For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಚಿತ್ರಕ್ಕಾಗಿ ದರ್ಶನ್ ತ್ಯಾಗ ಮಾಡಿದ್ದೇನು?

  |
  weekend with ramesh season 4 : ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸದೆ ಸುಮ್ಮನಾದ ಪ್ರೇಮ..!?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬಹುನಿರೀಕ್ಷೆಯ 'ರಾಬರ್ಟ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇಂದು(ಮೇ-6) 'ರಾಬರ್ಟ್' ಚಿತ್ರದ ಮುಹೂರ್ತ ನಡೆದಿದ್ದು ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮುಹೂರ್ತ ದಿನದಿಂದನೆ ಚಿತ್ರೀಕರಣ ಪ್ರಾರಂಭವಾಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 'ರಾಬರ್ಟ್' ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ.

  'ರಾಬರ್ಟ್' ತರುಣ್ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. 'ಚೌಕ' ಸಿನಿಮಾದ ನಂತರ ತರುಣ್ ನಿರ್ದೇಶನದ ಸಿನಿಮಾ. ಚೌಕ ಚಿತ್ರದಲ್ಲಿ ಖ್ಯಾತಿ ಗಳಿಸಿದ್ದ ದರ್ಶನ್ ಅವರ ರಾಬರ್ಟ್ ಪಾತ್ರ ಈಗ ಸಿನಿಮಾ ಆಗುತ್ತಿರುವುದು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

  'ರಾಬರ್ಟ್'ಗೆ ಐಶ್ವರ್ಯ ರೈ ನಾಯಕಿ : ದರ್ಶನ್ ಏನಂದ್ರು?

  ವಿಶೇಷ ಅಂದ್ರೆ ಇಂದಿನಿಂದ ಡಯಟ್ ಶುರು ಮಾಡಿದ್ದಾರೆ. ಚಿತ್ರಕ್ಕಾಗಿ ವರ್ಕೌಟ್ ಮಾಡುತ್ತಿರುವ ಡಿ ಬಾಸ್ ಈ ಚಿತ್ರಕ್ಕಾಗಿ ಒಂದು ದೊಡ್ಡ ತ್ಯಾಗ ಮಾಡಿದ್ದಾರೆ. ಹೌದು, 'ರಾಬರ್ಟ್' ಗಾಗಿ ಅನ್ನ ತಿನ್ನುವುದನ್ನು ಬಿಟ್ಟಿದ್ದಾರೆ. ಈ ಬಗ್ಗೆ ಇಂದು ಸಿನಿಮಾ ಮುಹೂರ್ತದಲ್ಲಿ ಮಾತನಾಡಿದ ದರ್ಶನ್ "ತರುಣ್ ಇಂದಿನಿಂದ ಅನ್ನ ಕಟ್ ಮಾಡಿದ್ದಾರೆ, ಊಟ ಕಿತ್ತುಕೊಂಡಿದ್ದಾರೆ" ಎಂದು ಹೇಳಿದ್ದಾರೆ.

  ದರ್ಶನ್ ವರ್ಕೌಟ್ ಮಾಡದೆ ಅನೇಕ ದಿನಗಳಾಗಿತ್ತು. ಕೈಗೆ ಏಟು ಮಾಡಿಕೊಂಡಿದ್ದ ದರ್ಶನ್ ವರ್ಕೌಟ್ ನಿಂದ ದೂರ ಉಳಿದಿದ್ದರು. 'ಐರಾವತ' ಚಿತ್ರದಲ್ಲಿ ದೇಹಹುರಿಗೊಳಿಸಿ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ಈಗ 'ರಾಬರ್ಟ್' ಗಾಗಿ ಮತ್ತೆ ವರ್ಕೌಟ್ ಶುರುಮಾಡಿದ್ದಾರೆ. ವಿಶೇಷ ಅಂದ್ರೆ ದಾಡಿ ಬಿಟ್ಟು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ದರ್ಶನ್ 'ರಾಬರ್ಟ್' ಸಿನಿಮಾದಲ್ಲಿ ಇದುವರೆಗೂ ಕಣಿಸಿಕೊಳ್ಳದೆ ಇರುವಂತಹ ಗೆಟಪ್ ನಲ್ಲಿ ಕಾಣಿಸಲಿದ್ದಾರಂತೆ. ಈಗಾಗಲೆ ವಿಭಿನ್ನ ಫೋಟೋ ಶೂಟ್ ಗಾಗಿ ಭರ್ಜರಿ ತಯಾರಿ ನಡೆಯುತ್ತಿದೆಯಂತೆ.

  English summary
  chalening star darshan started the diet for his robert movie. This movie is directed by tarun sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X