»   » ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ !

ಶುರುವಾಯಿತು ಚಿತ್ರಮಂದಿರದ ಮುಂದೆ 'ಡಿ ಬಾಸ್' ತಾರಕೋತ್ಸವ !

Posted By:
Subscribe to Filmibeat Kannada

ದಸರ ಹಬ್ಬಕ್ಕೆ ಇನ್ನು ಮೂರೇ ಮೂರು ದಿನ ಬಾಕಿ ಇದೆ. ನೀವೆಲ್ಲ ಹಬ್ಬದ ತಯಾರಿಯನ್ನು ಇನ್ನೂ ಶುರು ಮಾಡಿರುತ್ತಿರೋ ಇಲ್ಲವೋ ಆದರೆ ದರ್ಶನ್ ಅಭಿಮಾನಿಗಳು ಮಾತ್ರ ಈಗಾಗಲೇ ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ.

ಈ ವರ್ಷ ದರ್ಶನ್ ಅಭಿಮಾನಿಗಳು ದಸರ ಹಬ್ಬಕ್ಕಿಂತ 'ತಾರಕ್' ಚಿತ್ರದ ಸಂಭ್ರಮದಲ್ಲಿದ್ದಾರೆ. ಸಿನಿಮಾ ಇದೇ ಶುಕ್ರವಾರ ದಸರ ಹಬ್ಬದ ವಿಶೇಷವಾಗಿ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಅದ್ದೂರಿಯಾಗಿ ಸಿನಿಮಾವನ್ನು ಸ್ವಾಗತಿಸುವುದಕ್ಕೆ ಡಿ ಬಾಸ್ ಭಕ್ತರು ಸಜ್ಜಾಗಿದ್ದಾರೆ.

ಅಂದಹಾಗೆ, ರಾಜ್ಯಾದ್ಯಂತ ಅನೇಕ ಚಿತ್ರಮಂದಿರದ ಮುಂದೆ ಈಗ 'ತಾರಕ್' ಕಟ್ ಔಟ್ ಗಳು ರಾರಾಜಿಸುತ್ತಿದ್ದು, ಸಿನಿಮಾದ ಕ್ರೇಜ್ ಇನ್ನಷ್ಟು ಜಾಸ್ತಿಯಾಗಿದೆ. ಮುಂದೆ ಓದಿ...

ಸಂತೋಷ್ ಚಿತ್ರಮಂದಿರ

ಗಾಂಧಿನಗರದ ಸಂತೋಷ್ ಚಿತ್ರಮಂದಿರ 'ತಾರಕ್' ಚಿತ್ರದ ಮುಖ್ಯ ಚಿತ್ರಮಂದಿರವಾಗಿದೆ. ಈಗಾಗಲೇ ಈ ಚಿತ್ರಮಂದಿರ 'ತಾರಕ್' ಚಿತ್ರದ ಪೋಸ್ಟರ್ ಗಳಿಂದ ಸಿಂಗಾರಗೊಂಡಿದೆ.

ಮಂಡ್ಯ ಜಿಲ್ಲೆಯಲ್ಲಿ

ಮಂಡ್ಯ ಜಿಲ್ಲೆಯ ಗುರು ಚಿತ್ರಮಂದಿರದ ಮುಂದೆ ಕೂಡ ದರ್ಶನ್ ಅವರ 'ತಾರಕ್' ಕಟ್ ಔಟ್ ತಲೆ ಎತ್ತಿ ನಿಂತ್ತಿದೆ.

ಅಭಿಮಾನಿಯ ಸಂಭ್ರಮ

ದರ್ಶನ್ ಅವರ ಅಪ್ಪಟ ಅಭಿಮಾನಿಯೊಬ್ಬರು ಅಂಗೈ ಮೇಲೆ ಕರ್ಪೂರ ಹಚ್ಚಿ 'ತಾರಕ್' ಚಿತ್ರದ ಫೋಟೋಗೆ ಆರತಿ ಮಾಡುತ್ತಿದ್ದಾರೆ.

ಮೈಸೂರಿನಲ್ಲಿ

ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿಯೂ 'ತಾರಕ್' ಚಿತ್ರದ ಹಬ್ಬ ಶುರುವಾಗಿದೆ.

ಟಿಕೆಟ್ ಬುಕ್ಕಿಂಗ್ ಶುರು

ಬುಕ್ ಮೈ ಶೋದಲ್ಲಿ 'ತಾರಕ್' ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಕಳೆದ ಶನಿವಾರದಿಂದ ಅಂದರೆ ರಿಲೀಸ್ ಗೆ ಆರು ದಿನದ ಮುಂಚಿತವಾಗಿ ಪ್ರಾರಂಭವಾಗಿದೆ.

ತುಂಬು ಕುಟುಂಬದ 'ತಾರಕ್' ಟ್ರೇಲರ್ ನೋಡಿದ್ರಾ.?

6 ಗಂಟೆಗೆ ಮೊದಲ ಶೋ

ಸದ್ಯದ ಮಾಹಿತಿಯಂತೆ ಬೆಂಗಳೂರಿನಲ್ಲಿ 'ತಾರಕ್' ಚಿತ್ರದ ಮೊದಲ ಶೋ ಬೆಳ್ಳಗೆ 6 ಗಂಟೆಗೆ ಶುರು ಆಗಲಿದೆ. ವಿದ್ಯಾಪೀಠ ಸರ್ಕಲ್ ಬಳಿಯ ಚಂದ್ರೋದಯ ಚಿತ್ರಮಂದಿರದಲ್ಲಿ 6 ಗಂಟೆಗೆ ಮತ್ತು ಉತ್ತರ ಹಳ್ಳಿಯ ವೈಭವಿ ಚಿತ್ರಮಂದಿರದಲ್ಲಿ 6.30ಕ್ಕೆ ಚಿತ್ರ ಪ್ರದರ್ಶನ ಪ್ರಾರಂಭವಾಗಲಿದೆ.

'ತಾರಕ್' ಚಿತ್ರದಲ್ಲಿರಲಿದೆ 'ಡ್ರಾಮಾ ಕಿಂಗ್' ಮಹೇಂದ್ರ ಕಾಮಿಡಿ ಕಲರವ

ಟ್ರೇಲರ್ ಟ್ರೆಂಡಿಂಗ್

ಕಳೆದ ಶನಿವಾರ ರಿಲೀಸ್ ಆದ 'ತಾರಕ್' ಟ್ರೇಲರ್ ಈಗಲೂ ಯೂ ಟ್ಯೂಬ್ ನಲ್ಲಿ ನಂಬರ್ 2 ಟ್ರೆಂಡಿಂಗ್ ನಲ್ಲಿದ್ದು, ಚಿತ್ರದ ಕ್ರೇಜ್ ಗೆ ಇದು ಸಾಕ್ಷಿಯಾಗಿದೆ.

ನಟಿ ರಕ್ಷಿತಾ ಅವರ ಈ ಕೋರಿಕೆಯನ್ನು ಈಡೇರಿಸುತ್ತಾರಾ ದಾಸ ದರ್ಶನ್.?

ಸಿನಿಮಾದ ಬಗ್ಗೆ

'ತಾರಕ್' ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾವಾಗಿದೆ. ಮಿಲನ ಪ್ರಕಾಶ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದರ್ಶನ್ ತಾತನ ಪಾತ್ರದಲ್ಲಿ ನಟ ದೇವರಾಜ್ ಕಾಣಿಸಿಕೊಂಡಿದ್ದಾರೆ. ಶಾನ್ವಿ ಶ್ರೀವತ್ಸವ ಹಾಗೂ ಶೃತಿ ಹರಿಹರನ್ ಚಿತ್ರದ ನಾಯಕಿಯರಾಗಿದ್ದಾರೆ.

English summary
Challenging Star Darshan's 'Tarak' movie will release on september 29th. features Shanvi Srivastava, Sruthi Hariharan in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada