For Quick Alerts
  ALLOW NOTIFICATIONS  
  For Daily Alerts

  ದರ್ಶನ್ ತಂದೆಗೆ ಕಿಡ್ನಿ ಸಮಸ್ಯೆಯಾದಾಗ ಕಾಪಾಡಿತ್ತು ಈ ಸಂಸ್ಥೆ

  |
  ದರ್ಶನ್ ತಂದೆಗೆ ಕಿಡ್ನಿ ಸಮಸ್ಯೆಯಾದಾಗ ಕಾಪಾಡಿತ್ತು ಈ ಸಂಸ್ಥೆ..! | FILMIBEAT KANNADA

  ಮೈಸೂರಿನ ಸುತ್ತೂರಿನಲ್ಲಿ ಜಾತ್ರೆ ಶುರುವಾಗಿದೆ. ಇಂದು ಜಾತ್ರೆಯ ಎರಡನೇ ದಿನವಾಗಿದೆ. ನಿನ್ನೆ ಜಾತ್ರೆ ಅದ್ದೂರಿಯಾಗಿ ಪ್ರಾರಂಭವಾಗಿದೆ.

  ನಿನ್ನೆ ಕಾರ್ಯಕ್ರಮದ ಉದ್ಘಾಟನೆಯಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ನಟ ದರ್ಶನ್ ಕಾರ್ಯಕ್ರಮಕ್ಕೆ ತಾರಾ ಮೆರಗು ನೀಡಿದರು. ಅಭಿಮಾನಿಗಳ ಸಮ್ಮುಖದಲ್ಲಿ ಅನೇಕ ವಿಚಾರಗಳನ್ನು ದಾಸ ಹಂಚಿಕೊಂಡರು.

  ಕಾರನ್ನು ಫಾಲೋ ಮಾಡಿಕೊಂಡು ಹೋದ ಅಭಿಮಾನಿಗೆ 'ನಮಸ್ಕಾರ' ಎಂದ ದರ್ಶನ್.!

  ಸುತ್ತೂರು ಸಂಸ್ಥೆಗೆ ಬಗ್ಗೆ ಬಹಳ ಅಭಿಮಾನ ಹೊಂದಿರುವ ದರ್ಶನ್ ಆ ಸಂಸ್ಥೆ ಹಿಂದೆ ಮಾಡಿದ ಸಹಾಯವನ್ನು ನೆನೆದರು. ಅಂದಹಾಗೆ, ಈ ಕಾರ್ಯಕ್ರಮದಲ್ಲಿ ದರ್ಶನ್ ಆಡಿದ ಮಾತುಗಳು ಮುಂದಿವೆ ಓದಿ...

  ಜಿ ಎಸ್ ಎಸ್ ಜೊತೆಗೆ ಅವಿನಾಭಾವ ಸಂಬಂಧ

  ಜಿ ಎಸ್ ಎಸ್ ಜೊತೆಗೆ ಅವಿನಾಭಾವ ಸಂಬಂಧ

  ''ಎಲ್ಲ ಪೂಜ್ಯರಿಗೆ ನಮಸ್ಕಾರ. ಒಮ್ಮೆ ಬುದ್ದಿಯವರು ಸಿಕ್ಕು ಕಾರ್ಯಕ್ರಮ ಇದೆ ನೀನು ಬರಬೇಕು ಎಂದು ಹೇಳಿದ್ದರು. ಯಾವಾಗ ಇದ್ದರೂ ಹೇಳಿ ಬಂದೆ ಬರುತ್ತೇನೆ ಎಂದಿದೆ. ಸುತ್ತೂರು ನನಗೆ ಹಿಂದೆಯಿಂದಲೂ ಗೊತ್ತಿದೆ. ದರ್ಶನ್ ಗೆ ಜಿ ಎಸ್ ಎಸ್ ಸಂಸ್ಥೆ ಜೊತೆಗೆ ಅವಿನಾಭಾವ ಸಂಬಂಧ ಇದೆ.'' - ದರ್ಶನ್, ನಟ

