For Quick Alerts
  ALLOW NOTIFICATIONS  
  For Daily Alerts

  ರೆಗ್ಯುಲರ್ ಚಿತ್ರ ಬಿಟ್ಟು ದರ್ಶನ್ ಕೈಯಲ್ಲಿದೆ 4 ವಿಶೇಷ ಕಥೆಗಳು!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಕ್ಕಾ ಕಮರ್ಷಿಯಲ್ ಹೀರೋ. ಡಿ ಬಾಸ್ ಚಿತ್ರಗಳಲ್ಲಿ ಫೈಟ್, ಸಾಂಗ್ಸ್, ಕಾಮಿಡಿ, ಆಕ್ಷನ್ ಇಲ್ಲ ಅಂದ್ರೆ ಅಭಿಮಾನಿಗಳಿಗೆ ಸಮಾಧಾನ ಆಗೋದೇ ಇಲ್ಲ. ದರ್ಶನ್ ಕೂಡ ತಮ್ಮ ಅಭಿಮಾನಿಗಳನ್ನು ನಿರಾಸೆ ಮಾಡದೆ ಕಮರ್ಷಿಯಲ್ ಚಿತ್ರಗಳನ್ನೇ ಹೆಚ್ಚು ಮಾಡುತ್ತಾರೆ.

  ರೆಗ್ಯುಲರ್ ಚಿತ್ರಗಳ ಮಧ್ಯೆ ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳ ಅವಕಾಶ ಬಂದ್ರೆ ಕಮರ್ಷಿಯಲ್ ಸಿನಿಮಾ ಬಿಟ್ಟು ಅಂತಹ ಸಿನಿಮಾಗಳಿಗೆ ಮೊದಲು ಅವಕಾಶ ಕೊಡ್ತಾರೆ ದರ್ಶನ್.

  'ಪುನೀತ್, ದರ್ಶನ್ ಬರಿ ಸಿನಿಮಾದಲ್ಲಿ ಹೀರೋ ಆಗ್ಬೇಡಿ': ಸ್ಟಾರ್ ನಟರನ್ನು ಟೀಕಿಸಿದ್ದ ಅಮೂಲ್ಯ'ಪುನೀತ್, ದರ್ಶನ್ ಬರಿ ಸಿನಿಮಾದಲ್ಲಿ ಹೀರೋ ಆಗ್ಬೇಡಿ': ಸ್ಟಾರ್ ನಟರನ್ನು ಟೀಕಿಸಿದ್ದ ಅಮೂಲ್ಯ

  ಈಗಾಗಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರ ಅಂತಹ ಸಿನಿಮಾ ಮಾಡಿ ಟ್ರೆಂಡ್ ಹುಟ್ಟುಹಾಕಿರುವ ಡಿ ಬಾಸ್, ಈಗ ರಾಜವೀರ ಮದಕರಿ ನಾಯಕ ಚಿತ್ರ ಮಾಡ್ತಿದ್ದಾರೆ. ಈ ಸಿನಿಮಾ ಆದ್ಮೇಲೂ ಕೂಡ ಇನ್ನು ಮೂರು ವಿಶೇಷ ಪ್ರಾಜೆಕ್ಟ್ ಡಿ ಬಾಸ್ ಬಳಿ ಇದೆ ಎಂಬ ಮಾಹಿತಿ ಹೊರಬಿದ್ದಿದೆ. ಯಾವ ಚಿತ್ರಗಳು? ಮುಂದೆ ಓದಿ....

  ಮೊದಲ ಹಂತ ಮುಗಿಸಿದ 'ಮದಕರಿ'

  ಮೊದಲ ಹಂತ ಮುಗಿಸಿದ 'ಮದಕರಿ'

  ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ರಾಜವೀರ ಮದಕರಿ ನಾಯಕ' ಸಿನಿಮಾದಲ್ಲಿ ದರ್ಶನ್ ನಾಯಕರಾಗಿದ್ದಾರೆ. ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದುರ್ಗದ ಪಾಳೇಗಾರರಲ್ಲಿ ಒಬ್ಬರಾದ ಮದಕರಿ ನಾಯಕನ ಕಥೆ ಇದಾಗಿದ್ದು, ಭಾರಿ ಕುತೂಹಲ ಹುಟ್ಟಿಸಿದೆ.

  ವಿಂಗ್ ಕಮಾಂಡರ್ ಅಭಿನಂದನ್

  ವಿಂಗ್ ಕಮಾಂಡರ್ ಅಭಿನಂದನ್

  ಪುಲ್ವಾಮಾ ದಾಳಿಯ ಬಳಿಕ ನಡೆದಿದ್ದ ಏರ್ ಸ್ಟ್ರೈಕ್ ನಲ್ಲಿ ಪಾಕಿಸ್ತಾನಕ್ಕೆ ಸೆರೆ ಸಿಕ್ಕಿ, ನಂತರ ಭಾರತಕ್ಕೆ ದೇಶಕ್ಕೆ ಮರಳಿದ್ದ 'ವಿಂಗ್ ಕಮಾಂಡರ್ ಅಭಿನಂದನ್' ಅವರ ಕಥೆಯಾಧರಿಸಿ ಸಿನಿಮಾ ಮಾಡುವುದಾಗಿ ನಿರ್ಮಾಪಕ ಮುನಿರತ್ನ ಘೋಷಿಸಿದ್ದರು. ಅದರಲ್ಲಿ ದರ್ಶನ್ ನಾಯಕರಾಗಿ ನಟಿಸಲಿದ್ದಾರೆ ಎಂದು ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಹಾಗಾಗಿ, ಈ ಚಿತ್ರ ಆರಂಭಕ್ಕೂ ಮುನ್ನವೇ ಭಾರಿ ಕುತೂಹಲ ಮೂಡಿಸಿದೆ.

