»   » ದರ್ಶನ್ ಬಗ್ಗೆ ಸುದೀಪ್ ಹೇಳಿದ್ದು ಸುಳ್ಳಾ.? ಪಿ.ಎನ್.ಸತ್ಯ ಬಾಯ್ಬಿಟ್ಟ ಸತ್ಯ ಏನು.?

ದರ್ಶನ್ ಬಗ್ಗೆ ಸುದೀಪ್ ಹೇಳಿದ್ದು ಸುಳ್ಳಾ.? ಪಿ.ಎನ್.ಸತ್ಯ ಬಾಯ್ಬಿಟ್ಟ ಸತ್ಯ ಏನು.?

Posted By:
Subscribe to Filmibeat Kannada

''ಮಾತು ಆಡಿದರೆ ಹೋಯ್ತು... ಮುತ್ತು ಒಡೆದರೆ ಹೋಯ್ತು'' ಎಂಬ ಗಾದೆ ಮಾತು ಇಂದಿನ ಸ್ಯಾಂಡಲ್ ವುಡ್ ಬೆಳವಣಿಗೆಗೆ ಹೇಳಿಮಾಡಿಸಿದ್ದು. ಯಾಕಂದ್ರೆ, ವರ್ಷಗಳ ಹಿಂದೆ ಸುದೀಪ್ ಆಡಿದ ಒಂದೇ ಒಂದು ಮಾತು ಇಂದು ಇಷ್ಟೆಲ್ಲ ರಾದ್ಧಾಂತದ ಕೇಂದ್ರಬಿಂದು.

''ಮೆಜೆಸ್ಟಿಕ್' ಚಿತ್ರಕ್ಕೆ ದರ್ಶನ್ ರವರನ್ನ ನಾನು ಸೂಚಿಸಿದ್ದೆ'' ಎಂದು ಸಂದರ್ಶನವೊಂದರಲ್ಲಿ ಸುದೀಪ್ ಹೇಳಿರುವುದು 'ದಾಸ'ನ ಆಕ್ರೋಶಕ್ಕೆ ಕಾರಣವಾಗಿದೆ.[ನಾನು ಸುದೀಪ್ ಇನ್ಮುಂದೆ ಗೆಳೆಯರಲ್ಲ : ದರ್ಶನ್ ತೂಗುದೀಪ]

ಅಸಲಿಗೆ, ದರ್ಶನ್ ಹೆಸರನ್ನು ಸುದೀಪ್ ಸೂಚಿಸಿದ್ರಾ.? ಸುದೀಪ್ ಬಳಿ 'ಮೆಜೆಸ್ಟಿಕ್' ಕಥೆ ಹೇಳಲು ಹೋದಾಗ ನಿರ್ದೇಶಕ ಪಿ.ಎನ್.ಸತ್ಯ ರವರ ಬಳಿ ಸುದೀಪ್ ಹೇಳಿದ್ದೇನು.? ಸಂಪೂರ್ಣ ವರದಿ ಇಲ್ಲಿದೆ. ಓದಿರಿ.... [ಟ್ವಿಟ್ಟರ್ ಹ್ಯಾಕ್ ಆಗಿಲ್ಲ, ಇದು ನನ್ನದೇ ಖಾತೆ : ದರ್ಶನ್]

'ಮೆಜೆಸ್ಟಿಕ್' ಕಥೆ ರೆಡಿ ಮಾಡಿದ್ದು ಪಿ.ಎನ್.ಸತ್ಯ

''ಕಥೆ ಮಾಡಿದ್ದು ಪಿ.ಎನ್.ಸತ್ಯ. ಅಣಜಿ ನಾಗರಾಜ್ ಮತ್ತು ಬಾ.ಮಾ.ಹರೀಶ್ ಜೊತೆಯಲ್ಲಿ ಇದ್ದರು. ಕಥೆ ಹೇಳುವುದಕ್ಕೆ ಸರೋವರ್ ಹೋಟೆಲ್ ಗೆ ಸತ್ಯ ಹಾಗೂ ರಮೇಶ್ ಅವರನ್ನ ಕಳುಹಿಸಿದ್ವಿ'' - ರಾಮಮೂರ್ತಿ, 'ಮೆಜೆಸ್ಟಿಕ್' ನಿರ್ಮಾಪಕ.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

'ಮೆಜೆಸ್ಟಿಕ್' ಕಥೆ ರೆಡಿ ಆದ್ಮೇಲೆ....

''ಅಣಜಿ ನಾಗರಾಜ್ ಮತ್ತು ನಾನು 'ಮೆಜೆಸ್ಟಿಕ್' ಮಾಡಬೇಕು ಅಂತ ಮೊದಲು ಕಥೆ ಶುರು ಮಾಡಿದ್ವಿ. ಬೇರೆ ಬೇರೆ ನಟರ ಹತ್ತಿರ ಹೋದ್ವಿ. ಆದ್ರೆ, ಕಥೆ ರಿಜೆಕ್ಟ್ ಆಯ್ತು. ಅದಾದ್ಮೇಲೆ ಅಣಜಿ ನಾಗರಾಜ್ ರವರು ನನ್ನನ್ನ ಬಾ.ಮಾ.ಹರೀಶ್ ರವರಿಗೆ ಪರಿಚಯ ಮಾಡಿದರು. ಒಂದು ಲೈನ್ ಕಥೆ ಹೇಳಿದೆ. ಅವರಿಗೆ ಇಂಪ್ರೆಸ್ ಆಗಿ ಮಾರನೇ ದಿನ ರಾಮಮೂರ್ತಿ ರವರನ್ನ ಪರಿಚಯ ಮಾಡಿಸಿದರು'' - ಪಿ.ಎನ್.ಸತ್ಯ, 'ಮೆಜೆಸ್ಟಿಕ್' ನಿರ್ದೇಶಕ [ದರ್ಶನ್ 'ಮೆಜೆಸ್ಟಿಕ್' ಬಗ್ಗೆ ಸಂದರ್ಶನದಲ್ಲಿ ಸುದೀಪ್ ಹೇಳಿದ್ದೇನು? ಇಲ್ಲಿದೆ ನೋಡಿ]

ತಲೆಯಲ್ಲಿ ಯಾವ ಹೀರೋ ಕೂಡ ಇರಲಿಲ್ಲ

''ರಾಮಮೂರ್ತಿ ಟೈಮ್ ತಗೊಂಡು ಕಥೆ ಕೇಳಿದರು. ಹೀರೋ ಯಾರಾಗಬೇಕು ಅನ್ನೋದರ ಬಗ್ಗೆ ಡಿಸ್ಕಷನ್ ಮಾಡಿದ್ವಿ. ಕಥೆ ಬರೆಯುವಾಗ ಇಂಥವರಿಗೆ ಮಾಡಬೇಕು ಅಂತ ತಲೆಯಲ್ಲಿಟ್ಟುಕೊಂಡಿರಲಿಲ್ಲ. ಆ ತರಹ ಯಾವುದೇ ಆಲೋಚನೆ ಇರಲಿಲ್ಲ'' - ಪಿ.ಎನ್.ಸತ್ಯ, 'ಮೆಜೆಸ್ಟಿಕ್' ನಿರ್ದೇಶಕ [ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ಸುದೀಪ್ ರವರನ್ನ ಅಪ್ರೋಚ್ ಮಾಡಿದ್ದು ನಿಜ

''ನಮ್ಮ ಕಥೆ ಡಿಸ್ಕಷನ್ ಆಗುತ್ತಿದ್ದ ಸಂದರ್ಭದಲ್ಲಿ 'ಸ್ಪರ್ಶ' ರಿಲೀಸ್ ಆಗಿತ್ತು. ನವರಂಗ್ ಥಿಯೇಟರ್ ನಲ್ಲಿ 'ಸ್ಪರ್ಶ' ನೋಡಿದ್ದೆ. ಸುದೀಪ್ ರವರನ್ನ ಹಾಕಿಕೊಳ್ಳಬಹುದಾ ಅಂತ ರಾಮಮೂರ್ತಿ ಹಾಗೂ ಬಾ.ಮಾ.ಹರೀಶ್ ಬಳಿ ಡಿಸ್ಕಸ್ ಮಾಡಿದ್ದೆ. ನನ್ನ ಉದ್ದೇಶ ಏನಿತ್ತು ಅಂದ್ರೆ ನಿರ್ಮಾಪಕರು ಸೇಫ್ ಆಗಿರಬೇಕು. ಅವತ್ತು ಎಲ್ಲರೂ ಸುದೀಪ್ ರವರನ್ನ ಅಪ್ರೋಚ್ ಮಾಡೋಣ ಅಂತ ಹೋದ್ವಿ'' - ಪಿ.ಎನ್.ಸತ್ಯ, 'ಮೆಜೆಸ್ಟಿಕ್' ನಿರ್ದೇಶಕ [ಬಿಗ್ ಬ್ರೇಕಿಂಗ್: 'ಮೆಜೆಸ್ಟಿಕ್'ಗೂ ಸುದೀಪ್ ಗೂ ಸಂಬಂಧವಿಲ್ಲವೆಂದ ರಾಮಮೂರ್ತಿ]