  ತಂದೆಗೆ ಕಿಡ್ನಿ ಸಮಸ್ಯೆ ಆದಾಗ

  ತಂದೆಗೆ ಕಿಡ್ನಿ ಸಮಸ್ಯೆ ಆದಾಗ

  ''ನಾನೊಬ್ಬ ಜೆಎಸ್ ಎಸ್ ವಿದ್ಯಾರ್ಥಿ. ಇಲ್ಲಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮೊ ಮಾಡಿದ್ದೆ. ಆದರೆ, ಆರು ತಿಂಗಳಿಗೆ ವಾಪಾಸಾದೆ, ನನ್ನ ಯೋಗ್ಯತೆ ಅಷ್ಟೇ ಇತ್ತು. ಅದಕ್ಕಿಂತ ಹೆಚ್ಚಾಗಿ, ನನ್ನ ತಂದೆಗೆ ಕಿಡ್ನಿ ಸಮಸ್ಯೆ ಆದಾಗ ಆರ್ಥಿಕವಾಗಿ ಜೆಎಸ್ಎಸ್ ಆಸ್ಪತ್ರೆ ಬಹಳ ಸಹಾಯ ಮಾಡಿದೆ. ಎಂದಿಗೂ ಅವರಿಗೆ ಚಿರಋಣಿ ಆಗಿರುತ್ತೇನೆ.'' - ದರ್ಶನ್, ನಟ

  'ಬಜಾರ್' ಹೀರೋಗೆ ಪ್ರಾಂಕ್ ಕಾಲ್ ಮಾಡಿ ಕಾಲೆಳೆದ ದರ್ಶನ್

  ದನಗಳನ್ನು ನೋಡುವ ಆಸೆ

  ದನಗಳನ್ನು ನೋಡುವ ಆಸೆ

  "ನಾನು ಚಿಕ್ಕ ಪುಟ್ಟ ಪಾತ್ರಗಳನ್ನ ಮಾಡಿದ್ದಕ್ಕೆ ಇಲ್ಲಿ ಕರೆದು ಕೂರಿಸಿದ್ದೀರಿ. ನಿಮ್ಮ ಪ್ರೀತಿ, ಅಭಿಮಾನ ಸದಾ ಹೀಗೆ ಇರಲಿ. ನಾನೊಬ್ಬ ಕಾಮಾನ್ ಮ್ಯಾನ್ ಆಗಿದ್ದರೆ ಜಾತ್ರೆಯಲಿ ಆರಾಮಾಗಿ ಓಡಾಡಿಕೊಂಡು, ಇಲ್ಲಿ ಇರುವ ದನಗಳನ್ನು ನೋಡಿಕೊಂಡು ಬರುತ್ತಿದೆ. ಆದರೆ, ಈಗ ನೀವು ನನಗೆ ಹೋಗಲು ಬಿಡುವುದಿಲ್ಲ.'' - ದರ್ಶನ್, ನಟ

  ವಿದ್ಯಾರ್ಥಿಗಳಿಗೆ ಬುದ್ದಿ ಮಾತು

  ವಿದ್ಯಾರ್ಥಿಗಳಿಗೆ ಬುದ್ದಿ ಮಾತು

  ''ಎಲ್ಲ ವಿದ್ಯಾರ್ಥಿಗಳಿಗೆ ಹೇಳುವುದು ಒಂದೇ. ಪರೀಕ್ಷೆ ಹತ್ತಿರ ಬರುತ್ತಿದೆ. ಓದದೆ ಇರುವ ಕಷ್ಟ ನನಗೆ ಗೊತ್ತಿದೆ. ಒಂದು ಪದವಿ ಇದ್ದರೆ, ಅದು ಒಂದು ಕೋಟಿ ರೂಪಾಯಿ ಇದ್ದ ಹಾಗೆ. ಎಲ್ಲರೂ ಚೆನ್ನಾಗಿ ಓದಿ. ನಮ್ಮ ಮೇಲಿನ ಪ್ರೀತಿ ಪ್ರೋತ್ಸಾಹ ಹೀಗೆ ಇರಲಿ. ನಮಸ್ಕಾರ'' - ದರ್ಶನ್, ನಟ

  English summary
  Kannada actor Darshan remember his father Thoogudeepa Srinivas in suttur mutt jatre program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X