»   » ದರ್ಶನ್ ನಾಟ್ ರೀಚಬಲ್ ಆಗಿದ್ರೆ..ಟೆನ್ಷನ್ ಮಾಡ್ಕೊಬೇಡಿ, ಯಾಕಂದ್ರೆ..

ದರ್ಶನ್ ನಾಟ್ ರೀಚಬಲ್ ಆಗಿದ್ರೆ..ಟೆನ್ಷನ್ ಮಾಡ್ಕೊಬೇಡಿ, ಯಾಕಂದ್ರೆ..

Posted By:
Subscribe to Filmibeat Kannada

ಕಾವೇರಿ ಹೋರಾಟ ಭುಗಿಲೆದ್ದಾಗ ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಬೀದಿಗಿಳಿದು ರೈತರಿಗೆ ಬೆಂಬಲ ನೀಡಿದ್ರು. ಬಳಿಕ ಮೈಸೂರಿನಿಂದ ಸೀದಾ ಮಲೇಶಿಯಾಗೆ ಹಾರಿದ್ಮೇಲೆ ದರ್ಶನ್ ಸೈಲೆಂಟ್ ಆಗ್ಬಿಟ್ಟಿದ್ದಾರೆ.

ಮಲೇಶಿಯಾದಲ್ಲಿ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡ ಮೇಲೆ ಟ್ವಿಟ್ಟರ್ ನಲ್ಲಿ ಒಂದು ಫೋಟೋ ಹಾಕಿದ್ದು ಬಿಟ್ಟರೆ ದರ್ಶನ್ ಯಾರ ಕಾಂಟ್ಯಾಕ್ಟ್ ಗೂ ಸಿಗುತ್ತಿಲ್ಲ. ಮನೆಯವರು ಫೋನ್ ಮಾಡಿದರೂ, ಸದಾ ನಾಟ್ ರೀಚಬಲ್ ಆಗಿದ್ದಾರೆ. [ಫೋಟೋ ನೋಡಿ: ಮಲೇಶಿಯಾದಲ್ಲಿ 'ಚಕ್ರವರ್ತಿ' ದರ್ಶನ್ ಚಕ್ರಾಧಿಪತ್ಯ]


ಅರೇ ದರ್ಶನ್ ಎಲ್ಲಿದ್ದಾರೋ, ಹೇಗಿದ್ದಾರೋ, ಏನ್ ಮಾಡ್ತಿದ್ದಾರೋ ಅಂತ ಟೆನ್ಷನ್ ಆಗ್ಬೇಡಿ. ಯಾಕಂದ್ರೆ.....


ಮಲೇಶಿಯಾದಲ್ಲಿ ನೆಟ್ ವರ್ಕ್ ಪ್ರಾಬ್ಲಂ.!

ಮಲೇಶಿಯಾದ ಕಣ್ಣು ಕೋರೈಸುವ ಲೋಕೇಷನ್ ಗಳಲ್ಲಿ 'ಚಕ್ರವರ್ತಿ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಬ್ಯಾಡ್ ಲಕ್ ಅಂದ್ರೆ, ಅಲ್ಲಿ ನೆಟ್ ವರ್ಕ್ ಪ್ರಾಬ್ಲಂ. ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲ.


ಸಿಗ್ನಲ್ ಸಿಕ್ಕಾಗ ಅಪ್ ಡೇಟ್ ಮಾಡಿದ್ರು.!

ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು, ನೆಟ್ ವರ್ಕ್ ಸಿಕ್ಕಾಗ ತಮ್ಮ ಹೊಸ ಲುಕ್ ನ ಟ್ವಿಟ್ಟರ್ ಮೂಲಕ ರಿವೀಲ್ ಮಾಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್.


ಲೇಟೆಸ್ಟ್ ಫೋಟೋ ನೋಡಿ....

ದರ್ಶನ್ ಜೊತೆ ಕುಮಾರ್ ಬಂಗಾರಪ್ಪ ಕೂಡ ಮಲೇಶಿಯಾಗೆ ಹಾರಿದ್ದಾರೆ. 'ಚಕ್ರವರ್ತಿ' ಚಿತ್ರದಲ್ಲಿ 'ವಿಶೇಷ' ಪಾತ್ರ ನಿರ್ವಹಿಸುತ್ತಿದ್ದಾರೆ ಕುಮಾರ್ ಬಂಗಾರಪ್ಪ. ['ಚಕ್ರವರ್ತಿ' ಚಿತ್ರತಂಡ ಸೇರಿಕೊಂಡ ಹೊಸ ಅತಿಥಿ ಯಾರು ?]


ಆದಿತ್ಯ ಕೂಡ ಜೊತೆಯಲ್ಲಿ ಇದ್ದಾರೆ.

ದರ್ಶನ್, ಕುಮಾರ್ ಬಂಗಾರಪ್ಪ ಜೊತೆ ಆದಿತ್ಯ ಮತ್ತು ಸೃಜನ್ ಕೂಡ ಮಲೇಶಿಯಾಗೆ ಫ್ಲೈಟ್ ಹತ್ತಿದ್ದಾರೆ. ಅವರ ಫೋಟೋಗಳು ಇನ್ನೂ ಬಿಡುಗಡೆ ಆಗಿಲ್ಲ.


ಆದಿತ್ಯಗೂ ಕಾಡ್ತಿದೆ ನೆಟ್ ವರ್ಕ್ ಪ್ರಾಬ್ಲಂ

''ಮಲೇಶಿಯಾದಲ್ಲಿ ಬಹಳ ಕಡೆ ಶೂಟಿಂಗ್ ಇರೋದ್ರಿಂದ ನೆಟ್ ವರ್ಕ್ ಪ್ರಾಬ್ಲಂ. ಇದೇ ಕಾರಣಕ್ಕೆ ನಾನು ಪ್ರತಿಕ್ರಿಯೆ ನೀಡಲು ಆಗುತ್ತಿಲ್ಲ. ದಯವಿಟ್ಟು ಕ್ಷಮಿಸಿ. ಇಲ್ಲಿ ನಾವೆಲ್ಲರೂ ಕ್ಷೇಮ'' ಅಂತ ನಟ ಆದಿತ್ಯ ಟ್ವೀಟ್ ಮಾಡಿದ್ದಾರೆ.


English summary
Kannada Actor Darshan is not reachable in Malaysia due to Network Problem. Darshan is shooting for 'Chakravarthy' in Malaysia.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada