»   » ಚಾಲೆಂಜಿಂಗ್ ಸ್ಟಾರ್ 'ಐರಾವತ' ಚಿತ್ರದ ಟೈಟಲ್ ಚೇಂಜ್

ಚಾಲೆಂಜಿಂಗ್ ಸ್ಟಾರ್ 'ಐರಾವತ' ಚಿತ್ರದ ಟೈಟಲ್ ಚೇಂಜ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಭಾರಿ ಬಜೆಟ್ ನ ಬಹುನಿರೀಕ್ಷಿತ ಚಿತ್ರ 'ಐರಾವತ'. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು ಇದೀಗ ಟೈಟಲ್ ನಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಅದೇನೆಂದರೆ ಐರಾವತ ಚಿತ್ರದ ಜೊತೆಗೆ 'ಮಿಸ್ಟರ್' ಸೇರಿಸಲಾಗಿದೆ.

'ಐರಾವತ' ಎಂದರೆ ಪ್ರೇಕ್ಷಕರಿಗೆ ಒಂದು ಸಣ್ಣ ಅನುಮಾನ ಮೂಡುತ್ತದೆ. ಇದು ನಾಮಪದವೋ ಅಥವಾ ಗುಣವಾಚಕವೋ ಎಂಬ ಸಂದೇಹ ಕಾಡುತ್ತಿತ್ತು. ಈ ಸಂದೇಹಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಇದು ಗುಣವಾಚಕವಲ್ಲ ಇದೊಂದು ನಾಮಪದ ಎಂಬ ಅರ್ಥ ಬರಲು 'ಮಿಸ್ಟರ್ ಐರಾವತ' ಎಂದಿಡಲಾಗಿದೆ. [ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಸ್ ಪ್ಯಾಕ್ ಕಸರತ್ತು?]


Darshan's Airavata title changed

ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯಶಸ್ವಿ ನಿರ್ದೇಶಕ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕಾಗಿ ದರ್ಶನ್ ಸಿಕ್ಸ್ ಪ್ಯಾಕ್ ಕಸರತ್ತನ್ನೂ ಮಾಡಿದ್ದಾರೆ. ಖಾಕಿ ಖದರ್ ನಲ್ಲಿರುವ 'ಮಿ.ಐರಾವತ' ಏನೆಲ್ಲಾ ಮಾಡಲಿದ್ದಾನೆ ಎಂಬುದನ್ನು ಕಾದುನೋಡಬೇಕು.


ಇನ್ನೇನು 20 ದಿನಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದ್ದು ಒಂದೆರಡು ಹಾಡುಗಳ ಚಿತ್ರೀಕರಣ ಉಳಿದಿದೆ. ಅದ್ದೂರಿ ಹಾಗೂ ರಾಟೆ ಚಿತ್ರಗಳ ಬಳಿಕ ಎಪಿ ಅರ್ಜುನ್ ಈ ಬಾರಿ ಯಾವ ಸಬ್ಜೆಕ್ಟ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂಬ ಕುತೂಹಲ ಸ್ಯಾಂಡಲ್ ವುಡ್ ನಲ್ಲಿ ಮನೆಮಾಡಿದೆ.


ಈ ಚಿತ್ರದಲ್ಲಿ ದರ್ಶನ್ ಪುತ್ರ ವಿನೀಶ್ ಇದೇ ಮೊದಲ ಬಾರಿಗೆ ಬಣ್ಣಹಚ್ಚಿದ್ದು, ಅಭಿಮಾನಿಗಳಿಗೆ ಅದೊಂದು ಪ್ರಮುಖ ಆಕರ್ಷಣೆಯಾಗಲಿದೆ. ಒಟ್ಟಾರೆ ಐರಾವತ ಚಿತ್ರ ನಾನಾ ಕಾರಣಗಳಿಂದಾಗಿ ಈ ವರ್ಷ ಸದ್ದು ಮಾಡಿದ ಚಿತ್ರ. (ಏಜೆನ್ಸೀಸ್)

English summary
Challenging Star Darsha's upcoming movie Airavata titled has been changed as 'Mr. Airavata'. Though the exact reason behind the title change is not known, however Airavata is the character's name and not an adjective.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada