For Quick Alerts
  ALLOW NOTIFICATIONS  
  For Daily Alerts

  ಫೆಬ್ರವರಿ 14 ಭಾರತದ ಪಾಲಿಗೆ ಕರಾಳ ದಿನ: ದರ್ಶನ್

  |

  ರೈತರ ಬಗ್ಗೆ ಹಾಗೂ ಸೈನಿಕರ ಅಪಾರ ಕಾಳಜಿ ಹೊಂದಿರುವ ದರ್ಶನ್, 'ಫೆಬ್ರವರಿ 14 ಭಾರತದ ಪಾಲಿಗೆ ಅತ್ಯಂತ ಕರಾಳ ದಿನ' ಎಂದು ಟ್ವೀಟ್ ಮಾಡಿದ್ದಾರೆ.

  ಇದೇ ಕಾರಣಕ್ಕೆ ಪೊಗರು ಆಡಿಯೋ ಬಿಡುಗಡೆಗೆ ಬರಲಿಲ್ಲ ಡಿ ಬಾಸ್ | Filmibeat Kannada

  2019 ರ ಫೆಬ್ರವರಿ 14 ರಂದು ಆದ ಪುಲ್ವಾಮಾ ದಾಳಿಯ ಕುರಿತು ಟ್ವೀಟ್ ಮಾಡಿರುವ ನಟ ದರ್ಶನ್, ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಟ್ವೀಟ್ ಮೂಲಕ ಗೌರವ ಸಮರ್ಪಿಸಿದ್ದಾರೆ.

  'ಕೆಲ ವರ್ಷಗಳ ಹಿಂದೆ ನಡೆದ ಪುಲ್ವಾಮಾ ದಾಳಿಯಿಂದಾಗಿ ಫೆಬ್ರವರಿ 14 ಭಾರತಕ್ಕೆ ಕರಾಳ ದಿನವಾಗಿ ಮಾರ್ಪಟ್ಟಿದೆ. ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ನನ್ನ್ ಗೌರವಗಳು, ಜೈ ಹಿಂದ್' ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

  ಹುತಾತ್ಮ ಯೋಧರನ್ನು ನೆನಪಿಸಿಕೊಂಡ ದರ್ಶನ್

  ಹುತಾತ್ಮ ಯೋಧರನ್ನು ನೆನಪಿಸಿಕೊಂಡ ದರ್ಶನ್

  ನಟ ದರ್ಶನ್ ಅವರು ರೈತರು, ಸೈನಿಕರು ಹಾಗೂ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಹಲವು ಬಾರಿ ಅವರು ರೈತರು, ಸೈನಿಕರ ಬಗ್ಗೆ ಮಾತನಾಡಿದ್ದಾರೆ. ತಮ್ಮ ಗೌರವ ಸಮರ್ಪಿಸಿದ್ದಾರೆ. ಇಂದೂ ಸಹ ದರ್ಶನ್ ಈ ಬಗ್ಗೆ ಟ್ವೀಟ್ ಮಾಡಿ, ಹುತಾತ್ಮ ಯೋಧರನ್ನು ನೆನಪಿಸಿಕೊಂಡಿದ್ದಾರೆ.

  ಕಾಮನ್ ಡಿಪಿ ಈಗಾಗಲೇ ಬಿಡುಗಡೆ ಆಗಿದೆ

  ಕಾಮನ್ ಡಿಪಿ ಈಗಾಗಲೇ ಬಿಡುಗಡೆ ಆಗಿದೆ

  ಇನ್ನೆರಡು ದಿನಕ್ಕೆ ದರ್ಶನ್ ಹುಟ್ಟುಹಬ್ಬವಿದೆ (ಫೆಬ್ರವರಿ 16) ಈಗಾಗಲೇ ದರ್ಶನ್ ಅಭಿಮಾನಿಗಳು ಕಾಮನ್ ಡಿಪಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕ್ಯಾಮೆರಾ ಹಿಡಿದು ವನ್ಯಜೀವಿಗಳ ಮಧ್ಯೆ ನಗುತ್ತಾ ಕೂತಿರುವ ದರ್ಶನ್ ರ ಚಿತ್ರ ಈ ಬಾರಿಯ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಆಗಿದೆ. ಹಲವಾರು ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಸಹ ದರ್ಶನ್ ಅವರ ಕಾಮನ್ ಡಿಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಹುಟ್ಟುಹಬ್ಬಕ್ಕೆ ಮನೆಯಲ್ಲಿ ಇರುವುದಿಲ್ಲ ಎಂದ ದರ್ಶನ್

  ಹುಟ್ಟುಹಬ್ಬಕ್ಕೆ ಮನೆಯಲ್ಲಿ ಇರುವುದಿಲ್ಲ ಎಂದ ದರ್ಶನ್

  ಆದರೆ ದರ್ಶನ್ ಅವರು ಈ ಹಿಂದೆಯೇ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿರುವಂತೆ, ಈ ಬಾರಿಯ ಹುಟ್ಟುಹಬ್ಬ ಆಚರಣೆ ಅತ್ಯಂತ ಸರಳವಾಗಿರಲಿದೆ. ಹಾಗಾಗಿ ಯಾರೂ ಅಭಿಮಾನಿಗಳು ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಹುಟ್ಟುಹಬ್ಬದ ದಿನದಂದು ತಾವು ಮನೆಯಲ್ಲಿ ಇರುವುದಿಲ್ಲ ಎಂದೂ ಸಹ ದರ್ಶನ್ ಹೇಳಿದ್ದಾರೆ.

  ಹುಟ್ಟುಹಬ್ಬಕ್ಕೆ ರಾಬರ್ಟ್ ಟ್ರೇಲರ್ ಬಿಡುಗಡೆ

  ಹುಟ್ಟುಹಬ್ಬಕ್ಕೆ ರಾಬರ್ಟ್ ಟ್ರೇಲರ್ ಬಿಡುಗಡೆ

  ಇನ್ನು ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ದರ್ಶನ್ ಹುಟ್ಟುಹಬ್ಬದಂದು ರಾಬರ್ಟ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಸಿನಿಮಾವು ಮಾರ್ಚ್ 11 ರಂದು ತೆಲುಗು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

  English summary
  Actor Darshan said February 14 black day for India because of Pulwama attack. He paid tribute to brave soldiers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X