For Quick Alerts
  ALLOW NOTIFICATIONS  
  For Daily Alerts

  ಸಂದೇಶ್ ಹೋಟೆಲ್ ಬಿಟ್ಟು ಬೇರೆ ಕಡೆ ಸುದ್ದಿಗೋಷ್ಠಿ ಮಾಡಿದ್ದು ಇದೇ ಕಾರಣಕ್ಕೆ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿಗೆ ಹೋದಾಗೆಲ್ಲಾ ಸ್ನೇಹಿತ, ಹಿತೈಷಿ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರಿನ್ಸ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಾರೆ. ದರ್ಶನ್ ಅವರ ಪಾರ್ಟಿ, ಪ್ರೆಸ್‌ಮೀಟ್ ಏನೇ ಇದ್ದರು ಇದೇ ಹೋಟೆಲ್‌ನಲ್ಲಿ ಇರ್ತಿತ್ತು. ಆದರೆ, ಅರುಣಾ ಕುಮಾರಿ ವಿಚಾರದಲ್ಲಿ ನಡೆದ ಪ್ರೆಸ್‌ಮೀಟ್ ಸಂದೇಶ್ ಹೋಟೆಲ್‌ನಲ್ಲಿ ಆಗಿಲ್ಲ.

  Recommended Video

  ದರ್ಶನ್ ಆದ್ರು ಅಷ್ಟೆ ಯಾರಾದ್ರೂ ಅಷ್ಟೆ ಎಂದು ಬೈದ ಸಂದೇಶ್ ಹೋಟೆಲ್ ಮಾಲೀಕ | Filmibeat Kannada

  ಸಪ್ಲೈಯರ್ ಘಟನೆ ನಡೆದ ಮೇಲೆ ನಟ ದರ್ಶನ್ ಸಂದೇಶ್ ಹೋಟೆಲ್‌ನಿಂದ ಅಂತರ ಕಾಯ್ದುಕೊಂಡರಾ ಎಂಬ ಅನುಮಾನ ಕಾಡಿದೆ. ಇದೀಗ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಎಂಟ್ರಿಯಿಂದ ತಿಂಗಳ ಹಿಂದೆ ನಡೆದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಬಗ್ಗೆ ಹೋಟೆಲ್ ಮಾಲೀಕ ಸಂದೇಶ್ ಪ್ರತಿಕ್ರಿಯೆ ನೀಡಿದ್ದು, ''ಗಲಾಟೆ ಆಗಿದ್ದು ನಿಜ, ಹಲ್ಲೆ ಮಾಡಿಲ್ಲ. ಬೈಯ್ದರು ಅಷ್ಟೇ'' ಎಂದಿದ್ದಾರೆ. ಏನಿದು ಪ್ರಕರಣ ಮುಂದೆ ಓದಿ...

  ಸಂದೇಶ್ ಹೋಟೆಲ್‌ನಿಂದ ಡಿ ಬಾಸ್ ಅಂತರ?

  ಸಂದೇಶ್ ಹೋಟೆಲ್‌ನಿಂದ ಡಿ ಬಾಸ್ ಅಂತರ?

  ಸಂದೇಶ್ ಹೋಟೆಲ್ ಅಂದ್ರೆ ಅದೊಂದು ರೀತಿ ನಟ ದರ್ಶನ್ ಅವರದ್ದೇ ಎನ್ನುವ ಮಾತಿದೆ. ದರ್ಶನ್ ಹಾಗೂ ಸ್ನೇಹಿತರು ಯಾರೇ ಮೈಸೂರಿಗೆ ಬಂದ್ರೆ ಸಂದೇಶ್ ಪ್ರಿನ್ಸ್ ಹೋಟೆಲ್‌ ಫಿಕ್ಸ್. ಆದ್ರೆ, ಈ ಹೋಟೆಲ್‌ನಿಂದ ನಟ ದರ್ಶನ್ ಅಂತರ ಕಾಯ್ದುಕೊಂಡರಾ ಎಂಬ ಅನುಮಾನ ಮೂಡಿದೆ. ಇದಕ್ಕೆ ಕಾರಣ ಅರುಣಾಕುಮಾರಿ ವಿಚಾರವಾಗಿ ದರ್ಶನ್ ಪ್ರೆಸ್‌ಮೀಟ್ ಮಾಡುವ ವೇಳೆ ಬೇರೆ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದು.

  ಅರುಣಾಕುಮಾರಿ ಪ್ರಕರಣ: ದರ್ಶನ್ ಮತ್ತು ಸ್ನೇಹಿತರ ವಿರುದ್ಧ ಸಿಡಿದೆದ್ದ ಇಂದ್ರಜಿತ್ಅರುಣಾಕುಮಾರಿ ಪ್ರಕರಣ: ದರ್ಶನ್ ಮತ್ತು ಸ್ನೇಹಿತರ ವಿರುದ್ಧ ಸಿಡಿದೆದ್ದ ಇಂದ್ರಜಿತ್

  ಬಹಳಷ್ಟು ಜನರು ಕೇಳಿದ್ರು

  ಬಹಳಷ್ಟು ಜನರು ಕೇಳಿದ್ರು

  ಸಂದೇಶ್ ಹೋಟೆಲ್ ಬಿಟ್ಟು ಬೇರೆ ಹೋಟೆಲ್‌ನಲ್ಲಿ ದರ್ಶನ್ ಪ್ರೆಸ್ ಮೀಟ್ ಮಾಡಿದ್ಮೇಲೆ ಬಹಳಷ್ಟು ಜನರು ಸಂದೇಶ ಅವರಲ್ಲಿ ''ಏಕೆ ನಿಮ್ಮ ಹೋಟೆಲ್‌ನಲ್ಲಿ ಪ್ರೆಸ್‌ಮೀಟ್ ಮಾಡಿಲ್ಲ'' ಎಂದು ಕೇಳಿದರಂತೆ. ಇದು ಸಹಜವಾಗಿ ಕೇಳಬೇಕಾದ ಪ್ರಶ್ನೆಯೇ. ತನ್ನದೇ ಹೋಟೆಲ್‌ ಎನ್ನುವಷ್ಟು ಆತ್ಮೀಯತೆ ಹೊಂದಿರುವ ನಟ ಪ್ರೆಸ್‌ಮೀಟ್‌ಗಾಗಿ ಬೇರೆ ಹೋಟೆಲ್‌ಗೆ ಹೋದ್ರು ಅಂದ್ರೆ ಅದರ ಹಿಂದಿನ ಕಾರಣ ಹುಡುಕುವುದು ಸಾಮಾನ್ಯ.

  ಆ ಘಟನೆಯಿಂದ ಬೇಸರ ಆಯ್ತಾ?

  ಆ ಘಟನೆಯಿಂದ ಬೇಸರ ಆಯ್ತಾ?

  ಸಪ್ಲೈಯರ್ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ರು ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದರು. 'ಹಲ್ಲೆ ಮಾಡಿಲ್ಲ, ಬೈಯ್ದರು ಅಷ್ಟೇ' ಎಂದು ಸಂದೇಶ್ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆ ನಡೆದಾಗ ದರ್ಶನ್ ಸ್ವಲ್ಪ ಕೋಪವಾಗಿ ಇದ್ದರು, ಅಡುಗೆ ಬಡಿಸುವ ವಿಚಾರದಲ್ಲಿ ಸಪ್ಲೈಯರ್ ಮೇಲೆ ರೇಗಾಡಿದರು ಎಂದು ಸಂದೇಶ್ ಹೇಳಿದ್ದಾರೆ. ಈ ವೇಳೆ ಕಾರ್ಮಿಕರ ಪರವಾಗಿ ಸಂದೇಶ್ ಮಾತನಾಡಿ, ದರ್ಶನ್ ಅವರನ್ನು ಸಮಾಧಾನ ಪಡಿಸಿದ್ದು ಆಗಿದೆ. ಈ ಘಟನೆ ಬಳಿಕ ದಾಸ ಸಂದೇಶ್ ಹೋಟೆಲ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.

  ದಲಿತನ ಮೇಲೆ ದರ್ಶನ್ ಹಲ್ಲೆ ಆರೋಪ: ಇಂದ್ರಜಿತ್ ಸುಳ್ಳು ಹೇಳುತ್ತಿದ್ದಾರೆಂದ ಸಂದೇಶ್ ನಾಗರಾಜ್ದಲಿತನ ಮೇಲೆ ದರ್ಶನ್ ಹಲ್ಲೆ ಆರೋಪ: ಇಂದ್ರಜಿತ್ ಸುಳ್ಳು ಹೇಳುತ್ತಿದ್ದಾರೆಂದ ಸಂದೇಶ್ ನಾಗರಾಜ್

  ದರ್ಶನ್ ಜೊತೆ ಮಾತನಾಡಿದ ಸಂದೇಶ್

  ದರ್ಶನ್ ಜೊತೆ ಮಾತನಾಡಿದ ಸಂದೇಶ್

  ''ದರ್ಶನ್ ಸ್ನೇಹದಲ್ಲಿ ಬಿರುಕು, ಮುನಿಸು ಏನು ಇಲ್ಲ. ನಾವು ಯಾವಾಗಲೂ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಮಾಡ್ತೇವೆ. ಕೆಲವು ದಿನಗಳಿಂದ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ಇದ್ದರು. ಹೋಟೆಲ್‌ ಕಡೆ ಬಂದಿಲ್ಲ. ಈ ಘಟನೆ ಆಗಿದ್ದು ಒಂದು ತಿಂಗಳ ಹಿಂದೆ'' ಎಂದು ಸಂದೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಘಟನೆ ಸುದ್ದಿಯಾಗುತ್ತಿದ್ದಂತೆ ನಟ ದರ್ಶನ್‌ಗೆ ಫೋನ್ ಮಾಡಿದ ನಿರ್ಮಾಪಕ ಸಂದೇಶ್ ಮಾತನಾಡಿದರಂತೆ.

  English summary
  Darshan Conducts Press Meet at Other Hotel after Misunderstanding with Sandesh Nagaraj.
  Thursday, July 15, 2021, 13:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X