ಜುಲೈ 30ಕ್ಕಿಲ್ಲ ದರ್ಶನ್ 'ಕುರುಕ್ಷೇತ್ರ', ಮತ್ಯಾವಾಗ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ ಮಹಾತ್ವಕಾಂಕ್ಷಿಯ ಚಿತ್ರ ಕುರುಕ್ಷೇತ್ರ, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಜುಲೈ 30 ರಂದು ಸೆಟ್ಟೇರಬೇಕಿತ್ತು. ಆದ್ರೀಗ, ಮತ್ತಷ್ಟು ದಿನ ಮುಂದಕ್ಕೆ ಹೋಗಿದೆ.
ಅದನ್ನ ಹೊರತು ಪಡಿಸಿ ಈ ಹಿಂದೆ ನಿರ್ಧರಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಕುರುಕ್ಷೇತ್ರ' ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನಡೆಯಲಿದೆ.
ಹಾಗಿದ್ರೆ, ಕುರುಕ್ಷೇತ್ರ ಚಿತ್ರದ ಮುಹೂರ್ತ ಯಾವಾಗ? ಮುಹೂರ್ತ ದಿನ ಮುಂದೂಡಿದ್ದೇಕೆ ಎಂದು ಮುಂದೆ ಓದಿ....

ಜುಲೈ 3೦ಕ್ಕಿಲ್ಲ 'ಕುರುಕ್ಷೇತ್ರ'
ಈ ಹಿಂದೆ ನಿಗದಿಯಾಗಿರುವಂತೆ ಜುಲೈ 30ಕ್ಕೆ ಕುರುಕ್ಷೇತ್ರ ಚಿತ್ರದ ಮುಹೂರ್ತ ಸಮಾರಂಭ ನಡೆಯವುದಿಲ್ಲ. ಯಾಕಂದ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಯ ಹೊಂದಾಣಿಕೆಗೋಸ್ಕರ ಒಂದು ವಾರ ಮುಂದಕ್ಕೆ ಹೋಗಿದೆ.

ಆಗಸ್ಟ್ 6 ರಂದು ಅದ್ದೂರಿ ಚಾಲನೆ
ಆಗಸ್ಟ್ 6 ರಂದು 'ಕುರುಕ್ಷೇತ್ರ' ಚಿತ್ರದ ಆರಂಭೋತ್ಸವ ಗ್ರ್ಯಾಂಡ್ ಆಗಿ ನೆರವೇರಲಿದೆ. ಈ ಸಮಾರಂಭಕ್ಕೆ ಚಿತ್ರರಂಗದ ಹಾಗೂ ರಾಜಕೀಯ ಗಣ್ಯರು ಆಗಮಿಸಲಿದ್ದಾರೆ.

ದುರ್ಯೋಧನನ ಫಸ್ಟ್ ಲುಕ್
ವಿಶೇಷ ಅಂದ್ರೆ, ಆಗಸ್ಟ್ 6 ಕ್ಕೆ ದುರ್ಯೋಧನ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರಂತೆ. ಈ ಮೂಲಕ ಚಿತ್ರದ ಶುರುವಿನಲ್ಲೇ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಂಭ್ರಮ ದೊಡ್ಡ ಮಟ್ಟದಾಗಿದೆ.

ಜುಲೈ 27ಕ್ಕೆ ಸಣ್ಣ ಪೂಜೆ
ಇನ್ನುಳಿದಂತೆ ಜುಲೈ 27 ರಂದು ನಿರ್ಮಾಪಕ ಮುನಿರತ್ನ ಅವರು 'ಕುರುಕ್ಷೇತ್ರ' ಚಿತ್ರದ ಸ್ಕ್ರಿಪ್ಟ್ ಪೂಜೆಯನ್ನ ಸಂಪ್ರದಾಯವಾಗಿ ನೆರವೇರಿಸಲಿದ್ದಾರಂತೆ.


Click it and Unblock the Notifications











