For Quick Alerts
  ALLOW NOTIFICATIONS  
  For Daily Alerts

  'ತಾರಕ್' ರಿಯಲ್ ಹೀರೋಗಳ ಬಗ್ಗೆ ಖುಷಿಯಾದ ದರ್ಶನ್ ಹೇಳಿದ್ದೇನು?

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದ ನಂತರ ಅಭಿನಯಿಸಿರುವ ಚಿತ್ರ 'ತಾರಕ್'. ನಿನ್ನೆ (ಆಗಸ್ಟ್ 18) 'ತಾರಕ್' ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಅರ್ಜುನ್ ಜನ್ಯ ಅವರ ರಾಕಿಂಗ್ ಮ್ಯೂಸಿಕ್ ಮಾರುಕಟ್ಟೆಗೆ ಕಾಲಿಟ್ಟಿದ್ದು ಸ್ಯಾಂಡಲ್ ವುಡ್ ನಲ್ಲಿ 'ತಾರಕ್' ಅಬ್ಬರ ಶುರುವಾಗಿದೆ.

  ಎಲ್ಲರು ಗೊತ್ತಿರುವಾಗೆ, 'ತಾರಕ್' ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾ. ಆದ್ರೆ, ದರ್ಶನ್ ಅವರ ಈ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರ ತುಂಬಾ ಡಿಫ್ರೆಂಟ್ ಆಗಿದೆಯಂತೆ. ಇದನ್ನ ನಾವ್ ಹೇಳ್ತಿಲ್ಲ. ಸ್ವತಃ ದರ್ಶನ್ ಅವರೇ ಒಪ್ಪಿಕೊಂಡಿದ್ದಾರೆ.

  ಇಷ್ಟೆ ಅಲ್ಲ 'ತಾರಕ್' ಚಿತ್ರದ ಬಗ್ಗೆ, ಮತ್ತು 'ತಾರಕ್' ಚಿತ್ರದ ರಿಯಲ್ ಹೀರೋಗಳ ಬಗ್ಗೆ ದಚ್ಚು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, 'ತಾರಕ್' ಆಡಿಯೋ ಕಾರ್ಯಕ್ರಮದಲ್ಲಿ ದಚ್ಚು ಏನಂದ್ರು? ಮುಂದೆ ಓದಿ.....

  'ತಾರಕ್' ಓಪನ್ ಬುಕ್

  'ತಾರಕ್' ಓಪನ್ ಬುಕ್

  ''ತಾರಕ್ ಸಿನಿಮಾ....ಒಬ್ಬ ತಾತ ಮತ್ತು ಮೊಮ್ಮಗನ ಪ್ರೀತಿ, ಬಾಂಧವ್ಯ, ಕೋಪ, ಬೇಜಾರು ಎಲ್ಲ ಇರುವಂತಹ ಸಿನಿಮಾ'' - ದರ್ಶನ್, ನಟ

  'ತಾರಕ್' ಚಿತ್ರದ ಎಣ್ಣೆ ಹಾಡಿಗೆ ದರ್ಶನ್ ತಕಧಿಮಿತಾ.!

  ಈ ಸಿನಿಮಾದಲ್ಲಿ 'ದರ್ಶನ್'ನ ನೋಡಲ್ಲ

  ಈ ಸಿನಿಮಾದಲ್ಲಿ 'ದರ್ಶನ್'ನ ನೋಡಲ್ಲ

  ''ಯಾವುದೇ ಸಿನಿಮಾ ಆದ್ರೂ, ಅಲ್ಲಿ ದರ್ಶನ್ ತುಣುಕುಗಳು ಬಂದು ಹೋಗುತ್ತೆ. ಆದ್ರೆ, ಈ ಚಿತ್ರದಲ್ಲಿ ನೀವು ದರ್ಶನ್ ನ ನೋಡಲ್ಲ. ತುಂಬಾ ಚೆನ್ನಾಗಿ ಪ್ರಕಾಶ್ ನಿರೂಪಣೆ ಮಾಡಿದ್ದಾರೆ. ನಿರ್ದೇಶಕರು ಒಳ್ಳೆ ಸಿನಿಮಾ ಮಾಡಿದ್ದಾರೆ'' - ದರ್ಶನ್, ನಟ

  ಆಕರ್ಷಣೆ ಬಗ್ಗೆ ಮಾತಾಡಿದ್ರೆ, 'ದರ್ಶನ್' ಹೆಸರು ಹೇಳ್ಬಿಟ್ರು ಶ್ರುತಿ ಹರಿಹರನ್.!

  ಪಕ್ಕಾ ಪ್ಲಾನ್ ಮಾಡಿ ಸಿನಿಮಾ ಆಗಿದೆ

  ಪಕ್ಕಾ ಪ್ಲಾನ್ ಮಾಡಿ ಸಿನಿಮಾ ಆಗಿದೆ

  ''ತಾರಕ್ ಚಿತ್ರ ಹೇಗೆ ಬರಬೇಕು ಎಂಬುದು ಪಕ್ಕಾ ಪ್ಲಾನ್ ಮಾಡಿ ಮಾಡಲಾಗಿದೆ. ಶೂಟಿಂಗ್ ಎಲ್ಲ ಅಂದುಕೊಂಡಿದ್ದ ಸಮಯದಲ್ಲಿ ಮಾಡಿ ಮುಗಿಸಿದ್ದೀವಿ. ಯೂರೋಪ್ ನಲ್ಲಿ 25 ದಿನ ಚಿತ್ರೀಕರಣ ಮಾಡಿದ್ದು ತುಂಬ ಚೆನ್ನಾಗಿತ್ತು'' - ದರ್ಶನ್, ನಟ

  ''ತಾರಕ್' ದರ್ಶನ್ ಮೇಲೆ ಶ್ರುತಿ ಹರಿಹರನ್ ಗೆ ಯರ್ರಾಬಿರ್ರಿ ಲವ್ ಆಗಿದೆ''

  ಈ ಚಿತ್ರದ ರಿಯಲ್ ಹೀರೋ ಇವರೇ

  ಈ ಚಿತ್ರದ ರಿಯಲ್ ಹೀರೋ ಇವರೇ

  ''ತಾರಕ್' ಚಿತ್ರದ ರಿಯಲ್ ಹೀರೋ ದೇವರಾಜ್ ಅವರು. ತುಂಬ ಅದ್ಭುತವಾಗಿ ಮಾಡಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ಎಲ್ಲರಿಗೂ ಅನ್ನಿಸುತ್ತೆ ಈ ರೀತಿಯ ಒಬ್ಬ ತಾತ ಇರಬೇಕು ಅಂತ'' - ದರ್ಶನ್, ನಟ

  ನಾಯಕಿಯರು ಸ್ಪೆಷಲ್

  ನಾಯಕಿಯರು ಸ್ಪೆಷಲ್

  ''ಸಾಮಾನ್ಯವಾಗಿ ನಮ್ಮ ಸಿನಿಮಾಗಳಲ್ಲಿ ನಾಯಕಿಯರು 'ಊಟಕ್ಕೆ ಉಪ್ಪಿನಕಾಯಿ ತರ' ಬಂದು ಹೋದ್ರು ಅಂತಾರೆ. ಆದ್ರೆ, ಈ ಚಿತ್ರದಲ್ಲಿ ಹಾಗಿಲ್ಲ. ಇಬ್ಬರದ್ದು ವಿಶೇಷ ಮತ್ತು ಪ್ರಮುಖವಾದ ಪಾತ್ರಗಳು. ಒಬ್ಬರು ಜೀವನ ಕಲಿಸುತ್ತಾರೆ, ಇನ್ನೊಬ್ಬರು ಜೀವನದಲ್ಲಿ ಪ್ರೀತಿ ಏನೂ ಅಂತ ಕಲಿಸುತ್ತಾರೆ. ಇದರಲ್ಲಿ ನನ್ನದೊಂದು ಸಣ್ಣ ಪಾತ್ರ, ಎಲ್ಲರ ಜೊತೆ ಜೊತೆಯಲ್ಲೂ ಹೋಗ್ತಿನಿ. ಆ ತರವಾದ ತಾರಕ್ ಇದು'' - ದರ್ಶನ್, ನಟ

  ಅರ್ಜುನ್ ಜನ್ಯ ಸಂಗೀತ ಸೂಪರ್

  ಅರ್ಜುನ್ ಜನ್ಯ ಸಂಗೀತ ಸೂಪರ್

  ''ಅರ್ಜುನ್ ಜನ್ಯ ಅವರು ಒಳ್ಳೆ ಹಾಡುಗಳನ್ನ ಕೊಟ್ಟಿದ್ದಾರೆ. ಸುಮ್ಮನೆ ಯಾವ ಹಾಡು ಮಾಡಿಲ್ಲ. ಸಂದರ್ಭಕ್ಕೆ ತಕ್ಕ ಹಾಗೆ ಹಾಡುಗಳು ಬರುತ್ತೆ'' - ದರ್ಶನ್, ನಟ

  ಸೆಪ್ಟಂಬರ್ ನಲ್ಲಿ 'ತಾರಕ್' ದರ್ಶನ

  ಸೆಪ್ಟಂಬರ್ ನಲ್ಲಿ 'ತಾರಕ್' ದರ್ಶನ

  'ತಾರಕ್' ಚಿತ್ರವನ್ನ ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದಾರೆ. ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ನಟ ದರ್ಶನ್ ಇಲ್ಲಿ ರಗ್ಬಿ ಪ್ಲೇಯರ್ ಆಗಿ ಮಿಂಚಿದ್ದಾರೆ. ಉಳಿದಂತೆ ಶಾನ್ವಿ ಶ್ರೀವಾಸ್ತವ ಮತ್ತು ಶೃತಿ ಹರಿಹರನ್ ದರ್ಶನ್ ಗೆ ಜೋಡಿಯಾಗಿದ್ದು, ದೇವರಾಜ್, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ, ಆಡಿಯೋ ರಿಲೀಸ್ ಮಾಡಿರುವ ಚಿತ್ರತಂಡ ಸೆಪ್ಟಂಬರ್ ನಲ್ಲಿ ಥಿಯೇಟರ್ ಗೆ ಬರುವ ಯೋಚನೆಯಲ್ಲಿದೆ.

  English summary
  Challenging star Darshan Speech in Tarak Audio Release Function. Tarak Movie Audio Released on August 18th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X