  ಸಂಭಾವನೆ ವಿಷ್ಯದಲ್ಲಿ ನಿರ್ಮಾಪಕರಿಗೆ 'ಹೀಗೂ' ಹೇಳಿದ್ದಾರೆ ನಟ ದರ್ಶನ್.!ಸಂಭಾವನೆ ವಿಷ್ಯದಲ್ಲಿ ನಿರ್ಮಾಪಕರಿಗೆ 'ಹೀಗೂ' ಹೇಳಿದ್ದಾರೆ ನಟ ದರ್ಶನ್.!

  'ರಾಬರ್ಟ್' ನಿರ್ಮಾಪಕನ ಜೊತೆ ಐತಿಹಾಸಿಕ ಚಿತ್ರ

  'ರಾಬರ್ಟ್' ನಿರ್ಮಾಪಕನ ಜೊತೆ ಐತಿಹಾಸಿಕ ಚಿತ್ರ

  ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ ರಾಬರ್ಟ್ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಚಿತ್ರೀಕರಣ ಮುಗಿದಿದೆ. ಉಮಾಪತಿ ಗೌಡ ಈ ಚಿತ್ರ ನಿರ್ಮಿಸಿದ್ದಾರೆ. ಇದೀಗ, ಉಮಾಪತಿ ಜೊತೆ ಇನ್ನೊಂದು ಸಿನಿಮಾ ಮಾಡಲು ದರ್ಶನ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಇದು ಐತಿಹಾಸಿಕ ಚಿತ್ರ ಆಗಿರಲಿದೆ ಎನ್ನುವುದು ವಿಶೇಷ.

  'ಕುರುಕ್ಷೇತ್ರ' ನಂತರ ದರ್ಶನ್ ಜೊತೆ ಮುನಿರತ್ನ ಮತ್ತೊಂದು ಮೆಗಾ ಸಿನಿಮಾ'ಕುರುಕ್ಷೇತ್ರ' ನಂತರ ದರ್ಶನ್ ಜೊತೆ ಮುನಿರತ್ನ ಮತ್ತೊಂದು ಮೆಗಾ ಸಿನಿಮಾ

  ಕಥೆ ಬೇರೆಯವರ ಬಳಿ ಇದೆ

  ಕಥೆ ಬೇರೆಯವರ ಬಳಿ ಇದೆ

  ಅಂದ್ಹಾಗೆ, ದರ್ಶನ್ ಜೊತೆ ಮಾಡಬೇಕೆಂದುಕೊಂಡಿರುವ ಐತಿಹಾಸಿಕ ಸಿನಿಮಾದ ಕಥೆ ಬೇರೆಯವರ ಬಳಿ ಇದೆ. ಆ ಕಥೆಯನ್ನು ಬಿಟ್ಟುಕೊಡಿ ಎಂದು ಈಗಾಗಲೇ ಉಮಾಪತಿ ಶ್ರೀನಿವಾಸ್ ಮನವಿ ಮಾಡಿದ್ದಾರಂತೆ. ಕಥೆ ಬಿಟ್ಟುಕೊಡಲು ಅವರು ಒಪ್ಪಿದ್ದಾರಂತೆ. ಯಾರ ಕಥೆ ಎಂದು ಹೇಳದ ಉಮಾಪತಿ, ಕರ್ನಾಟಕದ ವೀರನೊಬ್ಬನ ಕಥೆ ಎಂದಷ್ಟೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

  ಜಗ್ಗೇಶ್ ಕರೆ ಮಾಡಿದ 1 ಗಂಟೆಯಲ್ಲಿ ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ಬಂದ ಡಿ ಬಾಸ್ಜಗ್ಗೇಶ್ ಕರೆ ಮಾಡಿದ 1 ಗಂಟೆಯಲ್ಲಿ ಕಿಲ್ಲರ್ ವೆಂಕಟೇಶ್ ಸಹಾಯಕ್ಕೆ ಬಂದ ಡಿ ಬಾಸ್

  ರಾವಣನ ಕಥೆಯೂ ಇದೆ!

  ರಾವಣನ ಕಥೆಯೂ ಇದೆ!

  ಕುರುಕ್ಷೇತ್ರ ಸಿನಿಮಾ ಮಾಡುವಾಗಲೇ ಡಿ ಬಾಸ್ ಬಳಿ ರಾವಣನ ಕಥೆ ಬಂದಿದೆಯಂತೆ. ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರ ದರ್ಶನ್ ಗೆ ರಾವಣನ ಕತೆ ಓದಲು ಸಲಹೆ ನೀಡಿದ್ದರಂತೆ. ಬಹುಶಃ, ಇದು ಕೂಡ ಸಿನಿಮಾ ಆಗಬಹುದು ಎಂಬ ಟಾಕ್ ಇದೆ. ಒಟ್ನಲ್ಲಿ ಈ ನಾಲ್ಕು ಕತೆಗಳು ಸಿನಿಮಾ ಆದಲ್ಲಿ ಡಿ ಬಾಸ್ ಭಕ್ತರಿಗೆ ಭರ್ಜರಿ ಮನರಂಜನೆ ಸಿಗಲಿದೆ.

  English summary
  Kannada actor Challenging star darshan set to play one more historical movie. robert producer umapathi planning to produce this project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X