಹೊಸ ಚಿತ್ರವನ್ನು ಆರಂಭಿಸಿಲ್ಲ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 'ರಾಜವೀರ ಮದಕರಿ ನಾಯಕ' ಚಿತ್ರೀಕರಣ ಈ ಮೊದಲೇ ಶುರು ಮಾಡಿದ್ದರೂ ಲಾಕ್‌ಡೌನ್ ಕಾರಣದಿಂದ ಸ್ಥಗಿತಗೊಳಿಸಲಾಗಿತ್ತು. ಈಗ ಲಾಕ್‌ಡೌನ್ ತೆರವುಗೊಂಡಿದೆ. ಹೊಸ ಹೊಸ ಸಿನಿಮಾಗಳು ಶೂಟಿಂಗ್ ಆರಂಭಿಸಿದೆ. ಆದರೂ, ರಾಜವೀರ ಮದಕರಿ ನಾಯಕ ಚಿತ್ರೀಕರಣ ಶುರು ಮಾಡಿಲ್ಲ.

  ಮದಕರಿ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

  ಈಗಿನ ಪರಿಸ್ಥಿತಿಯಲ್ಲಿ 'ರಾಜವೀರ ಮದಕರಿ ನಾಯಕ' ಶೂಟಿಂಗ್ ಶೀಘ್ರದಲ್ಲಿ ಆರಂಭವಾಗುವುದು ಕಷ್ಟ ಎಂದು ಸ್ವತಃ ಚಿತ್ರತಂಡ ಹೇಳಿದೆ. ಇದೊಂದು ಐತಿಹಾಸಿಕ ಚಿತ್ರವಾಗಿರುವುದರಿಂದ ಪ್ರತಿದಿನ ಶೂಟಿಂಗ್ ಸೆಟ್‌ನಲ್ಲಿ 400-500 ಜನ ಕೆಲಸ ಮಾಡಬೇಕು. ರಾಜನ ಕಥೆ ಅಂದ್ರೆ ಅಲ್ಲಿ ನೂರಾರು ಸೈನಿಕರು ಇರಬೇಕು. ಇಷ್ಟ ದೊಡ್ಡ ಮಟ್ಟದಲ್ಲಿ ಪ್ರೊಡಕ್ಷನ್ ಇಟ್ಕೊಂಡು ಈ ಕೋವಿಡ್ ಸಮಯದಲ್ಲಿ ಚಿತ್ರೀಕರಣ ಮಾಡುವುದು ಅಪಾಯದ ಕೆಲಸ ಎಂದು ತಾತ್ಕಾಲಿಕವಾಗಿ ಶೂಟಿಂಗ್ ಮುಂದೂಡಲಾಗಿದೆ.

  ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ಶಕ್ತಿ ತುಂಬಿದ್ದು ಆ 'ನಾಲ್ವರು'ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ಶಕ್ತಿ ತುಂಬಿದ್ದು ಆ 'ನಾಲ್ವರು'

  ಕೋವಿಡ್ ಪರಿಸ್ಥಿತಿ ಭವಿಷ್ಯದಲ್ಲಿ ಹೇಗಿರಲಿದೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಈಗಲೇ ಅನೇಕ ಕಡೆ ಸೋಂಕು ಹರಡಿದೆ. ಕೇರಳದಲ್ಲಿ ಹೆಚ್ಚು ಕೇಸ್ ಪತ್ತೆಯಾಗುತ್ತಿದೆ. ವಿದೇಶಗಳಲ್ಲಿ ಮತ್ತೆ ಲಾಕ್‌ಡೌನ್ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಆತುರಕ್ಕೆ ಬಿದ್ದು ಶೂಟಿಂಗ್ ಶುರು ಮಾಡಿದರೂ, ಅದರಿಂದ ಚಿತ್ರದಲ್ಲಿ ಕೆಲಸ ಮಾಡುವವರಿಗೆ ಅಪಾಯವಾಗಬಹುದು ಎಂಬ ಆಲೋಚನೆಯಿಂದ ಸದ್ಯಕ್ಕೆ ಶೂಟಿಂಗ್ ಟೇಕ್ ಆನ್ ಮಾಡದಿರಲು ನಿರ್ಧರಿಸಲಾಗಿದೆ ಎಂದು ನಿರ್ದೇಶಕ ಎಸ್‌ವಿ ರಾಜೇಂದ್ರಸಿಂಗ್ ಬಾಬು 'ಸಿನಿಮಾ ಹಾಲ್' ಎಂಬ ಯೂಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

  20 ದಿನ ಶೂಟಿಂಗ್ ಆಗಿದೆ ಅಷ್ಟೇ

  20 ದಿನ ಶೂಟಿಂಗ್ ಆಗಿದೆ ಅಷ್ಟೇ

  'ರಾಜವೀರ ಮದಕರಿ ನಾಯಕ' ಇದುವರೆಗೂ ಕೇವಲ 20 ದಿನ ಶೂಟಿಂಗ್ ಮಾತ್ರ ಮಾಡಲಾಗಿದೆ. ಮೊದಲ ಹಂತದಲ್ಲಿ ಕೇರಳದ ಕೊಚ್ಚಿಯಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಅದಾದ ಮೇಲೆ ಸಿನಿಮಾ ಕೆಲಸವನ್ನು ನಿಲ್ಲಿಸಲಾಗಿದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾಹಿತಿ ನೀಡಿದ್ದಾರೆ.

  ಆರೋಗ್ಯ ಸಮಸ್ಯೆ ಆಗಬಾರದು

  ಆರೋಗ್ಯ ಸಮಸ್ಯೆ ಆಗಬಾರದು

  ಸ್ಕ್ರಿಪ್ಟ್ ರೆಡಿ ಇದೆ, ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಎಲ್ಲರೂ ಸಜ್ಜಾಗಿದ್ದೇವೆ. ಆದರೆ, ಕೊರೊನಾ ಪರಿಸ್ಥಿತಿಯನ್ನು ಹೇಗೆಂದು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರ ಭದ್ರತೆ ಮುಖ್ಯ. ಶೂಟಿಂಗ್ ಇವತ್ತಲ್ಲ ಅಂದ್ರೂ ನಾಳೆ ಮಾಡಬಹುದು. ಈಗ ಮೂರನೇ ಅಲೆಯ ಭೀತಿ ಹೆಚ್ಚಿದೆ. ಇಂತಹ ಸಮಯದಲ್ಲಿ ಮುಂದಾಲೋಚನೆ ಇಲ್ಲದೇ ಶೂಟಿಂಗ್ ಶುರು ಮಾಡಿ, ಏನಾದರೂ ಅಪಾಯ ಆದರೆ ಅದರಿಂದ ನಮ್ಮವರಿಗೆ ನಷ್ಟ. ಮದಕರಿ ನಾಯಕ, ಹೈದರಾಲಿ, ಸೈನಿಕರು ಹೀಗೆ ತುಂಬಾ ಕಲಾವಿದರು ಭಾಗಿಯಾಗುವ ದೃಶ್ಯಗಳು ಹೆಚ್ಚು. ಇನ್ನಷ್ಟು ದಿನ ಕಾದು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

  ರಾಕ್ಲೈನ್ ವೆಂಕಟೇಶ್ 'ಮದಕರಿ ನಾಯಕ' ಚಿತ್ರ ಮಾಡಲು 'ಈ ವ್ಯಕ್ತಿ' ಪ್ರೇರಣೆರಾಕ್ಲೈನ್ ವೆಂಕಟೇಶ್ 'ಮದಕರಿ ನಾಯಕ' ಚಿತ್ರ ಮಾಡಲು 'ಈ ವ್ಯಕ್ತಿ' ಪ್ರೇರಣೆ

  ಕನ್ನಡ ಚಿತ್ರರಂಗಕ್ಕೆ ಮೈಲಿಗಲ್ಲು ಆಗಲಿ

  ಕನ್ನಡ ಚಿತ್ರರಂಗಕ್ಕೆ ಮೈಲಿಗಲ್ಲು ಆಗಲಿ

  ರಾಜವೀರ ಮದಕರಿ ನಾಯಕ ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲು ಆಗಬೇಕು ಎಂಬ ಆಸೆ ಹೊಂದಿದ್ದಾರೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದರ್ಶನ್. ಈ ಮುಂಚೆ ಬಹಳಷ್ಟು ಜನ ಮಾಡಿದ್ದಾರೆ. ಆದರೆ, ಈ ಚಿತ್ರವನ್ನು ತುಂಬಾ ದೊಡ್ಡ ಮಟ್ಟದಲ್ಲಿ ತಯಾರು ಮಾಡಬೇಕು ಎಂದು ನಿರ್ಧರಿಸಲಾಗಿದೆ. ಹಾಗಾಗಿ, ಸಮಯ ತೆಗೆದುಕೊಂಡರೂ ಪರವಾಗಿಲ್ಲ. ಯಾರಿಗೂ ತೊಂದರೆಯಾಗದಂತೆ ಕೆಲಸ ಮಾಡುವುದು ನಮ್ಮ ಜವಾಬ್ದಾರಿ ಆಗಿದೆ ಎಂದು ಸಿಂಗ್ ಬಾಬು ಮಾಹಿತಿ ನೀಡಿದರು.

