»   » ದರ್ಶನ್ 51ನೇ ಚಿತ್ರಕ್ಕೂ ಭರ್ಜರಿ ತಯಾರಿ, ಡೈರೆಕ್ಟರ್ ಫಿಕ್ಸ್

ದರ್ಶನ್ 51ನೇ ಚಿತ್ರಕ್ಕೂ ಭರ್ಜರಿ ತಯಾರಿ, ಡೈರೆಕ್ಟರ್ ಫಿಕ್ಸ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕನ್ನಡದಲ್ಲಿ ಹೆಚ್ಚು ಬ್ಯುಸಿ ಇರುವ ನಟ. ಮಿಲನ ಪ್ರಕಾಶ್ ನಿರ್ದೇಶನ 'ತಾರಕ್' ಚಿತ್ರೀಕರಣವನ್ನ ಈಗ ತಾನೆ ಮುಗಿಸಿದ್ದಾರೆ. ಈಗ ವೃತ್ತಿ ಜೀವನದ ಮೈಲುಗಲ್ಲು ಚಿತ್ರವಾದ 'ಕುರುಕ್ಷೇತ್ರ'ವನ್ನ ಶುರು ಮಾಡಲಿದ್ದಾರೆ. ಹೀಗಿರುವಾಗ, ಈ ವರ್ಷ ದರ್ಶನ್ ಮತ್ಯಾವ ಚಿತ್ರವನ್ನ ಕೈಗೆತ್ತಿಕೊಳ್ಳುವುದಿಲ್ಲ.

ಆದ್ರೆ, ಅಷ್ಟರಲ್ಲಾಗಲೇ ದರ್ಶನ್ ಅವರ 51ನೇ ಚಿತ್ರ ಹಾಗೂ 52ನೇ ಚಿತ್ರಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಸಂದೇಶ ನಾಗರಾಜ್ ಹಾಗೂ ಬಿ.ಸುರೇಶ್ ಅವರು ದಾಸನ ಮುಂದಿನ ಸಿನಿಮಾಗಳನ್ನ ನಿರ್ಮಾಣ ಮಾಡಲಿದ್ದಾರೆ. ಆದ್ರೆ, ಇವರೆಡರಲ್ಲಿ ಯಾವ ಸಿನಿಮಾ ಮೊದಲು ಶುರುವಾಗುತ್ತೊ ಗೊತ್ತಿಲ್ಲ. ಆದ್ರೆ, ಸಂದೇಶ ನಾಗರಾಜ್ ಅವರ ಚಿತ್ರ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ.

ಸಂದೇಶ್ ನಾಗರಾಜ್ ಹಾಗೂ ದರ್ಶನ್ ಕಾಂಬಿನೇಷನ್ ಸಿನಿಮಾದ ವಿಶೇಷತೆಗಳೇನು? ಮುಂದೆ ಓದಿ......

'ಐರಾವತ' ನಂತರ ಒಂದಾದ ಜೋಡಿ

2015ರಲ್ಲಿ ಬಿಡುಗಡೆಯಾದ 'ಮಿಸ್ಟರ್ ಐರಾವತ' ಚಿತ್ರದ ನಂತರ ಸಂದೇಶ್ ನಾಗರಾಜ್ ಹಾಗೂ ದರ್ಶನ್ ಜೋಡಿ ಮತ್ತೆ ಒಂದಾಗುತ್ತಿದೆ.

ಎಕ್ಸ್ ಕ್ಲೂಸಿವ್: ದರ್ಶನ್ 51ನೇ ಸಿನಿಮಾದ ಬಗ್ಗೆ ಇದ್ದ ಡೌಟ್ ಕ್ಲಿಯರ್.!

ಪವನ್ ಒಡೆಯರ್ ಡೈರೆಕ್ಷನ್

ದರ್ಶನ್ ಹಾಗೂ ಸಂದೇಶ್ ನಾಗರಾಜ್ ಜೋಡಿಯ ಚಿತ್ರಕ್ಕೆ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿದ್ದಾರಂತೆ. ಈ ವಿಷ್ಯವನ್ನ ನಿರ್ಮಾಪಕ ಸಂದೇಶ್ ನಾಗರಾಜ್ ಖಚಿತ ಪಡಿಸಿದ್ದಾರೆ.

ದರ್ಶನ್ 51ನೇ ಸಿನಿಮಾ: ಅನುಮಾನಗಳಿಗೆ ಹಾಲೆರೆದ ಈ ಫೋಟೋ.!

ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ

ದರ್ಶನ್ ಅವರಿಗೆ ಕಥೆ ಹೇಳಲಾಗಿದೆ. ಕಥೆ ಇಷ್ಟವಾಗಿದ್ದು, ಸ್ಕ್ರಿಪ್ಟ್ ವರ್ಕ್ ಶುರು ಮಾಡಲು ಸೂಚಿಸಿದ್ದಾರಂತೆ. ನಿರ್ದೇಶಕ ಪವನ್ ಒಡೆಯರ್ ಅವರೇ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡುತ್ತಿದ್ದಾರಂತೆ. ಇನ್ನು ಚಿತ್ರಕ್ಕೆ 'ಒಡೆಯರ್' ಎಂಬ ಟೈಟಲ್ ಕೂಡ ಫಿಕ್ಸ್ ಆಗಿದೆ

ಮುಂದಿನ ವರ್ಷ ಸೆಟ್ಟೇರಲಿದೆ

ಈ ವರ್ಷ ದರ್ಶನ್ ಅವರು ಸತತವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ, ಮುಂದಿನ ವರ್ಷ ಸಂದೇಶ್ ನಾಗರಾಜ್ ಹಾಗೂ ಪವನ್ ಒಡೆಯರ್ ಜುಗಲ್ ಬಂದಿಯ ಚಿತ್ರಕ್ಕೆ ಚಾಲನೆ ಸಿಗಲಿದೆಯಂತೆ.

'ಡಿ' ಬಾಸ್ 51ನೇ ಸಿನಿಮಾ ಯಾರಿಗೆ.? ಪೋಸ್ಟರ್ ತಂದಿಟ್ಟ ಅನುಮಾನ.!

English summary
Challenging star darshan and Sandesh Nagraj's Movie go on floors next year. The Movie directed by Pavan Wadeyar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada