For Quick Alerts
  ALLOW NOTIFICATIONS  
  For Daily Alerts

  ರಾಬರ್ಟ್ ಟೀಸರ್ 50 ಲಕ್ಷ ವೀಕ್ಷಣೆ: ಧನ್ಯವಾದ ಹೇಳಿದ ನಟ ದರ್ಶನ್

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರದ ಬಿಡುಗಡೆಗಾಗಿ ಕಾದು ಕುಂತಿದ್ದಾರೆ ಸಿನಿ ಅಭಿಮಾನಿಗಳು. ತರುಣ್ ಸುಧೀರ್ ಹಾಗೂ ದರ್ಶನ್ ನಿರ್ದೇಶನದ ಈ ಕಾಂಬಿನೇಷನ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿದೆ.

  ಅಕ್ಟೋಬರ್ 15ರ ನಂತರ ಚಿತ್ರಮಂದಿರಗಳು ತೆರೆಯಲು ಅನುಮತಿ ಸಿಕ್ಕಿದ್ದು, ರಿಲೀಸ್ ದಿನಾಂಕ ಘೋಷಣೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಡಿ ಬಾಸ್ ಭಕ್ತರು. ಈ ನಡುವೆ ರಾಬರ್ಟ್ ಚಿತ್ರದ ಟೀಸರ್ 5 ಮಿಲಿಯನ್ ವೀಕ್ಷಣೆ ಕಂಡಿದೆ.

  ಅಕ್ಟೋಬರ್ 9ಕ್ಕೆ ರಾಬರ್ಟ್ ಚಿತ್ರತಂಡದಿಂದ ಸರ್ಪ್ರೈಸ್ಅಕ್ಟೋಬರ್ 9ಕ್ಕೆ ರಾಬರ್ಟ್ ಚಿತ್ರತಂಡದಿಂದ ಸರ್ಪ್ರೈಸ್

  ರಾಬರ್ಟ್ ಟೀಸರ್ 5 ಮಿಲಿಯನ್ ವೀಕ್ಷಣೆ ಕಂಡ ಸಂತಸ ವ್ಯಕ್ತಪಡಿಸಿರುವ ನಟ ದರ್ಶನ್, ಪ್ರತಿಯೊಬ್ಬ ಅಭಿಮಾನಿಗೂ ತುಂಬು ಹೃದಯ ಧನ್ಯವಾದ ತಿಳಿಸಿದ್ದಾರೆ. ''ರಾಬರ್ಟ್ ಚಿತ್ರದ ಟೀಸರ್ 5Millon Views ಗೆ ಕಾರಣರಾದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು ನಿಮ್ಮ ದಾಸ ದರ್ಶನ್'' ಎಂದು ಟ್ವೀಟ್ ಮಾಡಿದ್ದಾರೆ.

  ರಾಬರ್ಟ್ ಟೀಸರ್ ಬಿಡುಗಡೆಯಾಗಿ ಏಳು ತಿಂಗಳು ಕಳೆದಿದೆ. ಫೆಬ್ರವರಿ 16 ರಂದು ಈ ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ 2 ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಸಿಕ್ಕಿದೆ.

  ಅಲೆಗಳನ್ನು ಯಾರು ತಡೆಯಲು ಆಗುವುದಿಲ್ಲ ಎಂದು Yash | Filmibeat Kannada

  ತರುಣ್ ಸುಧೀರ್ ನಿರ್ದೇಶನದ ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದಾರೆ. ಆಶಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶಿಸಿದ್ದಾರೆ. ಇನ್ನು ಅಕ್ಟೋಬರ್ 9 ರಂದು ನಿರ್ದೇಶಕ ತರುಣ್ ಸುಧೀರ್ ಹುಟ್ಟುಹಬ್ಬದ ಹಿನ್ನೆಲೆ ರಾಬರ್ಟ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಿದೆ ಚಿತ್ರತಂಡ.

  English summary
  Challening star darshan starrer Roberrt movie teaser crosses 5 million views. so, Darshan thanks to His fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X