ಪಿ.ಎನ್.ಸತ್ಯ ಬಾಯ್ಬಿಟ್ಟ ಸತ್ಯ

''ಸುದೀಪ್ ಕಥೆ ಕೇಳಿ... 'ಸ್ವಲ್ಪ ಯೋಚನೆ ಮಾಡಿ ಹೇಳುತ್ತೇನೆ' ಅಂತ ಹೇಳಿದರು. ಒಪ್ಪಿಗೆ ಇದ್ಯಾ ಇಲ್ವಾ ಅಂತ ಕೇಳಿದ್ದಕ್ಕೆ, ''ಈ ತರಹ ಶೈಲಿಯ ಸಿನಿಮಾ ಮಾಡೋಕೆ ನನಗೆ ಇಂಟ್ರೆಸ್ಟ್ ಇಲ್ಲ'' ಅಂತ ಹೇಳಿದರು. ಆಗ ನಮಗೆ ಮುಂದೇನು ಅಂತ ಕಾಡ್ತಿತ್ತು'' - ಪಿ.ಎನ್.ಸತ್ಯ, 'ಮೆಜೆಸ್ಟಿಕ್' ನಿರ್ದೇಶಕ ['ದರ್ಶನ್-ಸುದೀಪ್' ಬಿರುಕು: 'ಮೆಜೆಸ್ಟಿಕ್' ನಿರ್ಮಾಪಕ ಬಾ.ಮಾ ಹರೀಶ್ ಸ್ಪಷ್ಟನೆ!]

ಅಸಲಿ ಸತ್ಯ ಇದೇ.!

''ಆಗ ಅಣಜಿ ನಾಗರಾಜ್ ಶೂಟಿಂಗ್ ಮುಗಿಸಿಕೊಂಡು ಬಂದಿದ್ದರು. ಅವರು ತೂಗುದೀಪ ಶ್ರೀನಿವಾಸ್ ರವರ ಮಗ ನೋಡಿದ್ಯಾ ಅಂತ ಕೇಳಿದರು. ಆಗ ದರ್ಶನ್, ಎಸ್.ಎ.ಗೋವಿಂದ ರಾಜ್ ರವರ 'ಅಂಬಿಕಾ' ಸೀರಿಯಲ್ ನಲ್ಲಿ ಆಕ್ಟ್ ಮಾಡುತ್ತಿದ್ದರು. ಆ ಸೀರಿಯಲ್ ನೋಡಲು ರೂಮ್ ನಲ್ಲಿ ಅವತ್ತು ಕಾದು ಕುಳಿತ್ವಿ'' - ಪಿ.ಎನ್.ಸತ್ಯ, 'ಮೆಜೆಸ್ಟಿಕ್' ನಿರ್ದೇಶಕ [ಬೆಂಕಿ ಹೊತ್ತಿ ಉರಿಯುತ್ತಿದ್ದರೂ, ತುಟಿ ಎರಡು ಮಾಡಲು ಸುದೀಪ್ ರೆಡಿ ಇಲ್ಲ.!]

ದರ್ಶನ್ ಫಿಕ್ಸ್

''ಸೀರಿಯಲ್ ನೋಡಿ ಹೈಟ್ ಇದ್ದಾರೆ ಎಂದು ಡಿಸೈಡ್ ಮಾಡಿದ್ವಿ. ದರ್ಶನ್ ರವರ ಜೊತೆ ಮಾತನಾಡಲು ಉದಯ ಪ್ರಕಾಶ್ ಹತ್ತಿರ ನಂಬರ್ ತಗೊಂಡು ಕಾಯಿನ್ ಬೂತ್ ನಿಂದ ಫೋನ್ ಮಾಡಿದೆ. ನಮ್ಮ ಬಳಿ ಮೊಬೈಲ್ ಇರಲಿಲ್ಲ. ನಂತರ ಡೈರೆಕ್ಟ್ ಆಗಿ ಮಾತನಾಡಲು ಜೆ.ಪಿ.ನಗರಕ್ಕೆ ಹೋದ್ವಿ'' - ಪಿ.ಎನ್.ಸತ್ಯ, 'ಮೆಜೆಸ್ಟಿಕ್' ನಿರ್ದೇಶಕ

ದರ್ಶನ್ ತುಂಬಾ ಸಾಫ್ಟ್

''ನಂತರ ದರ್ಶನ್ ಜೊತೆ ಮಾತನಾಡಿದ್ವಿ, ಕಥೆ ಹೇಳಿದ್ವಿ. ಆಗ ರಾಮಮೂರ್ತಿ ಕೇಳಿದರು, ''ದರ್ಶನ್ ತುಂಬಾ ಸಾಫ್ಟ್ ಆಗಿ ಕಾಣ್ತಾರೆ ಈ ಪಾತ್ರ ಸರಿ ಹೊಂದುತ್ತಾ'' ಅಂತ. ಒಂದೇ ಒಂದು ಫೋಟೋ ಶೂಟ್ ಮಾಡ್ತೀವಿ ಅಂತ ಹೇಳಿದೆ'' - ಪಿ.ಎನ್.ಸತ್ಯ, 'ಮೆಜೆಸ್ಟಿಕ್' ನಿರ್ದೇಶಕ

ಫೋಟೋಶೂಟ್ ಹೇಗಾಯ್ತು.?

''ಮೇಕಪ್ ಮ್ಯಾನ್ ಇಲ್ಲದೇ ಕಾಸ್ಟ್ಯೂಮ್ ಇಲ್ಲದೇ ಫೋಟೋಶೂಟ್ ಮಾಡಿದ್ವಿ. ದರ್ಶನ್ ರವರೇ ಜೀನ್ಸ್ ಪ್ಯಾಂಟ್, ಕಾಂಟ್ಯಾಕ್ಟ್ ಲೆನ್ಸ್ ತಂದಿದ್ದರು. ಒಂದೇ ಒಂದು ಸ್ಟಿಲ್ ತೆಗೆದ್ವಿ'' - ಪಿ.ಎನ್.ಸತ್ಯ, 'ಮೆಜೆಸ್ಟಿಕ್' ನಿರ್ದೇಶಕ

ಅಣಜಿ ನಾಗರಾಜ್ ಹೇಳುವುದೇನು.?

''ಸತ್ಯ ನಿರ್ದೇಶಕ, ರಾಮಮೂರ್ತಿ ನಿರ್ಮಾಪಕ, ಬಾ.ಮಾ.ಹರೀಶ್ ಪ್ರೊಡಕ್ಷನ್ ನೋಡಿಕೊಳ್ತಿದ್ದರು ಅವಾಗ. ಸುದೀಪ್ ರವರಿಗೆ ಕಥೆ ಹೇಳಿದ್ವಿ. ಅವರು ಒಪ್ಪಲಿಲ್ಲ. ನಂತರ ನಾನು ದರ್ಶನ್ ರವರ ಹೆಸರನ್ನ ಹೇಳಿದೆ. ಸುದೀಪ್ ಅವರು ದರ್ಶನ್ ಹೆಸರನ್ನು ಹೇಳಿಲ್ಲ'' ಎನ್ನುತ್ತಾರೆ ಅಣಜಿ ನಾಗರಾಜ್

ಬಾ.ಮಾ.ಹರೀಶ್ ಹೀಗೆ ಹೇಳ್ತಾರೆ.?

''ಸುದೀಪ್ ರವರು ನನಗೆ ಆಪ್ತರಾಗಿದ್ದರು. ನನಗೆ ಅವರು ದರ್ಶನ್ ಹೆಸರನ್ನ ಸೂಚಿಸಿದ್ದರು. ಅವರು ಹೇಳಿದ ಮೇಲೆ ನನಗೆ ಧೈರ್ಯ ಬಂತು'' ಎನ್ನುತ್ತಾರೆ ಬಾ.ಮಾ.ಹರೀಶ್.[ಸುದೀಪ್-ದರ್ಶನ್ ಮಧ್ಯೆ ಮಾತ್ರ ಅಲ್ಲ, 'ಮೆಜೆಸ್ಟಿಕ್' ನಿರ್ಮಾಪಕರ ನಡುವೆಯೂ ಕಿತ್ತಾಟ.!]

ನಮಗೆ ಗೊತ್ತಿಲ್ಲ

''ಬಾ.ಮಾ.ಹರೀಶ್ ಬಳಿ ಸುದೀಪ್ ಹೇಳಿರುವುದು ನಮಗೆ ಗೊತ್ತಿಲ್ಲ'' ಅಂತ ಪಿ.ಎನ್.ಸತ್ಯ, ಅಣಜಿ ನಾಗರಾಜ್ ಹಾಗೂ ರಾಮಮೂರ್ತಿ ಹೇಳುತ್ತಾರೆ.

ಮರೆತಿರಬಹುದು.!

''ಸುದೀಪ್ ರವರು ದರ್ಶನ್ ಹೆಸರನ್ನು ಸೂಚಿಸಿರುವುದರ ಕುರಿತು ಪಿ.ಎನ್.ಸತ್ಯ ಹಾಗೂ ರಾಮಮೂರ್ತಿ ಬಳಿ ಹೇಳಿದ್ದೇನೆ. ಆದರೆ ಅವರು ಮರೆತುಹೋಗಿರಬಹುದು'' ಅಂತಾರೆ ಬಾ.ಮಾ.ಹರೀಶ್.

English summary
'Majestic' Director P.N.Satya has clarified over controversy between Sudeep and Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada