»   » ಗೆಳೆಯ ವಿನೋದ್ ಪ್ರಭಾಕರ್ ಬೆಂಬಲಕ್ಕೆ ನಿಂತ 'ದಾಸ' ದರ್ಶನ್

ಗೆಳೆಯ ವಿನೋದ್ ಪ್ರಭಾಕರ್ ಬೆಂಬಲಕ್ಕೆ ನಿಂತ 'ದಾಸ' ದರ್ಶನ್

Posted By:
Subscribe to Filmibeat Kannada

'ಮರಿ ಟೈಗರ್' ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಸಿನಿಮಾ ಈ ವಾರವಷ್ಟೇ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇದರ ಬೆನ್ನಲ್ಲೆ 'ಕ್ರ್ಯಾಕ್' ಚಿತ್ರಕ್ಕೆ ಮತ್ತು ವಿನೋದ್ ಪ್ರಭಾಕರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆಂಬಲವಾಗಿ ನಿಂತಿದ್ದಾರೆ.

ಹೌದು, ಸದ್ಯ ಹೈದರಾಬಾದ್ ನಲ್ಲಿ ಕುರುಕ್ಷೇತ್ರ ಚಿತ್ರದ ಶೂಟಿಂಗ್ ನಲ್ಲಿರುವ ಚಕ್ರವರ್ತಿ ದರ್ಶನ್, ತನ್ನ ಗೆಳೆಯನ ಚಿತ್ರದ ಬಗ್ಗೆ ಕಾಳಜಿ ವಹಿಸಿ, ಚಿತ್ರದ ಬಗ್ಗೆ ವರದಿ ಪಡೆದುಕೊಂಡು, ಸಲಹೆ ನೀಡಿದ್ದಾರೆ. ಮುಂದೆ ಓದಿ....

'ಕ್ರ್ಯಾಕ್' ಬಗ್ಗೆ ವರದಿ ಪಡೆದ ದಾಸ

'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣಕ್ಕಾಗಿ ಹೈದರಬಾದ್ ನಲ್ಲಿರುವ ನಟ ದರ್ಶನ್, 'ಕ್ರ್ಯಾಕ್' ಚಿತ್ರದ ವಿತರಕರ ಬಳಿ ವರದಿ ಪಡೆದುಕೊಂಡಿದ್ದಾರೆ. ಸಿನಿಮಾ ಹೇಗಿದೆ? ಒಪನಿಂಗ್ ಹೇಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

'ಡಿ' ಬಾಸ್ ಅಭಿಮಾನಿ ಅಂದ್ಮೇಲೆ ಧಿಮಾಕು ಸ್ವಲ್ಪ ಜಾಸ್ತಿನೇ ಇರುತ್ತೆ.!

'ಮರಿ ಟೈಗರ್'ಗೆ ಫೊನ್ ಮಾಡಿದ್ದ ದರ್ಶನ್

ವಿತರಕರಿಂದ ಚಿತ್ರದ ಬಗ್ಗೆ ವರದಿ ಪಡೆದ ನಂತರ ನಟ ವಿನೋದ್ ಪ್ರಭಾಕರ್ ಅವರಿಗೆ ದೂರವಾಣಿ ಕರೆ ಮಾಡಿ ದರ್ಶನ್ ಮಾತನಾಡಿದ್ದಾರೆ. ''ಚಿತ್ರ ಚೆನ್ನಾಗಿದೆ, ಸಿನಿಮಾ ಬಗ್ಗೆ ಒಳ್ಳೆಯ ಟಾಕ್ ಬಂದಿದೆ, ಇನ್ನು ಪಬ್ಲಿಸಿಟಿ ಮಾಡು'' ಎಂದು ಸಲಹೆ ನೀಡಿದ್ದಾರೆ.

ಗೆಳೆಯನ ಚಿತ್ರಕ್ಕೆ ದಾಸನ ಸಾಥ್

ನಟ ವಿನೋದ್ ಪ್ರಭಾಕರ್ ಮತ್ತು ದರ್ಶನ್ ಉತ್ತಮ ಸ್ನೇಹಿತರು. ಈ ಇಬ್ಬರು ಕನ್ನಡದ ಖ್ಯಾತ ಖಳನಟರು ಮಕ್ಕಳು ಎನ್ನುವುದು ಈ ಬಾಂಧವ್ಯಕ್ಕೆ ಕಾರಣ. ಹೀಗಾಗಿ, ದರ್ಶನ್ ಗೆ ಸಹಜವಾಗಿ ವಿನೋದ್ ಬಗ್ಗೆ ಕಾಳಜಿ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಈಗ ವಿನೋದ್ ಚಿತ್ರಕ್ಕೆ ಸಪೋರ್ಟ್ ಮಾಡ್ತಿದ್ದಾರೆ.

'Youtube'ನಲ್ಲಿ ಪರಭಾಷೆ ಚಿತ್ರಗಳಿಗೆ ಸೆಡ್ಡು ಹೊಡೆದು ನಿಂತ ಸ್ಯಾಂಡಲ್ ವುಡ್

ವಿನೋದ್ ಗೆ 'ಯಶಸ್ಸು' ಬೇಕಿದೆ

ಖ್ಯಾತ ಕಲಾವಿದ ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಹಲವು ವರ್ಷಗಳಿಂದ ಸಿನಿಮಾ ಮಾಡುತ್ತಿದ್ದಾರೆ. ಆದ್ರೆ, ನಿರೀಕ್ಷೆ ಮಟ್ಟದ ಯಶಸ್ಸು ಸಿಕ್ಕಿಲ್ಲ. ಹೀಗಾಗಿ, ವಿನೋದ್ ದೊಡ್ಡ ಬ್ರೇಕ್ ಬೇಕಿದೆ. ಇಂತಹ ಸಮಯದಲ್ಲಿ ದರ್ಶನ್ ಸಾಥ್ ಕೊಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ.

'ಕ್ರ್ಯಾಕ್' ಚಿತ್ರದ ಬಗ್ಗೆ....

ಕ್ರ್ಯಾಕ್' ಚಿತ್ರದಲ್ಲಿ ಪೊಲೀಸ್ ಆಫಿಸರ್ ಆಗಿ ಕಾಣಿಸಿಕೊಂಡಿರುವ ವಿನೋದ್ ಪ್ರಭಾಕರ್ ಗೆ ನಾಯಕಿಯಾಗಿ 'ಆರ್.ಎಕ್ಸ್ ಸೂರಿ' ಖ್ಯಾತಿಯ ನಟಿ ಆಕಾಂಕ್ಷ ಜೊತೆಯಾಗಿ ನಟಿಸಿದ್ದಾರೆ. ಈ ಹಿಂದೆ 'ಟೈಸನ್' ಚಿತ್ರವನ್ನ ನಿರ್ದೇಶನ ಮಾಡಿದ್ದು ರಾಮ್ ನಾರಾಯಣ್ ಎರಡನೇ ಬಾರಿ ವಿನೋದ್ ಗೆ ಆಕ್ಷನ್ ಕಟ್ ಹೇಳಿದ್ದಾರೆ.

English summary
Challenging Star Darshan Supports To Mari Tiger Vinod Prabhakar Starrer Crack Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada