For Quick Alerts
  ALLOW NOTIFICATIONS  
  For Daily Alerts

  'ಒಡೆಯ' ಚಿತ್ರದ 'ಒಡೆಯ ಹೇ ಒಡೆಯ..' ಹಾಡು ಕೇಳಲು ರೆಡಿಯಾಗಿ

  |
  ODEYA title track , why is it so special ?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಒಡೆಯ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ ಒಡೆಯ ಟೀಸರ್ 179K ಲೈಕ್ಸ್ ಗಿಟ್ಟಿಸಿಕೊಂಡು ಟ್ರೆಂಡಿಂಗ್ ನಲ್ಲಿದೆ. ಅತಿ ಹೆಚ್ಚು ಲೈಕ್ಸ್ ಪಡೆದ ಕನ್ನಡದ ಟೀಸರ್ ಗಳ ಪೈಕಿ ಒಡೆಯ ಮೊದಲ ಸ್ಥಾನದಲ್ಲಿದೆ ಎನ್ನುವುದು ವಿಶೇಷ.

  ಪುಟ್ಟ ಟೀಸರ್ ಮೂಲಕವೆ ಧೂಳ್ ಎಬ್ಬಿಸುತ್ತಿರುವ ಒಡೆಯ ಈಗ ಹಾಡಿನ ಮೂಲಕ ದರ್ಶನ ನೀಡಲು ಸಜ್ಜಾಗಿದೆ. ಹೌದು, ಒಡೆಯ ಚಿತ್ರದ ಮೊದಲ ಹಾಡು ರಿಲೀಸ್ ಗೆ ಸಮಯ ನಿಗದಿಯಾಗಿದೆ. ಇದೆ ತಿಂಗಳು 8 ಕ್ಕೆ ಬೆಳಗ್ಗೆ 9.45ಕ್ಕೆ ಒಡೆಯ ಚಿತ್ರದ ಟೈಟಲ್ ಟ್ರ್ಯಾಕ್ ತೆರೆಗೆ ಬರುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಈ ಹಾಡನ್ನು ಕೇಳಬಹುದು. "ಒಡೆಯ ಹೇ ಒಡೆಯ.." ಸಾಲಿನಿಂದ ಪ್ರಾರಂಭವಾಗುವ ಈ ಹಾಡನ್ನು ಕೇಳಲು ಡಿ ಬಾಸ್ ಅಭಿಮಾನಿಗಳು ಕಾತುರರಾಗಿದ್ದಾರೆ.

  ಅತಿ ಹೆಚ್ಚು ಲೈಕ್ಸ್ ದಾಖಲೆ ಉಡೀಸ್ ಮಾಡಿದ 'ಒಡೆಯ': ಕನ್ನಡದ ಟಾಪ್ 5 ಟೀಸರ್ ಪಟ್ಟಿಅತಿ ಹೆಚ್ಚು ಲೈಕ್ಸ್ ದಾಖಲೆ ಉಡೀಸ್ ಮಾಡಿದ 'ಒಡೆಯ': ಕನ್ನಡದ ಟಾಪ್ 5 ಟೀಸರ್ ಪಟ್ಟಿ

  ವಿಶೇಷ ಅಂದರೆ ಈ ಹಾಡು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಯೋಜನೆಯಲ್ಲಿ ಮೂಡಿಬಂದಿದೆ. ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಸಾಹಿತ್ಯಕ್ಕೆ ವ್ಯಾಸರಾಜ್ ಕಂಠದಾನ ಮಾಡಿದ್ದಾರೆ. ಇದೆ ಕಾಂಬಿನೇಶನ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾದಲ್ಲೂ ಒಂದಾಗಿತ್ತು. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ, ವ್ಯಾಸರಾಜ್ ಧ್ವನಿ ಈ ಮೂವರು ಕಾಂಬಿನೇಶನ್ ನಲ್ಲಿ ಮೂಡಿಬಂದಿದ್ದ ಚಕ್ರವರ್ತಿ' ಚಿತ್ರದ ಟೈಟಲ್ ಟ್ರ್ಯಾಕ್ ಸೂಪರ್ ಹಿಟ್ ಆಗಿತ್ತು.

  ಈಗ ಒಡೆಯ ಮೂಲಕ ಮೋಡಿ ಮಾಡಲು ಮತ್ತೆ ಬರ್ತಿರುವುದು ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಒಡೆಯ ಎಂ.ಡಿ ಶ್ರೀಧರ್ ಸಾರಥ್ಯದಲ್ಲಿ ಮೂಡಿಬರುತ್ತಿರವ ಸಿನಿಮಾ. ಸಂದೇಶ್ ನಾಗರಾಜ್ ನಿರ್ಮಾಣ ಚಿತ್ರಕ್ಕಿದೆ. ದರ್ಶನ್ ಗೆ ನಾಯಕಿಯಾಗಿ ಇತ್ತೀಚಿಗೆ ಹೆಸರು ಬದಲಾಯಿಸಿಕೊಂಡ ನಟಿ ಸನಾ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ. ಮೂಲಕಗಳ ಪ್ರಕಾರ ಒಡೆಯ ಡಿಸೆಂಬರ್ 20ಕ್ಕೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

  English summary
  Kannada actor Darshan starrer Odeya film title track release date announced. Odeya title track will release on November 8th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X