For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' 2ನೇ ಲುಕ್: ಆಂಜನೇಯನ ಅವತಾರವೆತ್ತಿ ಬಂದ ದರ್ಶನ್

  |
  Robert : Darshan as Hanuman is getting all attention for 2nd poster | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ರಾಬರ್ಟ್ ಚಿತ್ರದ ಎರಡನೇ ಲುಕ್ ರಿಲೀಸ್ ಆಗಿದೆ. ಸಂಕ್ರಾಂತಿ ವಿಶೇಷವಾಗಿ ಚಿತ್ರತಂಡ ಡಿ ಬಾಸ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹನುಮನ ಅವತಾರವೆತ್ತಿ ಎಂಟ್ರಿ ಕೊಟ್ಟಿದ್ದಾರೆ.

  'ರಾಬರ್ಟ್' ಬಿಗ್ ನ್ಯೂಸ್: ತ್ರಿಪಾತ್ರದಲ್ಲಿ ಡಿ ಬಾಸ್ ದರ್ಶನ್!'ರಾಬರ್ಟ್' ಬಿಗ್ ನ್ಯೂಸ್: ತ್ರಿಪಾತ್ರದಲ್ಲಿ ಡಿ ಬಾಸ್ ದರ್ಶನ್!

  ಚಿತ್ರದ ಎರಡನೇ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಜೈ ಶ್ರೀರಾಮ್ ಬ್ಯಾಗ್ರೌಂಡ್ ನಲ್ಲಿ ಆಂಜನೇಯನ ಅವತಾರದಲ್ಲಿ ಬಂದ ದರ್ಶನ್ ಗೆ ಅಭಿಮಾನಿಗಳು ಉಘೇ ಎನ್ನುತ್ತಿದ್ದಾರೆ. ಚಿತ್ರದ ಹೆಸರು ರಾಬರ್ಟ್ ಆದರೆ, ಆಂಜನೇಯನಾಗಿ ಎಂಟ್ರಿ ಕೊಟ್ಟಿರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

  ಎರಡನೇ ಲುಕ್ ಬಗ್ಗೆ

  ಎರಡನೇ ಲುಕ್ ಬಗ್ಗೆ

  ಬಿಲ್ಲು ಬಾಣ ಹಿಡಿದಿರುವ ರಾಮನನ್ನು ಭುಜದ ಮೇಲೆ ಕೂರಿಸಿಕೊಂಡು ಗದೆ ಹಿಡಿದು ಹನುಮನಾಗಿ ಬಂದಿರುವ ದರ್ಶನ್ ನೋಡಲು ಅಭಿಮಾನಿಗಳಿಗೆ ಎರಡು ಕಣ್ಣುಸಾಲುತ್ತಿಲ್ಲ. ಜೈ ಶ್ರೀರಾಮ್ ಬ್ಯಾಗ್ರೌಂಡ್ ಮ್ಯೂಸಿಕ್ ಮೋಷನ್ ಪೋಸ್ಟರ್ ನ ಖದರ್ ಅನ್ನು ಮತ್ತಷ್ಟು ಹೆಚ್ಚಿಸಿದಂತೆ ಇದೆ. ಶ್ರೀ ರಾಮಚಂದ್ರ ಭಗವಾನ್ ಕೀ ಜೈ ಎನ್ನುತ್ತ ಅಭಿಮಾನಿಗಳ ಕಿಕ್ ಏರಿಸುತ್ತಿದೆ.

  ದರ್ಶನ್ 'ರಾಜವೀರ ಮದಕರಿನಾಯಕ' ಚಿತ್ರದಿಂದ ಬಂತು ಭರ್ಜರಿ ಸುದ್ದಿದರ್ಶನ್ 'ರಾಜವೀರ ಮದಕರಿನಾಯಕ' ಚಿತ್ರದಿಂದ ಬಂತು ಭರ್ಜರಿ ಸುದ್ದಿ

  ಮೊದಲ ಲುಕ್ ರಾಬರ್ಟ್

  ಮೊದಲ ಲುಕ್ ರಾಬರ್ಟ್

  ಈಗಾಗಲೆ ರಿಲೀಸ್ ಆಗಿರುವ ಚಿತ್ರದ ಮೊದಲ ಲುಕ್ ರಾಬರ್ಟ್ ಅವತಾರದಲ್ಲಿ ಎಂಟ್ರಿ ಕೊಟ್ಟಿದ್ದರು. ಈಗ ಆಂಜನೇಯ ಅವತಾರದಲ್ಲಿ ಬಂದಿದ್ದಾರೆ. ಚಿತ್ರದಲ್ಲಿ ದರ್ಶನ್ ಮೂರು ಶೇಡ್ ನಲ್ಲಿ ಮಿಂಚಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಸದ್ಯ ರಿಲೀಸ್ ಆಗಿರುವ ಎರಡನೆ ಪೋಸ್ಟರ್ ಹೇಳುತ್ತಿದೆ ದರ್ಶನ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಖಚಿತವೆಂದು.

  ರಾಬರ್ಟ್, ಸಂಜಯ್ ಮತ್ತು ಅಕ್ಬರ್

  ರಾಬರ್ಟ್, ಸಂಜಯ್ ಮತ್ತು ಅಕ್ಬರ್

  ಚಿತ್ರದಲ್ಲಿ ದರ್ಶನ್ ರಾಬರ್ಟ್, ಸಂಜಯ್ ಹಾಗೂ ಅಕ್ಬರ್ ಎಂಬ ಮೂರು ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಈಗ ಎರಡು ಪೋಸ್ಟರ್ ರಿಲೀಸ್ ಆಗಿರುವುದು ರಾಬರ್ಟ್ ಮತ್ತು ಸಂಜಯ್ ಪಾತ್ರವನ್ನು ರಿವೀಲ್ ಮಾಡಿದ್ದಂತೆ ಇದೆ. ಈ ಎರಡು ಪೋಸ್ಟರ್ ಎರಡು ಧರ್ಮದ ಬಗ್ಗೆ ಹೇಳುತ್ತಿದೆ. ಅಕ್ಬರ್ ಪೋಸ್ಟರ್ ರಿಲೀಸ್ ಆದರೆ ದರ್ಶನ್ ಮೂರು ಧರ್ಮದಲ್ಲಿ ಕಾಣಿಸಿಕೊಂಡಂತೆ ಆಗುತ್ತೆ.

  ಏಪ್ರಿಲ್ ರಿಲೀಸ್ ಸಾಧ್ಯತೆ

  ಏಪ್ರಿಲ್ ರಿಲೀಸ್ ಸಾಧ್ಯತೆ

  ಬಹುನಿರೀಕ್ಷೆಯ ರಾಬರ್ಟ್ ಏಪ್ರಿಲ್ ಗೆ ರಿಲೀಸ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಪೋಸ್ಟರ್ ನಲ್ಲಿ ಬೇಸಿಗೆಗೆ ಬರುವುದು ಪಕ್ಕ ಎಂದು ಹೇಳಿದ್ದಾರೆ. ಏಪ್ರಿಲ್ ಮೊದಲ ವಾರ ಅಥವಾ ಎರಡನೇ ವಾರ ಚಿತ್ರಮಂದಿರಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಹಾಡಿನ ಚಿತ್ರೀಕರಣ ಬಾಕಿಯುಳಿಸಿಕೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

  ಈ ವಿಷ್ಯ ತಿಳಿದರೆ ದರ್ಶನ್ ಅಭಿಮಾನಿಗಳ ಮೇಲೂ ನಿಮಗೆ ಅಭಿಮಾನ ಹುಟ್ಟುತ್ತೆ.!ಈ ವಿಷ್ಯ ತಿಳಿದರೆ ದರ್ಶನ್ ಅಭಿಮಾನಿಗಳ ಮೇಲೂ ನಿಮಗೆ ಅಭಿಮಾನ ಹುಟ್ಟುತ್ತೆ.!

  ದೊಡ್ಡ ತಾರಬಳಗ ಚಿತ್ರದಲ್ಲಿದೆ

  ದೊಡ್ಡ ತಾರಬಳಗ ಚಿತ್ರದಲ್ಲಿದೆ

  ತರುಣ್ ಸುಧೀರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ರಾಬರ್ಟ್ ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ವಿನೋದ್ ಪ್ರಭಾಕರ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಜಗಪತಿ ಬಾಬು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ತೇಜಸ್ವಿನಿ, ಸೋನಲ್ ಕೂಡ ಮಿಂಚಿದ್ದಾರೆ. ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಗೌಡ ಈ ಸಿನಿಮಾ ನಿರ್ಮಿಸಿದ್ದಾರೆ.

  English summary
  Kannada actor Darshan starrer Roberrt film second look release for Sankranthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X