For Quick Alerts
  ALLOW NOTIFICATIONS  
  For Daily Alerts

  ಡೈಲಾಗ್ ಇಲ್ಲದ ಟ್ರೈಲರ್ ಹಿಂದಿನ ಕಥೆ ಬಿಚ್ಚಿಟ್ಟ ದರ್ಶನ್!

  By Bharath Kumar
  |

  ದಾಸ ದರ್ಶನ್ ಅವರ ಪ್ರತಿಯೊಂದು ಚಿತ್ರದಲ್ಲೂ ಜಬರ್ದಸ್ತ್ ಡೈಲಾಗ್ ಗಳಿರುತ್ತೆ. ನಿಂತ್ರು ಕುಂತ್ರು ದರ್ಶನ್ ಬಾಯಲ್ಲಿ ಬರುವ ಡೈಲಾಗ್ ಗಳು ಅವರ ಫ್ಯಾನ್ಸ್ ಗೆ ಸಖತ್ ಕಿಕ್ ಕೊಡುತ್ತೆ. ಅದೇ ತರ 'ಚಕ್ರವರ್ತಿ' ಚಿತ್ರದಲ್ಲೂ ಡೈಲಾಗ್ ಗಳ ಸುರಿಮಳೆ ಇದ್ದೇ ಇರುತ್ತೆ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಆದ್ರೆ, 'ಚಕ್ರವರ್ತಿ' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಒಂದೇ ಒಂದು ಡೈಲಾಗ್ ಕೂಡ ಇಲ್ಲ.[ಟ್ರೈಲರ್ ಸ್ಪೆಷಾಲಿಟಿ: ಭರ್ಜರಿ ಬೇಟೆಗೆ ಸಿದ್ಧವಾದ 'ಚಕ್ರವರ್ತಿ' ದರ್ಶನ್]

  ಹೇಳಿ ಕೇಳಿ 'ಚಕ್ರವರ್ತಿ' ಚಿತ್ರವನ್ನ ನಿರ್ದೇಶನ ಮಾಡಿರುವುದೇ ಒಬ್ಬ ಡೈಲಾಗ್ ರೈಟರ್. ಆದ್ರೆ, ಟ್ರೈಲರ್ ನಲ್ಲಿ ಒಂದೇ ಒಂದು ಡೈಲಾಗ್ ಕೂಡ ಇಲ್ಲ ಯಾಕೆ?....ಇದು ಇಡೀ ಗಾಂಧಿನಗರವನ್ನ ಕಾಡುತ್ತಿತ್ತು. ನಿಜಾ ಏನಪ್ಪಾ ಅಂದ್ರೆ, ಡೈಲಾಗ್ ಇಲ್ಲದ 'ಚಕ್ರವರ್ತಿ' ಟ್ರೈಲರ್ ರಿಲೀಸ್ ಮಾಡಲು ಕಾರಣನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತೆ. ಯಾಕೆ ಅಂತ ಮುಂದೆ ಓದಿ.....

  ಇಡೀ ಸಿನಿಮಾ ಒಬ್ಬ ನಾಯಕನಿಂದ ಆಗಲ್ಲ!

  ಇಡೀ ಸಿನಿಮಾ ಒಬ್ಬ ನಾಯಕನಿಂದ ಆಗಲ್ಲ!

  ''ನಾವು ಟೀಸರ್ ಮಾಡಿದಾಗ ಮೂರು ಶೇಡ್ ಡಿಫ್ರೆಂಟ್ ಆಗಿ ಮಾಡಿದ್ವಿ. ಇಡೀ ಸಿನಿಮಾ ಒಬ್ಬ ನಾಯಕ ನಟನಿಂದ ಆಗಲ್ಲ. ಅದರಲ್ಲಿ ಇರುವ ಪಾತ್ರಗಳು ಜನಗಳಿಗೆ ಗೊತ್ತಾಗಬೇಕು'' - ದರ್ಶನ್, ನಟ [ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಚಕ್ರವರ್ತಿ' ]

  ಟ್ರೈಲರ್ ನಲ್ಲಿ ಎಲ್ಲರು ಕಾಣಬೇಕು!

