»   » ದರ್ಶನ್ '50'ನೇ ಚಿತ್ರದಲ್ಲಿ ಮತ್ತೊಂದು ಮೆಗಾ ಟ್ವಿಸ್ಟ್!

ದರ್ಶನ್ '50'ನೇ ಚಿತ್ರದಲ್ಲಿ ಮತ್ತೊಂದು ಮೆಗಾ ಟ್ವಿಸ್ಟ್!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರದ ಬಗ್ಗೆ ದಿನ ಕಳೆದಂತೆ ಒಂದೊಂದು ಹೊಸ ಸುದ್ದಿಗಳು ಹರಿದಾಡುತ್ತಿದೆ. ಮೊನ್ನೆಯವರೆಗೂ ದರ್ಶನ್ ಅವರ 50 ನೇ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ, ಇದೀಗ 'ಡಿ-ಬಾಸ್'ನ 50 ನೇ ಚಿತ್ರಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.[ದರ್ಶನ್ '50'ನೇ ಚಿತ್ರ ಸ್ನೇಹಿತರಿಗೆ ಮೀಸಲು!]

ಹೌದು, ದಾಸನ 50ನೇ ಚಿತ್ರ ಮತ್ತೆ ಬದಲಾಗಿದೆ. ದರ್ಶನ್ ಅವರ ಹಾಫ್ ಸೆಂಚುರಿ ಸಿನಿಮಾ 'ಪೌರಾಣಿಕ' ಚಿತ್ರವಾಗಿರಲಿದೆಯಂತೆ. 'ಸಂಗೊಳ್ಳಿ ರಾಯಣ್ಣ' ಅಂತಹ ಐತಿಹಾಸಿಕ ಚಿತ್ರದ ನಂತರ ಹೊಸ ಸಾಹಸಕ್ಕೆ ಕೈಹಾಕಿರುವ ಸಾರಥಿ, ಈಗ 'ಕುರುಕ್ಷೇತ್ರ'ಕ್ಕೆ ಸಜ್ಜಾಗಿದ್ದಾರಂತೆ. ಮುಂದೆ ಓದಿ......

ದರ್ಶನ್ 50ನೇ ಚಿತ್ರ 'ಕುರುಕ್ಷೇತ್ರ'!

ಗಾಂಧಿನಗರದಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಸಿನಿಮಾ 'ಕುರುಕ್ಷೇತ್ರ'.['ಕುರುಕ್ಷೇತ್ರ' ಚಿತ್ರದಲ್ಲಿ ಟಾಪ್-5 ನಟರು: ಸುದೀಪ್ ಕಡೆಯಿಂದ ಡೌಟ್ ಕ್ಲಿಯರ್!]

ಪೌರಾಣಿಕ ಚಿತ್ರಕ್ಕೆ ದರ್ಶನ್ ನಾಯಕ!

'ಸಂಗೊಳ್ಳಿ ರಾಯಣ್ಣ' ಅಂತಹ ಐತಿಹಾಸಿಕ ಸಿನಿಮಾ ಮಾಡಿದ್ದ ದರ್ಶನ್, 'ಕುರುಕ್ಷೇತ್ರ' ಹೆಸರಿನಲ್ಲಿ ಈಗ ಪೌರಾಣಿಕ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅಂದ್ಹಾಗೆ, 'ಕುರುಕ್ಷೇತ್ರ' ಮಹಾಭಾರತದ ಕಥೆಯಾಧರಿತ ಚಿತ್ರವಾಗಿದ್ದು, ಪಾಂಡವರು ಮತ್ತು ಕೌರವರ ಸುತ್ತಾ ಕಥೆ ಎಣೆಯಲಾಗಿದೆಯಂತೆ. ಈ ದೊಡ್ಡ ಪ್ರಾಜೆಕ್ಟ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಪ್ರಮುಖ ಪಾತ್ರವನ್ನ ನಿರ್ವಹಿಸಲಿದ್ದಾರಂತೆ.

'ಕುರುಕ್ಷೇತ್ರ'ದಲ್ಲಿ ದರ್ಶನ್ ಪಾತ್ರ?

'ಕುರುಕ್ಷೇತ್ರ'ದಲ್ಲಿ ದರ್ಶನ್ ಅವರದ್ದು 'ದುರ್ಯೋಧನ'ನ ಪಾತ್ರವಂತೆ. ಉಳಿದಂತೆ ಚಿತ್ರದಲ್ಲಿ ಪಾಂಡವರು, ಕೌರವರು, ದ್ರೌಪದಿ, ಭೀಷ್ಮ, ಅಭಿಮನ್ಯು ಸೇರಿದಂತೆ ಬಹುತೇಕ ಎಲ್ಲ ಪಾತ್ರಗಳು ಈ ಚಿತ್ರದಲ್ಲಿ ಮೂಡಿ ಬರಲಿದೆಯಂತೆ.

ನಿರ್ಮಾಪಕ ಮುನಿರತ್ನ ಕಡೆಯಿಂದ ಕನ್‌ ಫರ್ಮ್!

ಇಂತಹ ದೊಡ್ಡ ಚಿತ್ರವನ್ನ ನಿರ್ಮಾಣ ಮಾಡುತ್ತಿರುವುದು ನಿರ್ಮಾಪಕ ಹಾಗೂ ಶಾಸಕ ಮುನಿರತ್ನ. ಇತ್ತೀಚೆಗಷ್ಟೇ ಮುನಿರತ್ನ ಅವರೇ 'ಬಿ-ಟಿವಿ' ಸುದ್ದಿ ವಾಹಿನಿಗೆ ಕುರುಕ್ಷೇತ್ರ ಹಾಗೂ ದರ್ಶನ್ ಅವರ ಪಾತ್ರದ ಬಗ್ಗೆ ಖಚಿತ ಪಡಿಸಿದ್ದಾರೆ.

50ನೇ ಚಿತ್ರದಲ್ಲಿ ಮತ್ತೆ ಮತ್ತೆ ಟ್ವಿಸ್ಟ್!

ಇಲ್ಲಿಯವರೆಗೂ ದರ್ಶನ್ ಅವರ 50ನೇ ಚಿತ್ರದ ವಿಷ್ಯದಲ್ಲಿ ತುಂಬಾ ಬದಲಾವಣೆಗಳಾಗಿವೆ. ಮೊದ ಮೊದಲು ದಿನಕರ್ ತೂಗುದೀಪ ನಿರ್ದೇಶನದ 'ಸರ್ವಾಂತರ್ಯಾಮಿ' 50ನೇ ಚಿತ್ರ ಎಂದು ಘೋಷಣೆ ಆಗಿತ್ತು. ಆಮೇಲೆ ಎಂ.ಡಿ.ಶ್ರೀಧರ್ ಸಾರಥ್ಯ ವಹಿಸಲಿದ್ದಾರೆ ಎನ್ನಲಾಯಿತು. ತದ ನಂತರ ತರುಣ್ ಸುಧೀರ್ ಪಾಲಾಗಿದೆ ಎಂಬುದು ಸುದ್ದಿ ಆಯಿತು. ಈಗ 'ಕುರುಕ್ಷೇತ್ರ' ಆಗಬಹುದು ಎನ್ನಲಾಗುತ್ತಿದೆ.['ದಾಸ' ದರ್ಶನ್ ಬಗ್ಗೆ ಹರಿದಾಡುತ್ತಿದೆ ಹೊಸ ಸುದ್ದಿ: ನಿಜವೋ, ಸುಳ್ಳೋ.?]

'ಡಿ-ಬಾಸ್' 50ನೇ ಚಿತ್ರ ಯಾವುದು?

ದರ್ಶನ್ ಈ ಎಲ್ಲ ಸಿನಿಮಾಗಳನ್ನ ಮಾಡುವುದು ಕನ್ ಫರ್ಮ್. ಆದ್ರೆ, 50ನೇ ಸಿನಿಮಾ ಯಾವುದು ಎಂಬುದೇ ಸದ್ಯದ ಕುತೂಹಲ. 'ಚೌಕ' ಚಿತ್ರದ ನಿರ್ದೇಶಕ ತರುಣ್ ಸುಧೀರ್ ದರ್ಶನ್ ಅವರ 50ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರ? ಅಥವಾ ಮುನಿರತ್ನ ನಿರ್ಮಾಣ ಮಾಡಲಿರುವ 'ಕುರುಕ್ಷೇತ್ರ' ದರ್ಶನ್ ಅವರ 50ನೇ ಸಿನಿಮಾ ಆಗುತ್ತಾ ಎಂಬುದಕ್ಕೆ ಇನ್ನೇನೂ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

English summary
According to Source, Challenging Star Darshan's 50th Movie Called 'Kurukshetra'. The Movie Produced by Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada