»   » ಹಿಂದಿಯಲ್ಲೂ ದರ್ಶನ್ ಗೆ ಮಾರ್ಕೆಟ್ ಕಮ್ಮಿ ಇಲ್ಲ ಸ್ವಾಮಿ.! ಸಾಕ್ಷಿ ಇಲ್ಲಿದೆ ನೋಡಿ...

ಹಿಂದಿಯಲ್ಲೂ ದರ್ಶನ್ ಗೆ ಮಾರ್ಕೆಟ್ ಕಮ್ಮಿ ಇಲ್ಲ ಸ್ವಾಮಿ.! ಸಾಕ್ಷಿ ಇಲ್ಲಿದೆ ನೋಡಿ...

Posted By:
Subscribe to Filmibeat Kannada
ದರ್ಶನ್ ಗೆ ಹಿಂದಿಯಲ್ಲೂ ಮಾರ್ಕೆಟ್ ಕಮ್ಮಿ ಇಲ್ಲ ಸ್ವಾಮಿ | Filmibeat Kannada

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಬಾಕ್ಸ್ ಆಫೀಸ್ ಸುಲ್ತಾನ್' ಅಂತಲೇ ಹೆಸರುವಾಸಿ. 'ಕ್ರೇಜ್ ಕಾ ಬಾಪ್' ದರ್ಶನ್ ಸಿನಿಮಾಗಳು ತೆರೆಗೆ ಬಂದರೆ, ಗಲ್ಲಾಪೆಟ್ಟಿಗೆ ಧೂಳಿಪಟ ಆಗುವುದು ಗ್ಯಾರೆಂಟಿ.

ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ 'ದಾಸ' ದರ್ಶನ್ ಅವರಿಗೆ ಇಷ್ಟೊಂದು ಮಾರ್ಕೆಟ್ ಇದೆ ಅಂತ ಅಂದುಕೊಳ್ಳಬೇಡಿ. ಹಿಂದಿಯಲ್ಲೂ ದರ್ಶನ್ ಗೆ ಅಭಿಮಾನಿಗಳು ಇದ್ದಾರೆ. ಹಿಂದಿ ಭಾಷೆಗೆ ಡಬ್ ಆಗಿ ಬಿಡುಗಡೆ ಆಗುವ ದರ್ಶನ್ ರವರ ಕನ್ನಡ ಚಿತ್ರಗಳನ್ನ ಲಕ್ಷಾಂತರ ಮಂದಿ ನೋಡುತ್ತಾರೆ ಅಂದ್ರೆ ನೀವು ನಂಬ್ತೀರಾ.?

Darshan starrer Viraat hindi dubbed movie gets 8 million views in youtube

ಖಂಡಿತ ನಂಬಲೇಬೇಕು.. 2016 ರಲ್ಲಿ ಬಿಡುಗಡೆ ಆಗಿದ್ದ ದರ್ಶನ್ ಅಭಿನಯದ 'ವಿರಾಟ್' ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ವಿಮರ್ಶಕರಿಂದಲೂ 'ವಿರಾಟ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಿದ್ದರೂ, ಹಿಂದಿ ಭಾಷೆಯಲ್ಲಿ 'ವಿರಾಟ್' ಸಿನಿಮಾ ಸಂಚಲನ ಕ್ರಿಯೇಟ್ ಮಾಡಿದೆ.

ಜೀ ಕನ್ನಡ ವಿರುದ್ಧ ಕೆಂಗಣ್ಣು ಕಾರುತ್ತಿರುವ ದರ್ಶನ್ ಅಭಿಮಾನಿಗಳು! ಯಾಕ್ಗೊತ್ತಾ.?

Darshan starrer Viraat hindi dubbed movie gets 8 million views in youtube

ಕನ್ನಡದ 'ವಿರಾಟ್' ಚಿತ್ರ ಹಿಂದಿ ಭಾಷೆಗೆ ಡಬ್ ಆಗಿ ಕಳೆದ ವರ್ಷ ಬಿಡುಗಡೆ ಆಗಿತ್ತು. ಯೂಟ್ಯೂಬ್ ನಲ್ಲಿ ಎಂಬತ್ತು ಲಕ್ಷಕ್ಕೂ ಹೆಚ್ಚು ಮಂದಿ ಹಿಂದಿಯಲ್ಲಿ 'ವಿರಾಟ್' ಸಿನಿಮಾ ವೀಕ್ಷಣೆ ಮಾಡಿದ್ದಾರೆ.! ಎಂಬತ್ತು ಲಕ್ಷ ಅಂದ್ರೆ ಸುಮ್ನೆನಾ.? ಇದು ದಾಖಲೆ ಅಲ್ಲದೆ ಮತ್ತೇನು.? ಹಿಂದಿಯಲ್ಲೂ ದರ್ಶನ್ ಗೆ ದೊಡ್ಡ ಮಾರ್ಕೆಟ್ ಇದೆ ಅನ್ನೋದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ.?

ಅಂದ್ಹಾಗೆ, 'ವಿರಾಟ್' ಚಿತ್ರವನ್ನ ಹೆಚ್.ವಾಸು ನಿರ್ದೇಶನ ಮಾಡಿದ್ದರು. ದರ್ಶನ್ ಜೊತೆಗೆ ಚೈತ್ರ ಚಂದ್ರನಾಥ್, ಇಶಾ ಚಾವ್ಲಾ, ವಿದಿಶಾ ಶ್ರೀವಾಸ್ತವ್ ಅಭಿನಯಿಸಿದ್ದರು.

English summary
Challenging Star Darshan starrer 'Viraat' Hindi dubbed movie gets 8 million views in Youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X