For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿಖಿಲ್ ಕುಮಾರ್ ಮುಖಾಮುಖಿಗೆ ವೇದಿಕೆ ಸಜ್ಜು

  |

  Recommended Video

  Darshan and Nikhil Kumar will meet first time after Mandya MP election | Filmibeat Kannada

  ಜಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿಖಿಲ್ ಕುಮಾರ್ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಮಂಡ್ಯ ಚುನಾವಣೆ ನಂತರ ದರ್ಶನ್ ಮತ್ತು ನಿಖಿಲ್ ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೀಗ ಆ ಸಮಯ ಬಂದಿದೆ. ಈ ಸ್ಟಾರ್ ನಟರ ಸಮಾಗಮಕ್ಕೆ ಈ ಬಾರಿಯ ಶಿವರಾತ್ರಿ ಸಾಕ್ಷಿಯಾಗಲಿದೆ.

  ಹೌದು, ಕುರುಕ್ಷೇತ್ರ ಸಿನಿಮಾದ ಶತದಿನೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ನಿರ್ಮಾಪಕ ಮುನಿರತ್ನ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಿದ್ದಾರೆ. ಇದೆ ತಿಂಗಳು 21ಕ್ಕೆ ಶಿವರಾತ್ರಿಯ ದಿನ ಕುರುಕ್ಷೇತ್ರ 100ನೇ ದಿನದ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಕುರುಕ್ಷೇತ್ರ ಕಲಾವಿದರೆಲ್ಲ ಭಾಗಿಯಾಗುವ ಸಾಧ್ಯತೆ ಇದೆ.

  'ಡಿ' ಅಂದ್ರೆ ಡೆಡಿಕೇಷನ್: ಬರ್ತಡೇ ದಿನವೂ ವೃತ್ತಿಪರತೆ ಮೆರೆದ ಡಿ-ಬಾಸ್ ದರ್ಶನ್.!'ಡಿ' ಅಂದ್ರೆ ಡೆಡಿಕೇಷನ್: ಬರ್ತಡೇ ದಿನವೂ ವೃತ್ತಿಪರತೆ ಮೆರೆದ ಡಿ-ಬಾಸ್ ದರ್ಶನ್.!

  ಅಭಿಮನ್ಯು ಪಾತ್ರಧಾರಿ ನಿಖಿಲ್ ಕೂಡ ಕಾರ್ಯಕ್ರಮದಲ್ಲಿ ಹಾಜರಾಗುವ ಸಾಧ್ಯತೆ ಇದೆ. ಇನ್ನು ಈ ಬಗ್ಗೆ ಇತ್ತೀಚಿಗೆ ಮಾತನಾಡಿದ ನಟ ದರ್ಶನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ. ಹಾಗಾಗಿ ಈ ಇಬ್ಬರು ನಟರು ಶತದಿನೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಇನ್ನು ಅದ್ದೂರಿಯಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಬಿಟ್ಟು ಬೇರೆ ಯಾರೆಲ್ಲ ಕಲಾವಿದರು ಭಾಗಿಯಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಅಂದ್ಹಾಗೆ ಈ ಕಾರ್ಯಕ್ರಮ ಬೆಂಗಳೂರಿನ ಜೆ.ಪಿ ಪಾರ್ಕ್ ನಲ್ಲಿ ನಡೆಯಲಿದೆ. ಸಂಜೆ 7ರಿಂದ ರಾತ್ರಿ 11 ಗಂಟೆವರೆಗೂ ಕಾರ್ಯಕ್ರಮ ನಡೆಯಲಿದೆ. ಕುರುಕ್ಷೇತ್ರ ಸಿನಿಮಾ ಕಳೆದ ವರ್ಷ ಆಗಸ್ಟ್ ನಲ್ಲಿ ತೆರೆಗೆ ಬಂದಿದೆ. ದುರ್ಯೋದನನಾಗಿ ದರ್ಶನ್ ಅಬ್ಬರಿಸಿದ್ದ ದರ್ಶನ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.

  ನಾಗಣ್ಣ ನಿರ್ದೇಶನ, ಮುನಿರತ್ನ ನಿರ್ಮಾಣದ ಕುರುಕ್ಷೇತ್ರದಲ್ಲಿ ಸಾಕಷ್ಟು ಕಲಾವಿದರು ಬಣ್ಣಹಚ್ಚಿದ್ದರು. ವಿಶೇಷ ಅಂದರೆ ರೆಬಲ್ ಸ್ಟಾರ್ ಅಂಬರೀಶ್ ಕೂಡ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕುರುಕ್ಷೇತ್ರ ಶತದಿನೋತ್ಸವವನ್ನು ತಡವಾಗಿ ಆರಿಸಿಕೊಳ್ಳುತ್ತಿದೆ.

  English summary
  Kannada Actor Darshan starrer Kurukshetra movie will celebrating Centenary program. This movie is directed by Naganna.
  Monday, February 17, 2020, 20:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X