For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಬಗ್ಗೆ ಇಂಡಸ್ಟ್ರಿಯಲ್ಲಿ ಅಪ ಪ್ರಚಾರ.! ಈ ಬಗ್ಗೆ ದಾಸನೇ ಕೊಟ್ರು ಪ್ರತ್ಯುತ್ತರ

  |
  Yajamana Movie: ದರ್ಶನ್ ಬಗ್ಗೆ ಇಂಡಸ್ಟ್ರಿಯಲ್ಲಿ ಅಪ ಪ್ರಚಾರ.! ಈ ಬಗ್ಗೆ ದಾಸನೇ ಕೊಟ್ರು ಪ್ರತ್ಯುತ್ತರ

  ಸಾಮಾನ್ಯವಾಗಿ ಸ್ಟಾರ್ ನಟರ ಬಗ್ಗೆ ಹಾಗೂ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಹೊರಗಿನವರಿಗೆ, ಅಷ್ಟೇ ಯಾಕೆ ಅಭಿಮಾನಿಗಳಿಗೂ ಗೊತ್ತಿರಲ್ಲ. ತೆರೆಮೇಲೆ ನೋಡಿ ಖುಷಿ ಪಡುವ ಜನರು, ತೆರೆಹಿಂದೆ ಸ್ಟಾರ್ ಗಳು ಹೇಗಿರ್ತಾರೆ ಎಂಬುದರ ಬಗ್ಗೆ ಐಡಿಯಾ ಇರಲ್ಲ. ಅದಕ್ಕೆ ಅನ್ಸುತ್ತೆ, ಅಂತಹ ನಟರ ಬಗ್ಗೆ ಗಾಸಿಪ್ ಗಳು ಅನ್ನೋದು ಬಹುಬೇಗ ಹರಡುತ್ತೆ.

  ಹಾಗ್ನೋಡಿದ್ರೆ ದರ್ಶನ್ ಅವರ ಬಗ್ಗೆ ಕೂಡ ಇಂಡಸ್ಟ್ರಿಯಲ್ಲೊಂದು ಅಪ ಪ್ರಚಾರವಾಗಿದೆ. ಇದು ಸ್ವತಃ ದರ್ಶನ್ ಕಿವಿಗೂ ಬಿದ್ದಿದೆ. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ದಾಸ ಆನೆ ನಡೆದಿದ್ದೇ ದಾರಿ ಅಂತ ಮುಂದೆ ಹೋಗ್ತಾ ಇರ್ತಾರೆ.

  ಮೊಟ್ಟ ಮೊದಲ ಸಲ ಆಂಧ್ರದ ಈ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ತೆರೆಕಾಣ್ತಿದೆ.!

  ಅಷ್ಟಕ್ಕೂ, ದರ್ಶನ್ ಬಗ್ಗೆ ಇಂಡಸ್ಟ್ರಿಯಲ್ಲಿ ಅಪಪ್ರಚಾರ ಏನು ಅಂತ ಕೇಳಿದ್ರೆ, ಖುದ್ದು ಡಿ ಬಾಸ್ ಈ ವಿಷ್ಯವನ್ನ ಟಿವಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಆ ಅಪ ಪ್ರಚಾರದ ಸುದ್ದಿಗಳಿಗೆ ತಮ್ಮದೇ ಸ್ಟೈಲ್ ನಲ್ಲಿ ಉತ್ತರಿಸಿದ್ದಾರೆ. ಏನದು? ಮುಂದೆ ಓದಿ....

  ದರ್ಶನ್ ಜೊತೆ ಸಿನಿಮಾ ಮಾಡೋದು ಕಷ್ಟ ಅಂತಾರೆ!

  ದರ್ಶನ್ ಜೊತೆ ಸಿನಿಮಾ ಮಾಡೋದು ಕಷ್ಟ ಅಂತಾರೆ!

  ದರ್ಶನ್ ಸಿನಿಮಾಗಳನ್ನ ನಿರ್ಮಾಣ ಮಾಡ್ಬೇಕು, ನಿರ್ದೇಶನ ಮಾಡ್ಬೇಕು, ಕಥೆ ಬರೆಯಬೇಕು, ಮ್ಯೂಸಿಕ್ ಮಾಡ್ಬೇಕು ಅನ್ನೋದು ಪ್ರತಿಯೊಬ್ಬರ ತಂತ್ರಜ್ಞ ಹಾಗೂ ನಿರ್ಮಾಪಕರ ಕನಸು ಆಗಿರುತ್ತೆ. ಅದಕ್ಕೆ ದರ್ಶನ್ ಕಾಲ್ ಶೀಟ್ ಪಡೆಯೋಕೆ ನಿರ್ಮಾಪಕರು ಸರದಿ ಸಾಲಲ್ಲಿ ನಿಂತಿರ್ತಾರೆ. ಆದ್ರೆ, ದರ್ಶನ್ ಕಾಲ್ ಶೀಟ್ ಪಡೆಯುವ ನಿರ್ಮಾಪಕರಿಗೆ ಕೆಲವರು ಭಯ ಪಡಿಸ್ತಾರಂತೆ. 'ಅವರ ಜೊತೆ ಸಿನಿಮಾ ಮಾಡಿದ್ರೆ, ನಿಮ್ಮ ಕಥೆ ಮುಗಿತು'' ಅಂತ ಅಪಪ್ರಚಾರ ಮಾಡಲಾಗಿದೆ.

  IMDB ರೇಟಿಂಗ್ ನಲ್ಲಿ 'ಯಜಮಾನ' ಹವಾ: ದರ್ಶನ್ ಚಿತ್ರಕ್ಕೆ ಹೆಚ್ಚು ಕ್ರೇಜ್

  ನೀವು ಇಂಡಸ್ಟ್ರಿಯನ್ನ ಬಿಟ್ಟು ಹೋಗ್ತೀರಾ

  ನೀವು ಇಂಡಸ್ಟ್ರಿಯನ್ನ ಬಿಟ್ಟು ಹೋಗ್ತೀರಾ

  ದರ್ಶನ್ ಜೊತೆ ಸಿನಿಮಾ ಮಾಡ್ತಿದ್ದಾರೆ ಅಂತ ಖುಷಿ ಪಡೋದಕ್ಕಿಂತ ಭಯ ಪಡಿಸುವರು ಇಂಡಸ್ಟ್ರಿಯಲ್ಲಿದ್ದಾರಂತೆ. ಹೌದು, ''ದರ್ಶನ್ ಜೊತೆ ಸಿನಿಮಾನಾ....ಹೋಗಿ ಹೋಗಿ...ನೀವು ಇಂಡಸ್ಟ್ರಿಯನ್ನ ಬಿಟ್ಟು ಹೋಗ್ತೀರಾ'' ಎಂದು ಎದುರಿಸುವ ವ್ಯಕ್ತಿಗಳಿದ್ದಾರಂತೆ.

  ಅಭಿಮಾನಿಗಳ ಈ 5 ಆಸೆಯನ್ನ 'ಯಜಮಾನ' ಈಡೇರಿಸಿದ್ರೆ ಸಾಕಂತೆ.!

  ಬೆಟ್ಟ ತೋರಿಸಿ ಕಲ್ಲಿಟ್ರೆ ಸಹಿಸಲ್ಲ

  ಬೆಟ್ಟ ತೋರಿಸಿ ಕಲ್ಲಿಟ್ರೆ ಸಹಿಸಲ್ಲ

  ಹೀಗಂತ ಯಜಮಾನ ನಿರ್ಮಾಪಕಿ ದರ್ಶನ್ ಅವರ ಬಳಿ ಹೇಳಿದ್ರಂತೆ. ಅದಕ್ಕೆ ದರ್ಶನ್ ''ನನಗೆ ಬೆಟ್ಟ ತೋರಿಸಿ, ಕಲ್ಲಿಟ್ರೆ ನಾನು ಸಹಿಸಲ್ಲ. ನನಗೆ ನಾಲ್ಕು ಕಾರು ನಿಲ್ಲಿಸ್ತೀನಿ ಅಂತ ಹೇಳಿ, ಒಂದು ಕಾರು ಇಲ್ಲ ಅಂದ್ರೆ ಕೋಪ ಬರುತ್ತೆ. ಅಂತಹ ವಿಷ್ಯಗಳಿಗೆ ನಾನು ಜಗಳ ಆಡ್ತೀನಿ'' ಎಂದು ಸ್ಪಷ್ಟನೆ ನೀಡಿದ್ರಂತೆ.

  ಯಜಮಾನ ಚಿತ್ರದಲ್ಲಿದೆ 10 ಜಲ್ಲಿಕಟ್ಟು ಗೂಳಿಗಳು: ಅದಕ್ಕೆ ಖರ್ಚಾದ ಹಣ ಎಷ್ಟು?

  ನಾನು ಕಾಂಪಿಟೇಶನ್ ನಲ್ಲಿ ಇದ್ದೇನೆ

  ನಾನು ಕಾಂಪಿಟೇಶನ್ ನಲ್ಲಿ ಇದ್ದೇನೆ

  ''ನಾನು ಕಾಂಪಿಟೇಶನ್ ನಲ್ಲಿ ಇದ್ದೇನೆ. ನಾನು ಎಲ್ಲರೂ ಜೊತೆಯಲ್ಲೂ ಪೈಪೋಟಿ ನಡೆಸಬೇಕು. ಅವರು ಪಾಪ, ಇವರು ಪಾಪ ಅಂತ ಇದ್ರೆ ಕೊನೆಗೆ ನಾನು ಪಾಪ ಅನ್ನೋತರ ಆಗ್ತೀನಿ. ನನಗೆ ಹೇಳಿದ್ದನ್ನ ಮಾಡಿಲ್ಲ ಅಂದ್ರೆ ನಾನು ಶೂಟಿಂಗ್ ಮಾಡಲ್ಲ'' ಅಂತ ನೇರವಾಗಿ ಡಿ ಬಾಸ್ ಹೇಳಿಕೊಂಡಿದ್ದಾರೆ.

  ಡೈಲಾಗ್ ಬರೆಯೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿರ್ತಾರಂತೆ ದಾಸ

  ಹೇಳಿದ್ದನ್ನ ಮಾಡಿದ್ರೆ ನಾನು ಪ್ರಶ್ನಿಸುವುದೇ ಇಲ್ಲ

  ಹೇಳಿದ್ದನ್ನ ಮಾಡಿದ್ರೆ ನಾನು ಪ್ರಶ್ನಿಸುವುದೇ ಇಲ್ಲ

  ''ಅದು ಮಾಡ್ತೀನಿ, ಇದು ಮಾಡ್ತೀನಿ ಅಂತ ಹೇಳಿದ್ಮೇಲೆ ಅದನ್ನ ಮಾಡ್ಬೇಕು. ಹೇಳಿದ್ದನ್ನ ಮಾಡಿದ್ರೆ ನಾನು ನಿಮ್ಮ ಕಡೆ ತಿರುಗಿ ಕೂಡ ನೋಡಲ್ಲ. ಬರ್ತೀನಿ ಸೈಲೆಂಟ್ ಆಗಿ ಕೆಲಸ ಮಾಡ್ತೀನಿ, ಹೋಗ್ತೀನಿ'' ಎಂದು ಯಜಮಾನ ದರ್ಶನ್ ತಮ್ಮ ಬಗ್ಗೆ ಇರೋ ಅಪಪ್ರಚಾರದ ಬಗ್ಗೆ ಸ್ಪಷ್ಟನೆ ನೀಡಿದ್ರು.

  ದರ್ಶನ್ ಗೆ ಇರೋ ಕ್ರೇಜ್ ನೋಡಿ ಬೆರಗಾದ್ರು ನಿರ್ಮಾಪಕಿ ಶೈಲಜಾ

  English summary
  Kannada actor darshan has react about his gossip with producers. He was reveals about the reason behind the darshan and producer commitment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X