For Quick Alerts
  ALLOW NOTIFICATIONS  
  For Daily Alerts

  ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ ನಟ ದರ್ಶನ್

  By Suneetha
  |

  ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿ, ಇಡೀ ಕರ್ನಾಟಕವೇ ಪ್ರತಿಭಟನೆ ಕೈಗೊಂಡಿದೆ. ಪ್ರತಿಭಟನಾಕಾರರ ಆಕ್ರೋಶ ಮುಗಿಲು ಮುಟ್ಟಿದೆ.

  ಸೋಮವಾರ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ, ಮಂಡ್ಯ, ಶ್ರೀರಂಗಪಟ್ಟಣ, ಬೆಳಗೋಳ, ಕೆ.ಆರ್.ಎಸ್, ಬೆಂಗಳೂರು ಸೇರಿದಂತೆ ವಿವಿಧೆಡೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.[ಕಾವೇರಿ ತೀರ್ಪು ಖಂಡಿಸಿ ರಕ್ಷಣಾ ವೇದಿಕೆಯಿಂದ ಪಂಜಿನ ಮೆರವಣಿಗೆ]

  ಇನ್ನು ಸೆಪ್ಟೆಂಬರ್ 9 ರಂದು ಇಡೀ ಕರ್ನಾಟಕ ಬಂದ್ ಗೆ ವಾಟಾಳ್ ನಾಗರಾಜ್ ಅವರು ಕರೆ ನೀಡಿದ್ದಾರೆ. ಇದಕ್ಕೆ ಕನ್ನಡ ಚಿತ್ರರಂಗ ಕೂಡ ಹೊರತಾಗಿಲ್ಲ. ಕರ್ನಾಟಕ ಚಲನಚಿತ್ರ ಅಕಾಡೆಮಿ ಕೂಡ ಬೆಂಬಲ ಸೂಚಿಸಿ ಬಂದ್‌ ಗೆ ಕರೆ ಕೊಟ್ಟಿದೆ.[ಕಾವೇರಿ ವಿವಾದ : ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]

  ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ರೈತರ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಹೆಚ್ಚಿ ಮಾಹಿತಿಗಾಗಿ ಮುಂದಿನ ಸ್ಲೈಡ್ಸ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

  ಬಂದ್ ಗೆ ದರ್ಶನ್ ಬೆಂಬಲ

  ಬಂದ್ ಗೆ ದರ್ಶನ್ ಬೆಂಬಲ

  ಕರ್ನಾಟಕದಿಂದ ತಮಿಳುನಾಡಿಗೆ ಪ್ರತಿದಿನ ಸುಮಾರು 15 ಸಾವಿರ ಕ್ಯೂಸೆಕ್ ಗಳಂತೆ 10 ದಿನಗಳ ಕಾಲ ನೀರು ಹರಿಸಬೇಕು, ಎಂಬ ಆದೇಶವನ್ನು ಸುಪ್ರೀಂ ಕೋರ್ಟ್ ಹೊರಡಿಸಿದ ಪರಿಣಾಮ ಮಂಡ್ಯದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಆದ್ದರಿಂದ ನಟ ದರ್ಶನ್ ಅವರು ವಿಭಿನ್ನವಾಗಿ ಬೆಂಬಲ ಸೂಚಿಸಿದ್ದಾರೆ.['ನಾಗರಹಾವು' ಸೆಟ್ ನಲ್ಲಿ 'ರಾಜಕಾಲುವೆ' ಬಗ್ಗೆ ಗುಡುಗಿದ ದರ್ಶನ್]

  ಚಿತ್ರೀಕರಣ ಬಂದ್

  ಚಿತ್ರೀಕರಣ ಬಂದ್

  ಮಂಡ್ಯದಲ್ಲಿ ರೈತರ ಹೋರಾಟಕ್ಕೆ ಮುಕ್ತ ಬೆಂಬಲ ಸೂಚಿಸಿರುವ ನಟ ದರ್ಶನ್ ಅವರು, ಇಂದು ನಡೆಯಬೇಕಿದ್ದ ತಮ್ಮ ಹೊಸ ಚಿತ್ರ 'ಚಕ್ರವರ್ತಿ' ಶೂಟಿಂಗ್ ರದ್ದುಗೊಳಿಸಿದ್ದಾರೆ.[ದರ್ಶನ್ 'ಚಕ್ರವರ್ತಿ'ಯಲ್ಲಿ 'ಡೆಡ್ಲಿ' ಆದಿತ್ಯ ಪಾತ್ರ ಏನು.?]

  ಎಲ್ಲೆಲ್ಲಿ ಶೂಟಿಂಗ್

  ಎಲ್ಲೆಲ್ಲಿ ಶೂಟಿಂಗ್

  ಸದ್ಯಕ್ಕೆ 'ಚಕ್ರವರ್ತಿ' ಚಿತ್ರದ ಎರಡನೇ ಹಂತದ ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಸಾಗಿತ್ತು. ಇನ್ನು ಇಂದು ಮಂಡ್ಯ ಮತ್ತು ಮಡಿಕೇರಿಯಲ್ಲಿ ನಡೆಯಬೇಕಿದ್ದ ಶೂಟಿಂಗ್ ಅನ್ನು ಸ್ವತಃ ದರ್ಶನ್ ಅವರು ನಿಲ್ಲಿಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.['ನೀರ್ ದೋಸೆ'ಗೆ ಬಂಪರ್ ಹೊಡೆದ್ಹಾಗೆ 'ಮುಂಗಾರು ಮಳೆ-2'ಗಾಗೋದು ಡೌಟು!]

  ಮಂಡ್ಯದಲ್ಲಿ ತೀವ್ರವಾದ ಪ್ರತಿಭಟನೆ

  ಮಂಡ್ಯದಲ್ಲಿ ತೀವ್ರವಾದ ಪ್ರತಿಭಟನೆ

  ಮಂಡ್ಯದಲ್ಲಿ ರೈತರ ಆಕ್ರೋಶ ಹೆಚ್ಚಾಗಿದ್ದು, ನಗರದ ಸಂಜಯ್ ಥಿಯೇಟರ್ ಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಹಾಕಿದ್ದ ಬೃಹತ್ ಫ್ಲೆಕ್ಸ್ ಗಳನ್ನು ಕೆಡವಿದ್ದಾರೆ. ಜೊತೆಗೆ ಅಂಬರೀಶ್ ಅವರ ಬೃಹತ್ ಕಟೌಟ್ ಗಳನ್ನು ಹರಿದು ಹಾಕಿದ್ದಾರೆ.

  English summary
  Kannada Actor Darshan stopped 'Chakravarthy' shooting today (September 6th) to show support to Cauvery protest. Kannada Actor Aditya, Actress Deepa Sannidhi, Kannada Actor Srujan Lokesh in the lead role. The movie is directed by Chintan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X