  ಟ್ರೈಲರ್ ನಲ್ಲಿ ಎಲ್ಲರು ಕಾಣಬೇಕು!

  ''ಪ್ರೋಮೋದಲ್ಲಿ ಅಷ್ಟು ಜನ ಇರಬೇಕು. ಯಾರೊಬ್ಬರದ್ದು ಒಂದೇ ಒಂದು ಪ್ರೇಮ್ ಮಿಸ್ ಆಗಬಾರದು ಎಂದು ಮೊದಲೇ ನಿರ್ಧರಿಸಿದ್ವಿ. ಅದಕ್ಕೆ ತಕ್ಕ ಹಾಗೆ ಟ್ರೈಲರ್ ಕಟ್ ಆಗಿದೆ. ಹೀಗೆ ಬಂದು ಹಾಗೆ ಹೋಗ್ಬಹುದು. ಆದ್ರೆ, ಇವರು ಇದ್ದಾರೆ ಅಂತ ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ'' - ದರ್ಶನ್, ನಟ ['ಮಲ್ಟಿಪ್ಲೆಕ್ಸ್' ಇತಿಹಾಸದಲ್ಲಿ ಯಾರು ಮಾಡಿರದ ದಾಖಲೆ ಬರೆದ 'ಚಕ್ರವರ್ತಿ']

  ಹೊಸತನ ಸೃಷ್ಟಿಯಾಯಿತು

  ಹೊಸತನ ಸೃಷ್ಟಿಯಾಯಿತು

  ''ಚಿಂತನ್ ಒಬ್ಬ ಬರಹಗಾರ. ಸಂಭಾಷಣೆಕಾರ. ಹೀಗಾಗಿ ಡೈಲಾಗ್ ಜೋರಾಗಿರುತ್ತೆ ಅಂತ ಊಹೆ ಮಾಡಿದವರು ಹೆಚ್ಚಿದ್ದಾರೆ. ಆದ್ರೆ, ಟ್ರೈಲರ್ ನಲ್ಲಿ ಡೈಲಾಗ್ ಬಿಟ್ಟಿಲ್ಲ. ಈಗ ಅದೇ ಹೊಸತು ಆಯಿತು'' - ದರ್ಶನ್, ನಟ ['ಚಕ್ರವರ್ತಿ' ಟಿಕೆಟ್ ಈಗಲೇ ಬುಕ್ ಮಾಡಿ, ಸ್ವಲ್ಪ ಲೇಟಾದ್ರು ನಿರಾಸೆ ಗ್ಯಾರೆಂಟಿ!]

  ಡೈಲಾಗ್ ಧಮಾಕ ಸಿನಿಮಾದಲ್ಲಿ ನೋಡಿ

  ಡೈಲಾಗ್ ಧಮಾಕ ಸಿನಿಮಾದಲ್ಲಿ ನೋಡಿ

  ಈ ಮೂಲಕ ಚಿಂತನ್ ಅವರ ಡೈಲಾಗ್ ಧಮಾಕ ಹಾಗೂ ದರ್ಶನ್ ಅವರ ಮಾಸ್ ಡಿಲವರಿ ಹೇಗಿರುತ್ತೆ ಅಂತ ಸಿನಿಮಾದಲ್ಲಿ ನೋಡಬೇಕಾಗಿದೆ. ಇದೇ ಏಪ್ರಿಲ್ 14 ರಂದು ರಾಜ್ಯಾದ್ಯಂತ 'ಚಕ್ರವರ್ತಿ' ಬಿಡುಗಡೆಯಾಗುತ್ತಿದೆ. ['ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ']

  English summary
  Challenging Star Darshan Reveal's Secret of Chakravarthy Trailer in Pre Release Pressmeet. why chakravarthy trailer released without dialogues. Here is the Answer From Darshan

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X