»   » 'ರಾಮ್ ಲೀಲಾ' ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್

'ರಾಮ್ ಲೀಲಾ' ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್

Posted By:
Subscribe to Filmibeat Kannada

'ಮಸ್ತ್ ಮಜಾ ಮಾಡಿ', 'ಅಪ್ಪು ಪಪ್ಪು', 'ಸ್ನೇಹಿತರು' ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಸೌಂದರ್ಯ ಜಗದೀಶ್ ಅವರ ಬಹುನಿರೀಕ್ಷಿತ ಚಿತ್ರ 'ರಾಮ್ ಲೀಲಾ'. ಚಿರಂಜೀವಿ ಸರ್ಜಾ ಮತ್ತು ಅಮೂಲ್ಯ ಜೋಡಿಯಾಗಿ ನಟಿಸಿರುವ ಈ ಚಿತ್ರದ ಟ್ರೈಲರ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು.

ನಿನ್ನೆ (ಅಕ್ಟೋಬರ್ 1) ರಂದು ನಡೆದ ಸಮಾರಂಭದಲ್ಲಿ ಟ್ರೈಲರ್ ಬಿಡುಗಡೆ ಮಾಡಿದ ದರ್ಶನ್, ಚಿತ್ರದ ನಿರ್ಮಾಪಕರಾದ ಸೌಂದರ್ಯ ಜಗದೀಶ್, ನಿರ್ದೇಶಕ ವಿಜಯ್ ಕಿರಣ್ ಮತ್ತು ಇಡೀ ಚಿತ್ರತಂಡಕ್ಕೆ ಶುಭ ಕೋರಿದರು. ಅಲ್ಲದೆ, 'ರಾಮ್ ಲೀಲಾ' ಚಿತ್ರ ಶತದಿನೋತ್ಸವ ಆಚರಿಸಲಿ ಅಂತ ಹಾರೈಸಿದರು.

ram-leela

'ರಾಮ್ ಲೀಲಾ' ಹೆಸರು ಕೇಳಿದಾಕ್ಷಣ, ಇದು ಬಾಲಿವುಡ್ ಬಾಕ್ಸ್ ಆಫೀಸ್ ಲೂಟಿ ಮಾಡಿದ 'ರಾಮ್ ಲೀಲಾ' ಚಿತ್ರದ ರೀಮೇಕ್ ಅಂತ ಭಾವಿಸಬೇಕಿಲ್ಲ. ಬದಲಾಗಿ, ಟಾಲಿವುಡ್ ಅಂಗಳದಲ್ಲಿ ಅಭೂತಪೂರ್ವ ಯಶಸ್ಸು ದಾಖಲಿಸಿದ 'ಲೌಕ್ಯಂ' ಚಿತ್ರದ ರೀಮೇಕ್. [ಕನ್ನಡದ 'ರಾಮ್ ಲೀಲಾ'ದಲ್ಲಿ ಚಿರಂಜೀವಿ ಸರ್ಜಾ-ಅಮೂಲ್ಯ]

'ರಾಮ್ ಲೀಲಾ' ಮೂಲಕ ಮೊಟ್ಟ ಮೊದಲ ಬಾರಿಗೆ ಆನ್ ಸ್ಕ್ರೀನ್ ನಲ್ಲಿ ಚಿರಂಜೀವಿ ಸರ್ಜಾ ಮತ್ತು ಅಮೂಲ್ಯ ಒಂದಾಗಿದ್ದಾರೆ. ಅನೂಪ್ ರುಬೆನ್ಸ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ನೃತ್ಯ ಸಂಯೋಜನೆ, ರವಿ ವರ್ಮಾ ಸಾಹಸ ಚಿತ್ರಕ್ಕಿದೆ.

English summary
Kannada Actor Darshan has released Chiranjeevi Sarja and Amulya starrer Kannada Movie 'Ram Leela' trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada