ಮಿತ್ರನ 'ರಾಗ'ಕ್ಕೆ 'ಚಕ್ರವರ್ತಿ' ಅತಿಥಿ
'ರಾಗ'.....ಅಂಧರ ಕುರಿತು ತಯಾರಾಗುತ್ತಿರುವ ಪ್ರಯೋಗಾತ್ಮಕ ಚಿತ್ರ. ಮಿತ್ರ ಎಂಟರ್ ಟ್ರೈನರ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಹಾಸ್ಯ ನಟ ಮಿತ್ರ ನಿರ್ಮಾಣ ಮಾಡುತ್ತಿರುವ ವಿಭಿನ್ನ ಸಿನಿಮಾ. ಇದೀಗ, 'ರಾಗ' ಚಿತ್ರದ ಟ್ರೈಲರ್ ರಿಲೀಸ್ ಆಗಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಲಿದ್ದಾರೆ.['ರಾಗ' ಟ್ರೈಲರ್ ಗೆ ದನಿ ನೀಡಿದ ಕಿಚ್ಚ ಸುದೀಪ್.!]
ಫೆಬ್ರವರಿ 22 ರಂದು ಸಂಜೆ 7 ಗಂಟೆಗೆ ಮಾಗಡಿ ರಸ್ತೆಯಲ್ಲಿರುವ ವಿರೇಶ್ ಚಿತ್ರಮಂದಿರದಲ್ಲಿ ನಟ ದರ್ಶನ್, ರಾಗ ಚಿತ್ರದ ಟ್ರೈಲರ್ ರಿಲೀಸ್ ಮಾಡಲಿದ್ದಾರೆ. ಈ ಕಾರ್ಯಕ್ರಮದ ವಿಶೇಷ ಅಂದ್ರೆ, 'ರಾಗ' ಟ್ರೈಲರ್ ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಧ್ವನಿ ನೀಡಿದ್ದು, ಅದನ್ನ ಸುದೀಪ್ ಅವರ ಕುಚಿಕೂ ಗೆಳೆಯ ದರ್ಶನ್ ಬಿಡುಗಡೆ ಮಾಡುತ್ತಿದ್ದಾರೆ.[ಓ ಮೈ ಗಾಡ್ ಕುರುಡಿಯಾದ್ರಾ ನಟಿ ಭಾಮಾ.?]

ಈಗಾಗಲೇ ಪೋಸ್ಟರ್ ಗಳ ಮೂಲಕ ಗಮನ ಸೆಳೆದಿರುವ 'ರಾಗ' ಚಿತ್ರಕ್ಕೆ ಪಿ.ಸಿ ಶೇಖರ್ ಆಕ್ಷನ್ ಹೇಳುತ್ತಿದ್ದಾರೆ. ಮಿತ್ರ, ಭಾಮಾ, ಅವಿನಾಶ್, ಜೈಜಗದೀಶ್, ರಮೇಶ್ ಭಟ್, ಸಿಹಿ ಕಹಿ ಚಂದ್ರು ರಂತಹ ದೊಡ್ಡ ಕಲಾವಿದರು ಅಭಿನಯಿಸುತ್ತಿದ್ದಾರೆ. ಉಳಿದಂತೆ 'ರಾಗ' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.[ಫಸ್ಟ್ ಲುಕ್: 'ರಾಗ' ಚಿತ್ರದಲ್ಲಿ ಕುರುಡಿಯಾದ ಭಾಮಾ]

ಮಿತ್ರ ಹಾಗೂ ಭಾಮಾ ಅಂಧರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮನ ಮುಟ್ಟುವ ಕಥಾಹಂದರ ಇರುವ 'ರಾಗ' ಟ್ರೈಲರ್ ಇಂದು (ಫೆಬ್ರವರಿ 22) ರಿಲೀಸ್ ಆಗಲಿದ್ದು, 'ರಾಗ' ಚಿತ್ರದ ಟ್ರೈಲರ್ ವೀಕ್ಷಣೆಗಾಗಿ ಫಿಲ್ಮಿಬೀಟ್ ಕನ್ನಡವನ್ನ ಓದುತ್ತಿರಿ......


Click it and Unblock the Notifications











