twitter
    For Quick Alerts
    ALLOW NOTIFICATIONS  
    For Daily Alerts

    ನೂರು ಕೋಟಿ ನಿರೀಕ್ಷೆಯಲ್ಲಿ ಸಂಗೊಳ್ಳಿ ರಾಯಣ್ಣ!

    By Rajendra
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಬಾಕ್ಸ್ ಆಫೀಸಲ್ಲಿ ಈಗಾಗಲೆ ಪೈಸಾ ವಸೂಲ್ ಮಾಡಿದೆ. ಚಿತ್ರ ಇದೇ ರೀತಿ ಮುನ್ನುಗ್ಗಿದರೆ 'ರಾಯಣ್ಣ' ಅರ್ಧ ಶತಕ ಬಾರಿಸುವಷ್ಟರಲ್ಲಿ ರು.100 ಕೋಟಿ ಕಲೆಕ್ಷನ್ ಮಾಡುವುದು ಗ್ಯಾರಂಟಿ ಎಂಬ ಅಭಿಪ್ರಾಯ ಚಿತ್ರೋದ್ಯಮಲ್ಲಿ ವ್ಯಕ್ತವಾಗಿದೆ. ಚಿತ್ರ ವಿಮರ್ಶೆ ಓದಿ.

    ಈಗಾಗಲೆ ಚಿತ್ರದ ಬಂಡವಾಳ ಬಹುತೇಕ ವಸೂಲಾಗಿದೆ. ಇನ್ನೇನಿದ್ದರೂ ಲಾಭದ ನಿರೀಕ್ಷೆಯಲ್ಲಿದ್ದಾರೆ ಚಿತ್ರದ ನಿರ್ಮಾಪಕ ಆನಂದ ಅಪ್ಪುಗೋಳ್. ರಾಯಣ್ಣ ಈಗಾಗಲೆ ಸರಿಸುಮಾರು ರು.30 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಅದರಲ್ಲಿ ರು.20 ಕೋಟಿ ಅಪ್ಪುಗೋಳ್ ಅವರ ಪಾಲು.

    ಚಿತ್ರ ಇದೇ ರೀತಿ ಕಲೆಕ್ಷನ್ ಮಾಡಿದರೆ ಐವತ್ತು ದಿನ ಪೂರೈಸುವಷ್ಟರಲ್ಲಿ ರು.100 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆಯಲಿದೆ ಎಂಬ ವಿಶ್ವಾಸ ಅಪ್ಪುಗೋಳ್ ಅವರದು. 'ರಾಯಣ್ಣ'ನಿಗೆ ಉತ್ತರ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಗುತ್ತಿದೆ.

    ಚಿತ್ರಮಂದಿರಗಳಲ್ಲಿ ನಾಲ್ಕು ಶೋಗಳಿಗೆ ಬದಲಾಗಿ ಐದು ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಮಲ್ಟಿಫ್ಲೆಕ್ಸ್ ಗಳಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟಿಕೆಟ್ ಬೆಲೆ ರು.5 ರಿಂದ 10ರಷ್ಟು ಹೆಚ್ಚಾಗಿದ್ದರೂ ಪ್ರೇಕ್ಷಕರು ಯಾವುದೇ ಕ್ಯಾತೆ ತೆಗೆಯದೆ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲೆಡೆಯಿಂದ ಬರುತ್ತಿರುವ ರಿಪೋರ್ಟ್.

    ನವೆಂಬರ್ 1ರಂದು ಚಿತ್ರ 135 ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಈಗ ಅದರ ಸಂಖ್ಯೆ 160ಕ್ಕೆ ಏರಿಕೆಯಾಗಿದೆ. ಚಿತ್ರಮಂದಿಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿತರಕ ಎಚ್ ಡಿ ಗಂಗರಾಜು.

    ಸಾಮನ್ಯವಾಗಿ ಚಿತ್ರವೊಂದು ತೆರೆಕಂಡ ಬಳಿಕ ವಾರಗಳು ಉರುಳುತ್ತಿದ್ದಂತೆ ಚಿತ್ರಮಂದಿರಗಳ ಸಂಖ್ಯೆಯೂ ಇಳಿಮುಖವಾಗುತ್ತಾ ಸಾಗುತ್ತದೆ. ಆದರೆ 'ಸಂಗೊಳ್ಳಿ ರಾಯಣ್ಣ' ವಿಚಾರದಲ್ಲಿ ಉಲ್ಟಾ ಆಗಿದೆ. ಚಿತ್ರಮಂದಿರಗಳ ಸಂಖ್ಯೆ ವಾರದಿಂದ ವಾರಕ್ಕೆ ಏರಿಕೆಯಾಗುತ್ತಿದೆ. ದರ್ಶನ್ ಅಭಿಮಾನಿಗಳಿಗಂತೂ ಚಿತ್ರ ಸಿಕ್ಕಾಪಟ್ಟೆ ಇಷ್ಟವಾಗಿದೆ. (ಏಜೆನ್ಸೀಸ್)

    English summary
    Challenging Star Darshan's Krantiveera Sangolli Rayanna, a historical biopic Kannada film directed by Naganna and produced by Anand Appugol the business expectations have touched the sky. In case the collections never drop and continue like this for 50 days this will be the first Kannada film to reach the 100 crores collection chart.
    Thursday, December 13, 2012, 13:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X