For Quick Alerts
  ALLOW NOTIFICATIONS  
  For Daily Alerts

  'ನಾವು ಯಾವ ಜಾತಿಗೋಸ್ಕರ ಹುಟ್ಟಿಲ್ಲ'- ಹುಬ್ಬಳ್ಳಿಯಲ್ಲಿ ದರ್ಶನ್ ಖಡಕ್ ಮಾತು

  |

  ಕನ್ನಡ ನಟ ದರ್ಶನ್ ಸಾಮಾನ್ಯವಾಗಿ ವೇದಿಕೆಗಳಲ್ಲಿ ಹೆಚ್ಚು ಮಾತನಾಡುವುದಿಲ್ಲ. ಸಿನಿಮಾ ಪ್ರಚಾರಕ್ಕೆ ಬಂದರೆ ಆ ಸಿನಿಮಾ ಬಗ್ಗೆ ಬಿಟ್ಟು ಬೇರೆ ಏನೂ ಚರ್ಚೆ ಮಾಡಲ್ಲ. ಆದ್ರೆ, ಹುಬ್ಬಳ್ಳಿಯಲ್ಲಿ ನಡೆದ ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮ ಡಿ ಬಾಸ್ ಅಭಿಮಾನಿಗಳ ಪಾಲಿಗೆ ಬಹಳ ವಿಶೇಷವಾಗಿತ್ತು. ಸುಮಾರು 20 ನಿಮಿಷಗಳ ಕಾಲ ವೇದಿಕೆಯಲ್ಲಿ ಮಾತನಾಡಿದ ದಾಸ ಹಲವು ವಿಚಾರಗಳನ್ನು ಚರ್ಚಿಸಿದರು.

  ಉ.ಕರ್ನಾಟಕದ ಜನ ಮಾಡಿದ ಸಹಾಯ ನೆನಪಿಸಿಕೊಂಡ ಡಿ ಬಾಸ್ | Roberrt Pre Release Event Hubli | Filmibeat Kannada

  ಮಾತಿನುದ್ದಕ್ಕೂ ನಮ್ಮ ಸೆಲೆಬ್ರಿಟಿಗಳೇ ಎಲ್ಲ, ಅವರಿಂದಲೇ ನಾವೆಲ್ಲ, ಅವರಿಗಾಗಿಯೇ ನಾವೆಲ್ಲ ಎಂದು ಹೇಳುತ್ತಲೇ ಅಭಿಮಾನಿಗಳ ಮೇಲಿನ ಅಭಿಮಾನ ಮೆರೆದರು. ಕಲಾವಿದರು ತಮ್ಮ ಜಾತಿಗಳ ಕಡೆ ಒಲವು ತೋರುತ್ತಾರೆ ಎಂಬ ಟೀಕೆ ಆಗಾಗ ಕೇಳುತ್ತದೆ. ಇಂತಹ ಟೀಕೆಗಳಿಗೆ ಪ್ರತ್ಯುತ್ತರ ಎಂಬಂತೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದು ನೆರೆದಿದ್ದ ಜನರ ಚಪ್ಪಾಳೆಗೆ ಕಾರಣ ಆಯ್ತು. ಅಷ್ಟಕ್ಕೂ ಏನದು? ಮುಂದೆ ಓದಿ...

  ನಾವು ಯಾರೂ ಯಾವ ಜಾತಿಗೋಸ್ಕರ ಹುಟ್ಟಿಲ್ಲ

  ನಾವು ಯಾರೂ ಯಾವ ಜಾತಿಗೋಸ್ಕರ ಹುಟ್ಟಿಲ್ಲ

  ''ಕಲಾವಿದರು, ಕಲಾವಿದರ ಕುಟುಂಬ ಒಂದೆ. ನಮಗೆ ಜಾತಿ ಇಲ್ಲ, ಮತ ಇಲ್ಲ ಇನ್ನೊಂದು ಇಲ್ಲ. ನಾವು ಯಾರೂ ಯಾವ ಜಾತಿಗೋಸ್ಕರ ಹುಟ್ಟಿಲ್ಲ. ಇಲ್ಲಿ ಎಲ್ಲರೂ ಇದ್ದಾರೆ, ಲಿಂಗಾಯತರು, ಗೌಡ್ರು, ಕುರುಬರು, ಮುಸ್ಲಿಮ್ ಬಾಂಧವರು ಎಲ್ಲರೂ ಇದ್ದಾರೆ. ಇಷ್ಟು ಜನ ಹಾಕಿದ ಕೂಳಿದಿಂದ ಈ ದೇಹ ಇರೋದು'' ಎಂದು ಡಿ ಬಾಸ್ ಖಡಕ್ ಆಗಿ ನುಡಿದರು.

