D55: 'ಯಜಮಾನ' ಭೇಟಿ ಮಾಡಿದ ಶೈಲಜಾ ನಾಗ್: ಸಿಕ್ಕ ಸುಳಿವು ಏನು?

ಕೋವಿಡ್‌ನಿಂದ ಬ್ರೇಕ್ ತೆಗೆದುಕೊಂಡಿರುವ ನಟ ದರ್ಶನ್ ಇನ್ನು ಚಿತ್ರೀಕರಣ ಆರಂಭಿಸಿಲ್ಲ. 'ರಾಬರ್ಟ್' ನಂತರ 'ಗಂಡುಗಲಿ ಮದಕರಿ ನಾಯಕ' ಚಿತ್ರ ಶೂಟಿಂಗ್ ಮುಂದುವರಿಸಬೇಕಿದೆ. ಆದರೆ, ಕೋವಿಡ್ ಭೀತಿ ಕಡಿಮೆಯಾಗದ ಕಾರಣ ಆ ಸಿನಿಮಾಗೆ ಅಲ್ಪ ವಿರಾಮ ಘೋಷಿಸಲಾಗಿದೆ. ಈ ನಡುವೆ ರಾಕ್‌ಲೈನ್ ನಿರ್ಮಾಣದಲ್ಲಿಯೇ ಮತ್ತೊಂದು ಸಿನಿಮಾ ಶುರು ಮಾಡುವ ಲೆಕ್ಕಾಚಾರದಲ್ಲಿದ್ದಾರೆ ಡಿ ಬಾಸ್.

ಇದೀಗ, 'ಯಜಮಾನ' ಸಿನಿಮಾದ ನಿರ್ಮಾಪಕಿ ಶೈಲಜಾ ನಾಗ್ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಶೈಲಜಾ ನಾಗ್, ಬಿ ಸುರೇಶ್, ಸಂಗೀತ ನಿರ್ದೇಶಕ ಹರಿಕೃಷ್ಣರ ಸರ್ಪ್ರೈಸ್ ಭೇಟಿ ದರ್ಶನ್ ಅವರ 55ನೇ ಚಿತ್ರಕ್ಕೆ ಸಂಬಂಧಿಸಿದ್ದು ಎಂದು ತಿಳಿದು ಬಂದಿದೆ. ಮುಂದೆ ಓದಿ...

D55 ಆರಂಭಕ್ಕೆ ತಯಾರಿ

D55 ಆರಂಭಕ್ಕೆ ತಯಾರಿ

'ಯಜಮಾನ' ಸಿನಿಮಾದ ಸಕ್ಸಸ್ ಆದ ಬೆನ್ನಲ್ಲೇ ನಿರ್ಮಾಪಕಿ ಶೈಲಜಾ ನಾಗ್ ಅವರ ಜೊತೆ ಇನ್ನೊಂದು ಚಿತ್ರ ಮಾಡ್ತೇನೆ ಎಂದು ನಟ ದರ್ಶನ್ ಘೋಷಿಸಿದ್ದರು. ಈ ಸಿನಿಮಾ ಯಾವಾಗ ಎನ್ನುವುದಕ್ಕೆ ಈಗ ಬಹಿರಂಗವಾಗಿರುವ ಫೋಟೋ ಉತ್ತರವಾಗಿದೆ. ಬಹುಶಃ ಸಿನಿಮಾದ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ನಿರ್ಮಾಪಕಿ, ಡಿ ಬಾಸ್ ಭೇಟಿ ಮಾಡಿ ಮುಂದಿನ ಹಂತದ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹರಿಕೃಷ್ಣ ನಿರ್ದೇಶನ

ಹರಿಕೃಷ್ಣ ನಿರ್ದೇಶನ

ದರ್ಶನ್-ಶೈಲಜಾ ನಾಗ್ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಹೊಸ ಚಿತ್ರಕ್ಕೆ ಹರಿಕೃಷ್ಣ ಅವರೇ ಸಾರಥಿಯಾಗಲಿದ್ದಾರೆ. ಏಕಂದ್ರೆ, ಈ ಹಿಂದೆ ಯಜಮಾನ ಸಿನಿಮಾ ನಿರ್ದೇಶನದ ಅನುಭವ ಮತ್ತು ಯಶಸ್ಸಿನ ಕಾಂಬಿನೇಷನ್ ಮುಂದುವರಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ಫಿಲ್ಮಿಬೀಟ್‌ಗೆ ಮಾಹಿತಿ ಲಭ್ಯವಾಗಿದೆ.

ಯಾವ ಜಾನರ್ ಎಂಬ ಕುತೂಹಲ?

ಯಾವ ಜಾನರ್ ಎಂಬ ಕುತೂಹಲ?

ದರ್ಶನ್ 55ನೇ ಸಿನಿಮಾ ಯಾವ ಜಾನರ್ ಆಗಿರುತ್ತದೆ, ಡಿ ಬಾಸ್ ಪಾತ್ರ ಏನಾಗಿರುತ್ತದೆ, ಯಾರೆಲ್ಲಾ ನಟಿಸಬಹುದು ಎಂಬ ಕುತೂಹಲ ಡಿ ಅಭಿಮಾನಿಗಳಲ್ಲಿ ಹೆಚ್ಚಿದೆ. ಆದರೆ, ಈ ಕುತೂಹಲಕ್ಕೆ ಸದ್ಯಕ್ಕೆ ಉತ್ತರ ಇಲ್ಲ. ಮತ್ತಷ್ಟು ದಿನ ಕಾಯಬೇಕಿದೆ.

Recommended Video

25 ಕೋಟಿ ವಂಚನೆ ಪ್ರಕರಣದಲ್ಲಿ ಡಿ ಬಾಸ್ ಬೆಂಬಲಕ್ಕೆ ನಿಂತ ನಾಗವರ್ಧನ್ ಯಾರು..? | Filmibeat Kannada
ದರ್ಶನ್ ಮುಂದಿನ ಸಿನಿಮಾಗಳು

ದರ್ಶನ್ ಮುಂದಿನ ಸಿನಿಮಾಗಳು

'ಕುರುಕ್ಷೇತ್ರ' ದರ್ಶನ್ ಅವರ 50ನೇ ಸಿನಿಮಾ, 'ಒಡೆಯ' 51ನೇ ಸಿನಿಮಾ, 'ರಾಬರ್ಟ್' 52ನೇ ಚಿತ್ರ, 'ಗಂಡುಗಲಿ ಮದಕರಿ ನಾಯಕ' 53ನೇ ಚಿತ್ರ, ಶೈಲಜಾ ನಾಗ್ ಅವರದ್ದು 55ನೇ ಪ್ರಾಜೆಕ್ಟ್. ಹಾಗಾದ್ರೆ, 54ನೇ ಸಿನಿಮಾ ಯಾವುದು ಎನ್ನುವುದಕ್ಕೆ ಅಧಿಕೃತ ಮಾಹಿತಿ ಇಲ್ಲ. ಆದರೆ, ರಾಕ್‌ಲೈನ್ ಜೊತೆ ಸಿನಿಮಾ (ಗೋಲ್ಡ್‌ರಿಂಗ್) ಮಾಡಲಿದ್ದು, ಅದಕ್ಕೆ ತಯಾರಿ ನಡೆದಿದೆ ಎಂದು ವರದಿಯಾಗಿದೆ.

More from Filmibeat

English summary
Darshan 55th Movie: Darshan and Harikrishna team up for new movie to be bankrolled by Shylaja Nag.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X