  ಶೂಟಿಂಗ್ ಪ್ಲಾನ್ ಬದಲಾಗುವ ಸಾಧ್ಯತೆ

  ಶೂಟಿಂಗ್ ಪ್ಲಾನ್ ಬದಲಾಗುವ ಸಾಧ್ಯತೆ

  ಸಿನಿಮಾ ಆರಂಭವಾದ ಸಂದರ್ಭದಲ್ಲಿ ರಾಜವೀರ ಮದಕರಿ ನಾಯಕ ಚಿತ್ರೀಕರಣವನ್ನು ರಾಜಸ್ಥಾನದಲ್ಲಿ ಮಾಡಬೇಕು ಎಂಬ ಯೋಜನೆ ಇತ್ತು. ಆದ್ರೀಗ, ಕೋವಿಡ್ ಪರಿಸ್ಥಿತಿಯಿಂದ ಕರ್ನಾಟಕದ ಹುಬ್ಬಳ್ಳಿ, ಚಿತ್ರದುರ್ಗ ಸುತ್ತಮುತ್ತ ಶೂಟಿಂಗ್ ಮಾಡುವ ನಿರ್ಧಾರಕ್ಕೆ ಬರಲಾಗಿದೆಯಂತೆ. ಮದಕರಿ ನಾಯಕ ಚಿತ್ರದಲ್ಲಿ ನಾಯಕಿ ಪಾತ್ರ ಇನ್ನು ಅಂತಿಮವಾಗಿಲ್ಲ. ಕನ್ನಡ ನಟಿಯನ್ನೇ ಆಯ್ಕೆ ಮಾಡಲಾಗುವುದು ಎಂಬ ಮಾತಿದೆ.

  ಮದಕರಿ ಚಿತ್ರದಲ್ಲಿ ಸುಮಲತಾ ನಟನೆ

  ಮದಕರಿ ಚಿತ್ರದಲ್ಲಿ ಸುಮಲತಾ ನಟನೆ

  ರಾಜವೀರ ಮದಕರಿ ನಾಯಕ ಚಿತ್ರದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಲೆಜೆಂಡ್ ಸಂಗೀತ ನಿರ್ದೇಶಕ ಹಂಸಲೇಖ ಜೊತೆ ಸೇರಿದ್ದಾರೆ. ಬಿಎಲ್ ವೇಣು ಅವರ ಕಥೆ, ಹಿರಿಯ ನಟ ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ.

  2019ರಲ್ಲಿ ಮದಕರಿ ನಾಯಕ ಮುಹೂರ್ತ

  2019ರಲ್ಲಿ ಮದಕರಿ ನಾಯಕ ಮುಹೂರ್ತ

  2019ರ ಡಿಸೆಂಬರ್ 6 ರಂದು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ಮಾಪಕ ಮುನಿರತ್ನ, ಮಂಡ್ಯ ಸಂಸದೆ ಸುಮಲತಾ, ನಟ ಶ್ರೀನಿವಾಸ್ ಮೂರ್ತಿ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ದೊಡ್ಡಣ್ಣ ಪಾಲ್ಗೊಂಡಿದ್ದರು.

  'ಗೋಲ್ಡ್ ರಿಂಗ್' ಆರಂಭ

  'ಗೋಲ್ಡ್ ರಿಂಗ್' ಆರಂಭ

  ಮದಕರಿ ನಾಯಕ ಸಿನಿಮಾ ಮತ್ತಷ್ಟು ದಿನ ವಿಳಂಬವಾಗುವ ಸಾಧ್ಯತೆ ಇದ್ದು, ಈ ನಡುವೆ ನಟ ದರ್ಶನ್ ಜೊತೆಯಲ್ಲಿಯೇ ರಾಕ್‌ಲೈನ್ ವೆಂಕಟೇಶ್ ಇನ್ನೊಂದು ಚಿತ್ರ ಮಾಡುವ ಪ್ಲಾನ್ ಮಾಡಿದ್ದಾರಂತೆ. ಈ ಚಿತ್ರದಲ್ಲಿ ನಟ ದರ್ಶನ್ ನೇವಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದು, 'ಗೋಲ್ಡ್ ರಿಂಗ್' ಎಂದು ಹೆಸರು ಫಿಕ್ಸ್ ಆಗಿದೆ ಎಂಬ ಸುದ್ದಿ ವರದಿಯಾಗಿದೆ.

  English summary
  Challenging star Darshan starrer Rajaveera Madakari Nayaka movie shooting to be delayed says director SV Rajendrasingh Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X