For Quick Alerts
  ALLOW NOTIFICATIONS  
  For Daily Alerts

  ಟಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ ದರ್ಶನ್ ವಿಶ್ ಮಾಡಿದ್ದು ಹೇಗೆ ನೋಡಿ..!

  By Suneel
  |

  ಚಾಲೆಂಜಿಗ್ ಸ್ಟಾರ್ ದರ್ಶನ್ ಮತ್ತು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಬಾಲ್ಯದಿಂದಲೂ ಅಪ್ಪಟ ಕುಚುಕುಗಳು. ಆ ಒಂದು ಗೆಳೆತನವನ್ನು ಇಂದಿಗೂ ಮುಂದುವರೆಸುತ್ತ ಗೆಳತನ ಅಂದ್ರೆ ಹೀಗಿರಬೇಕು ಎಂದು ಮಾದರಿ ಆಗಿರುವ ಸ್ಯಾಂಡಲ್ ವುಡ್ ಸಿನಿ ಪ್ರಿಯರ ನೆಚ್ಚಿನ ನಟರು ಹೌದು.

  ಅಂದಹಾಗೆ ಇಂದು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ರವರು 37 ವರ್ಷಗಳನ್ನು ಪೂರೈಸಿದ್ದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇಂದು ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಸದ್ಯ 'ತಾರಕ್' ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ದರ್ಶನ್ ರವರು ವಿಶೇಷ ರೀತಿಯಲ್ಲಿ ತಮ್ಮ ಆತ್ಮೀಯ ಗೆಳೆಯನಿಗೆ ಶುಭ ಕೋರಿದ್ದಾರೆ.

  ಸಿನಿಮಾ ಶೂಟಿಂಗ್ ಬ್ಯುಸಿ ಸೆಡ್ಯೂಲ್ ನಲ್ಲಿಯೂ ನೆಚ್ಚಿನ ಗೆಳೆಯನ ಹುಟ್ಟುಹಬ್ಬ ದಿನವನ್ನು ಮರೆಯದ 'ದಾಸ' ದರ್ಶನ್, ಇಬ್ಬರು ಸಹ ಎತ್ತುಗಳನ್ನು ಹಿಡಿದುಕೊಂಡು ತೆಗೆಸಿಕೊಂಡಿರುವ ಫೋಟೋವನ್ನು ಫೇಸ್‌ಬುಕ್‌ ಮತ್ತು ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಜನುಮದಿನಕ್ಕೆ ಶುಭಕೋರಿದ್ದಾರೆ. ಅಲ್ಲದೇ ಗೆಳೆಯನ ಎಲ್ಲಾ ಕೆಲಸಗಳಿಗೂ ಯಶಸ್ಸು ಸಿಗಲಿ, ಸಂತೋಷ ಸದಾ ಇರಲಿ ಎಂದು ಹಾರೈಸಿದ್ದಾರೆ.

  ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲೂ ನಿರಂತರವಾಗಿ ಕನ್ನಡ ಕಲಾಭಿಮಾನಿಗಳಿಗೆ ಮನರಂಜನೆ ನೀಡುತ್ತಿರುವ ಸೃಜನ್ ಲೋಕೇಶ್ ರವರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

  English summary
  Challenging Star Darshan has taken his twitter account to wish Srujan Lokesh Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X