»   » 'ವೀಕೆಂಡ್ ವಿತ್ ರಮೇಶ್' ಶೋಗೆ ವಿಜಯಲಕ್ಷ್ಮಿ ಕಾಲಿಡ್ಲಿಲ್ಲ! ಯಾಕೆ?

'ವೀಕೆಂಡ್ ವಿತ್ ರಮೇಶ್' ಶೋಗೆ ವಿಜಯಲಕ್ಷ್ಮಿ ಕಾಲಿಡ್ಲಿಲ್ಲ! ಯಾಕೆ?

Posted By:
Subscribe to Filmibeat Kannada

ವಿವಿಧ ರಂಗದಲ್ಲಿ ಸಾಧನೆ ಮಾಡಿರುವ ಸಾಧಕರನ್ನ ಕೆಂಪು ಕುರ್ಚಿ ಮೇಲೆ ಕೂರಿಸಿ, ಅವರ ಮೂಲಕವೇ, ಅವರ ಬದುಕನ್ನು, ಅವರ ಎದುರಿಗೆ ರಿವೈಂಡ್ ಮಾಡಿ ತೋರಿಸುವ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'.

ನಟ-ನಿರ್ದೇಶಕ ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸಾಧಕರ ಸೀಟ್ ನಲ್ಲಿ ಕುಳಿತಿದ್ದರು. ['ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು?]

ದರ್ಶನ್ ಬಾಲ್ಯ ಜೀವನ, ತಂದೆ ತೂಗುದೀಪ ಶ್ರೀನಿವಾಸ್ ತೀರಿಕೊಂಡ ನಂತರ ಪೈಸೆ ಪೈಸೆಗೂ ಕಷ್ಟ ಪಟ್ಟ ದರ್ಶನ್ ರವರ ನೋವಿನ ಕಥೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅನಾವರಣವಾಗಿತ್ತು.

ದರ್ಶನ್ ಬದುಕಿನ ಎಲ್ಲಾ ಸುಖ-ದುಃಖದ ದಿನಗಳನ್ನ ತೆರೆದಿಟ್ಟ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಒಂದು ವಿಚಾರದ ಬಗ್ಗೆ ಮಾತ್ರ ಕೈ ಹಾಕುವ ಗೋಜಿಗೆ ಹೋಗಲಿಲ್ಲ. ಮುಂದೆ ಓದಿ.....

ದರ್ಶನ್ ವೈವಾಹಿಕ ಬದುಕಿನ ಬಗ್ಗೆ ಮಾತೇ ಇಲ್ಲ!

ಒಂದ್ಕಡೆ 'ಬಿಗ್ ಬಾಸ್' ಫಿನಾಲೆ....ಇನ್ನೊಂದ್ಕಡೆ ದರ್ಶನ್ ಬದುಕಿನ ಕಥೆ....ಎರಡರ ಮಧ್ಯೆ ದರ್ಶನ್ ಜೀವನಗಾಥೆ ನೋಡಲು ಬಯಸಿದ ಪ್ರೇಕ್ಷಕರಿಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ 'ವೈವಾಹಿಕ ಬದುಕಿನ ದರ್ಶನ' ಆಗಲೇ ಇಲ್ಲ.[ವೀಕೆಂಡ್ ನಲ್ಲಿ ದರ್ಶನ್ ಬಗ್ಗೆ ಬುಲೆಟ್ ಪ್ರಕಾಶ್ ಏನೇನು ಹೇಳಿದ್ರು?]

ಎರಡು ಎಪಿಸೋಡ್ ಇತ್ತು!

ಎರಡು ಕಂತುಗಳಾಗಿ ದರ್ಶನ್ ರವರ ವಿಶೇಷ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಪ್ರಸಾರವಾಗಿತ್ತು. ಆದರೂ, ದರ್ಶನ್ ತಮ್ಮ ಮದುವೆ ಬಗ್ಗೆ, ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಬಗ್ಗೆ ಮಾತನಾಡಲೇ ಇಲ್ಲ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅವಮಾನ ಮಾಡಿದವರು ಯಾರು?]

ವಿಜಯಲಕ್ಷ್ಮಿ ಬರಲಿಲ್ಲ!

ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಹಬ್ಬಿರುವ ಗಾಸಿಪ್ ಪ್ರಕಾರ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಜಯಲಕ್ಷ್ಮಿ ರವರಿಗೆ ಹೇಳಿದ್ದರೂ, ವಿಜಯಲಕ್ಷ್ಮಿ ಪುತ್ರ ವಿನೀಶ್ ಸಮೇತ ಹಾಜರಾಗಲಿಲ್ಲ.[ಪೈಸೆ-ಪೈಸೆಗೂ ಕಷ್ಟ ಪಟ್ಟ ದರ್ಶನ್ ಬದುಕಿನ ನೋವಿನ ಕಥೆ]

ದರ್ಶನ್ ಗೆ ಕೋಪ?

