For Quick Alerts
  ALLOW NOTIFICATIONS  
  For Daily Alerts

  ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ದರ್ಶನ್ ಹೊಸ ಸಿನಿಮಾ: ಮದಕರಿ ನಾಯಕನ ಕತೆ ಏನಾಯಿತು?

  By ಫಿಲ್ಮ್ ಡೆಸ್ಕ್
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ರಾಬರ್ಟ್ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದ್ದು, ಇದೇ ಮಾರ್ಚ್ 11ರಂದು ರಾಬರ್ಟ್ ಕನ್ನಡ ಮತ್ತು ತೆಲುಗಿನಲ್ಲಿ ತೆರೆಗೆ ಬರುತ್ತಿದೆ.

  ರಾಬರ್ಟ್ ಸಿನಿಮಾ ಬಳಿಕ ದರ್ಶನ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ರಾಬರ್ಟ್ ಚಿತ್ರೀಕರಣ ಮುಗಿಯುತ್ತಿದ್ದಂತೆ ಡಿ ಬಾಸ್ ರಾಜವೀರ ಮದಕರಿ ನಾಯಕ ಚಿತ್ರೀಕರಣ ಪ್ರಾರಂಭ ಮಾಡಿದ್ದರು. ಒಂದೆರಡು ದಿನಗಳು ಚಿತ್ರೀಕರಣ ಮಾಡುತ್ತಿದ್ದಂತೆ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಸ್ಥಗಿತ ಮಾಡಬೇಕಾಯಿತು.

  ಜೆಎಸ್‌ಎಸ್‌ ಕಾಲೇಜಿಗೆ ಡಿ ಬಾಸ್ ಎಂಟ್ರಿ: ವಿದ್ಯಾರ್ಥಿಗಳ ಜೊತೆ ಸಂಭ್ರಮ

  ಕೊರೊನಾ ಲಾಕ್ ಡೌನ್ ಸಡಿಲಿಕೆ ಆಗಿ ಸಹಜ ಸ್ಥಿತಿಗೆ ಬಂದರೂ ಸಹ ರಾಜವೀರ ಮದಕರಿ ನಾಯಕ ಟೇಕಾಫ್ ಆಗಿಲ್ಲ. ಬಳಿಕ ಈ ಸಿನಿಮಾ ನಿಂತು ಹೋಯಿತು ಎನ್ನುವ ಮಾತುಗಳು ಸಹ ಗಾಂಧಿನಗರದಲ್ಲಿ ಕೇಳಿಬರಲು ಪ್ರಾರಂಭವಾಯಿತು. ಅಷ್ಟರಲ್ಲಿ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ತಂಡ ಚಿತ್ರೀಕರಣಕ್ಕೆ ಲೊಕೇಷನ್ ಹುಡುವುದಾಗಿ ಹೊರಡುವ ಮೂಲಕ ಸಿನಿಮಾ ನಿಂತಿಲ್ಲ ಎನ್ನುವುದನ್ನು ಸಾಬೀತು ಮಾಡಿದರು.

  ಸದ್ಯ ರಾಜವೀರ ಮದಕರಿ ನಾಯಕ ಸಿನಿಮಾ ಮುಂದಕ್ಕೆ ಹೋಗಿದೆ. ಈ ಬಗ್ಗೆ ಸ್ವತಹ ದರ್ಶನ್ ಅವರೇ ಹೇಳಿದ್ದಾರೆ. ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶದಲ್ಲಿ ಮಾತನಾಡಿದ ದರ್ಶನ್, ರಾಜವೀರ ಮದಕರಿ ನಾಯಕ ಮುಂದಕ್ಕೆ ಹೋಗಿದೆ ಹೋಗಿದೆ. ನನ್ನ ಅಭಿಮಾನಿಗಳು ಆಟೋ ಮತ್ತು ಕ್ಯಾಬ್ ಡ್ರೈವರ್ ಗಳು ಜಾಸ್ತಿ. ಆದರೀಗ ಕೊರೊನಾ ವೈರಸ್ ನಿಂದ ತುಂಬಾ ಸಂಕಷ್ಟದಲ್ಲಿದ್ದಾರೆ. ಅವರ ಜೀವನ ಸಹಜ ಸ್ಥಿತಿಗೆ ಬರಬೇಕು. ಹಾಗಾಗಿ ರಾಕ್ ಲೈನ್ ವೆಂಕಟೇಶ್ ಅವರಲ್ಲಿ ಈ ಸಿನಿಮಾ ತಡವಾಗಿ ಶುರುಮಾಡುವುದಾಗಿ ಕೇಳಿಕೊಂಡಿದ್ದೀನಿ' ಎಂದು ಹೇಳಿದ್ದಾರೆ.

  ಜೊತೆಗೆ ಇದೆ ವರ್ಷ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತೆ, ದಸರಾ ಅಥವಾ ದೀಪಾಳಿಗೆ ರಿಲೀಸ್ ಆಗುತ್ತಿದೆ ಎಂದಿದ್ದಾರೆ. ಅಂದ್ಮೇಲೆ ದರ್ಶನ್ ಮುಂದಿನ ಸಿನಿಮಾ ಯಾವುದು, ಯಾರು ನಿರ್ಮಾಣ ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ರಾಬರ್ಟ್ ಹಾಡಿನ ತೆಲುಗು ಗಾಯಕಿಗೆ ಕನ್ನಡಿಗರು ಫಿದಾ | Filmibeat Kannada

  ಮೂಲಗಳ ಪ್ರಕಾರ ದರ್ಶನ್ ಮುಂದಿನ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ದರ್ಶನ್ ಬಳಿ ಸದ್ಯ ಮಿಲನಾ ನಾಗರಾಜ್, ಶೈಲಜಾ ನಾಗ್, ತೆಲುಗು ನಿರ್ಮಾಪಕರ ಸಿನಿಮಾಗಳು ಸಾಲಿನಲ್ಲಿದೆ. ಸದ್ಯ ರಾಬರ್ಟ್ ಮುಗಿದ ಬಳಿಕ ದರ್ಶನ್ ಸಿನಿಮಾ ಯಾವುದು ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

  English summary
  Challenging star Darshan next movie with rockline venkatesh for new project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X