  'ರಾಬರ್ಟ್' ಪ್ರಿ ರಿಲೀಸ್ ಕಾರ್ಯಕ್ರಮ: ಉತ್ತರ ಕರ್ನಾಟಕ ಜನರ ಮುಂದೆ ಚಪ್ಪಲಿ ಬಿಟ್ಟು ಮಾತನಾಡಿದ್ದೇಕೆ ದರ್ಶನ್?

  ನಾವು ಯಾರೋ ಒಬ್ಬರ ಸ್ವತ್ತು ಅಲ್ಲ

  ನಾವು ಯಾರೋ ಒಬ್ಬರ ಸ್ವತ್ತು ಅಲ್ಲ

  ''ನಾವು ಯಾರೋ ಒಬ್ಬರ ಸ್ವತ್ತು ಅಲ್ಲ. ಯಾವ ಜಾತಿಗೂ ನಾವು ಸೀಮಿತ ಇಲ್ಲ. ಮನುಷ್ಯ ಸತ್ತಾಗ ಅವರ ಮನೆಯಲ್ಲಿ ಹೀಗೆ ಅಂತ್ಯಕ್ರಿಯೆ ಮಾಡಬೇಕು ಎನ್ನುವುದು ಇದೆ, ಆದರೆ, ನಮಗಿಲ್ಲ. ಅಭಿಮಾನಿಗಳೇ ನಮಗೆಲ್ಲ, ನಮ್ಮ ಸೆಲೆಬ್ರಿಟಿಗಳೇ ನಮಗೆ ಇಷ್ಟೆ ನಮ್ಮ ಜಾತಿ'' ಎಂದು ದಾಸ ಹೇಳಿದರು.

  ಚಪ್ಪಲಿ ಬಿಟ್ಟು ಮಾತನಾಡಿದ ದಾಸ

  ಚಪ್ಪಲಿ ಬಿಟ್ಟು ಮಾತನಾಡಿದ ದಾಸ

  ರಾಬರ್ಟ್ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಜನತೆ ಮುಂದೆ ಮಾತನಾಡುವ ಮುನ್ನ ಕಾಲಿನಿಂದ ಚಪ್ಪಲಿ ಬಿಚ್ಚಿಟ್ಟರು. ಬರಿಗಾಲಲ್ಲಿ ನಿಂತು ಉತ್ತರ ಕರ್ನಾಟಕದ ಮಂದಿ ಧನ್ಯವಾದ ತಿಳಿಸಿದರು. ನಿಮ್ಮ ಋಣ ನಮ್ಮ ಮೇಲಿದೆ, ನಮ್ಮ ಕುಟುಂಬದ ಮೇಲಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

  ಉತ್ತರ ಕರ್ನಾಟಕದ ಜನರ ಮೇಲೆ ಪ್ರೀತಿಯ ಮಳೆಗರೆದ 'ದಾಸ' ದರ್ಶನ್

  ಡೈಲಾಗ್ ಹೊಡೆದು ಫ್ಯಾನ್ಸ್ ಖುಷಿ ಪಡಿಸಿದ ದರ್ಶನ್

  ಡೈಲಾಗ್ ಹೊಡೆದು ಫ್ಯಾನ್ಸ್ ಖುಷಿ ಪಡಿಸಿದ ದರ್ಶನ್

  ಅಭಿಮಾನಿಗಳನ್ನು ಉದ್ದೇಶಿಸಿ ಬರಿ ಮಾತನಾಡಿದ್ದು ಮಾತ್ರವಲ್ಲ, ಅವರಿಗಾಗಿ ತಮ್ಮ ಚಿತ್ರದ ಡೈಲಾಗ್‌ಗಳನ್ನು ಸಹ ಹೊಡೆದರು. ಕುರುಕ್ಷೇತ್ರ ಸಿನಿಮಾದ ಡೈಲಾಗ್, ರಾಬರ್ಟ್ ಚಿತ್ರದ ಡೈಲಾಗ್, ಮೆಜೆಸ್ಟಿಕ್ ಚಿತ್ರದ ಡೈಲಾಗ್ ಹೊಡೆದು ಅಭಿಮಾನಿಗಳನ್ನು ಖುಷಿ ಪಡಿಸಿದರು.

  English summary
  Challenging star Darshan Powerful Speech at Roberrt Pre Release Event in Hubballi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X