For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು?

  |
  ಮಂಡ್ಯದ ಪ್ರಚಾರದಲ್ಲಿ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ನಟ ದರ್ಶನ್ | Lok Sabha Elections 2019

  ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಪ್ರಚಾರ ಮಾಡುತ್ತಿದ್ದಾರೆ. ಸತತವಾಗಿ ಹತ್ತಕ್ಕೂ ಹೆಚ್ಚು ದಿನ ಮಂಡ್ಯದ ಹಳ್ಳಿಗಳಲ್ಲಿ ಜೋಡೆತ್ತು ಮತಯಾಚನೆ ಮಾಡುತ್ತಿದೆ.

  ಸಿನಿಮಾ ನಟರು ಅಂದ್ಮೇಲೆ ಅವರ ಅಭಿಮಾನಿಗಳು ಹೆಚ್ಚು ಸೇರೋದು ಸಹಜ. ಇನ್ನು ಅಷ್ಟು ಅಭಿಮಾನಿಗಳು ಬಂದ್ಮೇಲೆ ಸುಮ್ಮನೆ ಇರ್ತಾರಾ. ಬಾಸ್ ಡೈಲಾಗ್ ಹೇಳಿ, ಹಾಡು ಹೇಳಿ, ಡ್ಯಾನ್ಸ್ ಮಾಡಿ ಎಂಬ ಬೇಡಿಕೆಗಳನ್ನ ಇಡ್ತಾರೆ.

  ಪ್ರಚಾರದಲ್ಲಿ ದರ್ಶನ್ ಗೆ ಹಾಡೇಳುವಂತೆ ವೃದ್ದೆ ಮನವಿ: ಡಿ ಬಾಸ್ ಏನಂದ್ರು?

  ಚುನಾವಣೆ ಪ್ರಚಾರ ಆಗಿರುವುದರಿಂದ ಆದಷ್ಟೂ ಇದನ್ನೆಲ್ಲಾ ಮಾಡಲ್ಲ ಸ್ಟಾರ್ಸ್. ಆದ್ರೂ ಕೆಲವು ಕಡೆ ಭಾರಿ ಒತ್ತಾಯಕ್ಕೆ ಮಣಿದು ಡೈಲಾಗ್ ಅಥವಾ ಹಾಡು ಹೇಳಲೇಬೇಕಾಗುತ್ತೆ. ಹೀಗೆ ಒಂದು ಕಡೆ ಫ್ಯಾನ್ಸ್ ಕೇಳಿದ್ರು ಅಂತ ದರ್ಶನ್ ಡೈಲಾಗ್ ಹೊಡೆದ್ರು. ಆಮೇಲೆ ಅರ್ಧಕ್ಕೆ ನಿಲ್ಲಿಸಿ ಬೇಡ ಸುಮ್ಮನಿರಪ್ಪಾ ಅಂದ್ರು. ಯಾಕೆ ಅಂತನೂ ಅವರೆ ಹೇಳಿದ್ರು. ಯಾಕೆ ಅಂತ ತಿಳಿಯಲು ಮುಂದೆ ಓದಿ....

  ಯಜಮಾನ ಡೈಲಾಗ್ ಹೇಳಿದ ದಚ್ಚು

  ಯಜಮಾನ ಡೈಲಾಗ್ ಹೇಳಿದ ದಚ್ಚು

  'ಹೇ ಕ್ಯಾಡ್ಬರೀಸ್..... ಆನೆ ನಡೆದಿದ್ದೇ ದಾರಿ...ಬರ್ತಾ ಇದ್ದೇವೆ....' ಎಂದು ಹೇಳಿದ ದರ್ಶನ್, ಸಾಕು ಬಿಡ್ರಪ್ಪಾ ಮುಂದೆ ಹೇಳಿದ್ರೆ ಕಾಂಟ್ರವರ್ಸಿ ಆಗುತ್ತೆ ಅಂತ ನಿಲ್ಲಿಸಿದರು. ಹೌದು, ಸದ್ಯಕ್ಕೆ ಮಂಡ್ಯದ ರಣರಂಗದಲ್ಲಿ ಏನೇ ಮಾತನಾಡಿದ್ರು ಟಾಂಗ್, ತಿರುಗೇಟು ಕೊಟ್ರು ಎಂದು ಬಿಂಬಿತವಾಗುತ್ತಿದೆ. ಇದೇ ಆತಂಕದಲ್ಲಿ ದರ್ಶನ್ ಡೈಲಾಗ್ ಬೇಡ ಅಂತ ಸುಮ್ಮನಾದರು.

  ಆಗಲೂ ಕೌಂಟರ್ ಎಂದಿದ್ದರು

  ಆಗಲೂ ಕೌಂಟರ್ ಎಂದಿದ್ದರು

  ಯಜಮಾನ ಟ್ರೈಲರ್ ರಿಲೀಸ್ ಆದಾಗಲೂ ಈ ಡೈಲಾಗ್ ಸದ್ದು ಮಾಡಿತ್ತು. ಪರೋಕ್ಷವಾಗಿ ಬೇರೆ ನಟರಿಗೆ ಟಾಂಗ್ ಕೊಟ್ಟಿದ್ದಾರೆ ಎಂದು ಗಾಂಧಿನಗರದಲ್ಲಿ ಗುಸುಗುಸು ಎಂದಿದ್ದರು. ಇದೀಗ, ಮಂಡ್ಯ ಪ್ರಚಾರದಲ್ಲಿ ಈ ಡೈಲಾಗ್ ಹೇಳಿದ್ರೆ, ಪರೋಕ್ಷವಾಗಿ ಎದುರಾಳಿ ಅಭ್ಯರ್ಥಿಗೆ ಕೌಂಟರ್ ಕೊಟ್ಟರು ಎಂದುಬಿಡುತ್ತಾರೆ ಎಂಬ ವಿಷ್ಯ ದರ್ಶನ್ ಅವರಿಗೆ ಮೊದಲೇ ಮನವರಿಕೆ ಆಗಿದೆ. ಹಾಗಾಗಿ, ಆ ಡೈಲಾಗ್ ಹೇಳೋದನ್ನ ಅರ್ಧಕ್ಕೆ ಬಿಟ್ಟರು.

  ಚುನಾವಣೆಗಳಲ್ಲಿ ದರ್ಶನ್ ಪ್ರಚಾರ ಮಾಡೋದು ಈ ಒಂದೇ ಕಾರಣಕ್ಕೆ

  ಹಾಡು ಹೇಳಿ ಎಂದಿದ್ದ ಅಜ್ಜಿ

  ಹಾಡು ಹೇಳಿ ಎಂದಿದ್ದ ಅಜ್ಜಿ

  ಇನ್ನು ಹಳ್ಳಿಯೊಂದರ ಪ್ರಚಾರದ ವೇಳೆ ಅಜ್ಜಿಯೊಬ್ಬರ ನಟ ದರ್ಶನ್ ಗೆ, ಒಂದು ಹಾಡು ಹೇಳಪ್ಪಾ ಎಂದು ಕೇಳಿಕೊಂಡಿದ್ದರು. ಅದಕ್ಕೆ ದರ್ಶನ್ ಅವರು, 'ಅವ್ವ ಸುಮಲತಾ ಅವರನ್ನ ಗೆಲ್ಲಿಸಿ, ನಿಮ್ಮ ಜೊತೆ ಡ್ಯುಯೆಟ್ ಹಾಡ್ತೀನಿ' ಎಂದಿದ್ದರು.

  ''ನೀವು ಮೋದಿ ಫ್ಯಾನಾ?'' ಎಂಬ ಪ್ರಶ್ನೆಗೆ ದರ್ಶನ್ ನೀಡಿದ ಉತ್ತರವಿದು!

  ಅಜ್ಜಿ ಮನೆಗೆ ಭೇಟಿ ನೀಡಿದ ಯಶ್

  ಅಜ್ಜಿ ಮನೆಗೆ ಭೇಟಿ ನೀಡಿದ ಯಶ್

  ಈ ಕಡೆ ರಾಕಿಂಗ್ ಸ್ಟಾರ್ ಯಶ್ ಅವರ ಬಳಿಯೂ ಅಭಿಮಾನಿಗಳು ಡೈಲಾಗ್ ಹೇಳಿ, ಹಾಡು ಹೇಳಿ ಎಂದು ಕೇಳುತ್ತಿದ್ದಾರೆ. ಯಶ್ ಅವರು ಕೂಡ ಅದ್ಯಾಗೋ ಅಭಿಮಾನಿಗಳನ್ನ ಸಮಾಧಾನಪಡಿಸುತ್ತಾ ಪ್ರಚಾರ ಮಾಡುತ್ತಿದ್ದಾರೆ. ಹೀಗೆ, ಹಳ್ಳಿಯೊಂದರಲ್ಲಿ ಅಜ್ಜಿಯೊಬ್ಬರು ಮನೆಗೆ ಬನ್ನಿ ಎಂದು ಕರೆದಿದ್ದಕ್ಕೆ, ವಾಹನದಿಂದ ಕೆಳಗೆ ಇಳಿದು ಅಜ್ಜಿ ಮನೆಗೆ ಹೋಗಿದ್ದರು.

  ಮಂಡ್ಯ ಎಫೆಕ್ಟ್: ಒಂದೇ ಚಿತ್ರದಲ್ಲಿ ದರ್ಶನ್-ಯಶ್ ನಟನೆ.!

  English summary
  Kannada actor, challenging star darshan stopped yajamana movie dialogue before it completes in mandya campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X