For Quick Alerts
  ALLOW NOTIFICATIONS  
  For Daily Alerts

  ಬ್ರೇಕ್‌ ಬಳಿಕ ಅಖಾಡಕ್ಕೆ ಸಜ್ಜಾದ ಡಿ ಬಾಸ್: ಹೊಸ ಲುಕ್, ಹೊಸ ಸ್ಟೈಲ್!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಮಂದಿರಗಳಿಗೆ ಅವಕಾಶ ಸಿಗುತ್ತಿದ್ದಂತೆ ರಿಲೀಸ್ ದಿನಾಂಕ ಘೋಷಿಸಿ ಪ್ರೇಕ್ಷಕರ ಮುಂದೆ ಬರುವ ತಯಾರಿ ನಡೆಸಿದೆ.

  ಎಲ್ಲ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ ತಿಂಗಳಲ್ಲಿ ರಾಬರ್ಟ್ ತೆರೆಗೆ ಬರಬೇಕಿತ್ತು. ಆದ್ರೆ, ಕೊರೊನಾ ಲಾಕ್‌ಡೌನ್ ಎಲ್ಲದಕ್ಕೂ ಮುಳುವಾಯಿತು. ಅಲ್ಲಿಂದ ನಟ ದರ್ಶನ್ ಸಂಪೂರ್ಣವಾಗಿ ವಿಶ್ರಾಂತಿಯಲ್ಲಿದ್ದಾರೆ. ಮೈಸೂರು ಫಾರ್ಮ್ ಹೌಸ್, ಪ್ರಾಣಿಗಳ ಹಾರೈಕೆ ಹೀಗೆ ಖಾಸಗಿ ಜೀವನವನ್ನು ಎಂಜಾಯ್ ಮಾಡ್ತಿದ್ದರು. ಇದೀಗ, ಕೊರೊನಾ ಬ್ರೇಕ್ ಮುಗಿದಿದೆ. ಮತ್ತೆ ಶೂಟಿಂಗ್ ಆರಂಭಿಸುತ್ತಿದ್ದು, ಅದಕ್ಕಾಗಿ ಡಿ ಬಾಸ್ ಸಂಪೂರ್ಣವಾಗಿ ಲುಕ್ ಬದಲಾಯಿಸಿಕೊಂಡಿದ್ದಾರೆ. ಯಾವ ಚಿತ್ರಕ್ಕೆ? ಮುಂದೆ ಓದಿ...

  ಅಕ್ಟೋಬರ್‌ನಿಂದ ಮದಕರಿ ನಾಯಕ!

  ಅಕ್ಟೋಬರ್‌ನಿಂದ ಮದಕರಿ ನಾಯಕ!

  ಕೇರಳದಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ರಾಜವೀರ ಮದಕರಿ ನಾಯಕ ಚಿತ್ರತಂಡ ಈಗ ಮತ್ತೊಂದು ಹಂತದ ಶೂಟಿಂಗ್‌ಗೆ ಸಜ್ಜಾಗಿದೆ. ಅಕ್ಟೋಬರ್ ತಿಂಗಳಿನಿಂದ ಮದಕರಿ ನಾಯಕ ಮತ್ತೆ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ರಾಕ್ಲೈನ್ ವೆಂಕಟೇಶ್ 'ಮದಕರಿ ನಾಯಕ' ಚಿತ್ರ ಮಾಡಲು 'ಈ ವ್ಯಕ್ತಿ' ಪ್ರೇರಣೆ

  ಶೂಟಿಂಗ್‌ಗೆ ಡಿ ಬಾಸ್ ರೆಡಿ

  ಶೂಟಿಂಗ್‌ಗೆ ಡಿ ಬಾಸ್ ರೆಡಿ

  ರಾಜವೀರ ಮದಕರಿ ನಾಯಕ ಚಿತ್ರೀಕರಣಕ್ಕಾಗಿ ದರ್ಶನ್ ರೆಡಿಯಾಗಿದ್ದಾರೆ. ಐತಿಹಾಸಿಕ ಚಿತ್ರಕ್ಕಾಗಿ ದರ್ಶನ್ ಸಜ್ಜಾಗಿದ್ದು, ಮೀಸೆ ಫುಲ್ ಟ್ರಿಂ ಮಾಡಿದ್ದು, ಹೇರ್‌ ಸ್ಟೈಲ್ ಸಹ ಬದಲಾಯಿಸಿಕೊಂಡಿದ್ದಾರೆ. ಆ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಕರ್ನಾಟಕದಲ್ಲೇ ಚಿತ್ರೀಕರಣ

  ಕರ್ನಾಟಕದಲ್ಲೇ ಚಿತ್ರೀಕರಣ

  ರಾಜಸ್ಥಾನದಲ್ಲಿ ಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಮಾಡಬೇಕಿತ್ತು. ಕೊರೊನಾ ವೈರಸ್ ಭೀತಿಯಿರುವ ಕಾರಣ ಸದ್ಯಕ್ಕೆ ಬೆಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ ಸುತ್ತಮುತ್ತ ಶೂಟಿಂಗ್ ಮಾಡುವ ಪ್ಲಾನ್ ಆಗಿದೆ.

  ಐಪಿಎಲ್ ಮ್ಯಾಚ್ ನೋಡುವ ಮುನ್ನಾ ದರ್ಶನ್ ಹೇಳಿರುವ ಈ ಮಾತು ಕೇಳಿ

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ಸುಮಲತಾ ಸಹ ನಟನೆ

  ಸುಮಲತಾ ಸಹ ನಟನೆ

  ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣವಿದೆ. ಸಂಸದೆ ಸುಮಲತಾ ಅಂಬರೀಶ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಂಸಲೇಖ ಅವರ ಸಂಗೀತ ಇರಲಿದೆ.

  English summary
  Challening stars Darshan Starrer Rajaveera Madakari Nayaka movie shooting to resume in October. the movie directed by SV Rajendra singh babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X