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಆಹ್ವಾನವಿದ್ದರೂ, ವಿಜಯಲಕ್ಷ್ಮಿ ಪುತ್ರ ವಿನೀಶ್ ಜೊತೆ ಬಾರದೇ ಇರುವುದಕ್ಕೆ ದರ್ಶನ್ ಗೆ ಕೋಪ ಇದೆ ಅಂತ 'ಉದಯವಾಣಿ' ದಿನಪತ್ರಿಕೆ ವರದಿ ಮಾಡಿದೆ.[ನೀವು ಕೇಳರಿಯದ ಸತ್ಯ ಸಂಗತಿಗಳ 'ದರ್ಶನ' ವೀಕೆಂಡ್ ನಲ್ಲಾಯ್ತು!]

ಫೋಟೋ ಫ್ರೇಮ್ ನಲ್ಲಿ ಪತ್ನಿ-ಮಗ ಮಿಸ್!

ತಮ್ಮ ಸಾಧನೆಗೆ ಕಾರಣರಾಗಿರುವ ಎಲ್ಲರನ್ನೂ ಒಟ್ಟುಗೂಡಿಸುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಕೊನೆ ಘಟ್ಟ 'ಫೋಟೋ ಫ್ರೇಮ್'ನಲ್ಲಿ ಅರ್ಧಾಂಗಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಮಿಸ್ ಆಗಿದ್ದರು.

ಅಮ್ಮ ಮೀನಾ ತೂಗುದೀಪ ಭಾಗಿ

ಕಾರ್ಯಕ್ರಮದಲ್ಲಿ ತಾಯಿ ಮೀನಾ ತೂಗುದೀಪ ಶ್ರೀನಿವಾಸ್, ಸಹೋದರಿ ದಿವ್ಯಾ, ಬಾವ, ಅಳಿಯ ಸೇರಿದಂತೆ ಕುಟುಂಬದ ಅನೇಕರು ಭಾಗವಹಿಸಿದ್ದರು.

ಆಪ್ತ ಸಹಾಯಕರೂ ಬಂದಿದ್ದರು!

ಮಲ್ಲಿಕಾರ್ಜುನ್, ಪಿಸ್ತಾ ಸೀನ ಸೇರಿದಂತೆ ದರ್ಶನ್ ಆಪ್ತ ಸಹಾಯಕರೂ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದಿನಕರ್ ತೂಗುದೀಪ ಕೂಡ ಬಂದಿರಲಿಲ್ಲ!

ಅಚ್ಚರಿ ಅಂದ್ರೆ, 'ಇದೇ ಕಾರ್ಯಕ್ರಮಕ್ಕೆ ದರ್ಶನ್ ಸಹೋದರ ದಿನಕರ್ ತೂಗುದೀಪ ಕೂಡ ಮಿಸ್ ಆಗಿದ್ದರು.

ಚಿತ್ರರಂಗದ ಗಣ್ಯರು

ಬುಲೆಟ್ ಪ್ರಕಾಶ್, ವಿ.ಹರಿಕೃಷ್ಣ, ನಾಗೇಂದ್ರ ಅರಸ್, ಧರ್ಮ ಕೀರ್ತಿರಾಜ್ ಸೇರಿದಂತೆ ಕನ್ನಡ ಚಿತ್ರರಂಗದಿಂದ ಹಲವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ರು.

ಒಂದುವರೆ ವರ್ಷದಿಂದ ದೂರ ಇರುವ ವಿಜಯಲಕ್ಷ್ಮಿ

ವಿಜಯಲಕ್ಷ್ಮಿ ಹೇಳುವ ಪ್ರಕಾರ, ಒಂದುವರೆ ವರ್ಷದಿಂದ ಅವರು ದರ್ಶನ್ ರಿಂದ ದೂರ ಇದ್ದಾರೆ. ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನ ಫ್ಲಾಟ್ ಒಂದರಲ್ಲಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಜೊತೆಗೆ ವಾಸವಿದ್ದಾರೆ.

English summary
If you remember, Kannada Actor Darshan's wife Vijayalakshmi did not participate in Zee Kannada Channel's popular show 'Weekend With Ramesh' along with her son Vineesh. What is the reason? Read the article to know...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada