»   » ದರ್ಶನ್ '50'ನೇ ಚಿತ್ರ ಸ್ನೇಹಿತರಿಗೆ ಮೀಸಲು!

ದರ್ಶನ್ '50'ನೇ ಚಿತ್ರ ಸ್ನೇಹಿತರಿಗೆ ಮೀಸಲು!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ 48ನೇ ಚಿತ್ರ 'ಚಕ್ರವರ್ತಿ' ಶೂಟಿಂಗ್ ಮುಗಿಸಿ ಸದ್ಯ 49ನೇ ಚಿತ್ರದ ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ. ತಮ್ಮ 49ನೇ ಚಿತ್ರವನ್ನ ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಅದ್ದೂರಿಯಾಗಿ ಸಿನಿಮಾ ಸೆಟ್ಟೇರಿದೆ.

ಹೀಗಿರುವಾಗಲೇ 'ದಾಸ'ನ 50ನೇ ಚಿತ್ರದ ಬಗ್ಗೆ ಫಿಲ್ಮ್ ನಗರಿಯಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈ ಮೊದಲೇ ಹೇಳಿದಂತೆ ದರ್ಶನ್ ಅವರ 50ನೇ ಚಿತ್ರವನ್ನ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಅದಕ್ಕಾಗಿ ಮೂರ್ನಾಲ್ಕು ವರ್ಷಗಳ ಹಿಂದೆಯೆ ಸ್ಕ್ರಿಪ್ಟ್ ಕೂಡ ಅಂತಿಮವಾಗಿತ್ತು.[ಸೆಟ್ಟೇರಿತು 'ದರ್ಶನ್-ಮಿಲನ ಪ್ರಕಾಶ್' ಜೋಡಿಯ ಹೊಸ ಚಿತ್ರ ]

ಆದ್ರೀಗ, ಚಾಲೆಂಜಿಂಗ್ ಸ್ಟಾರ್ 50ನೇ ಚಿತ್ರ ಬದಲಾಗಿದೆಯಂತೆ. ದಿನಕರ್ ಬದಲು ಬೇರೆ ನಿರ್ದೇಶಕ ಆಕ್ಷನ್ ಕಟ್ ಹೇಳಲಿದ್ದಾರಂತೆ. ವಿಶೇಷ ಅಂದ್ರೆ, ತಮ್ಮ ವೃತ್ತಿ ಜೀವನದ 50ನೇ ಚಿತ್ರವನ್ನ ಮೈಸೂರಿನ ತಮ್ಮ ಆಪ್ತ ಗೆಳೆಯರಿಗಾಗಿ ಮೀಸಲಿಟ್ಟಿದ್ದಾರಂತೆ ದರ್ಶನ್.

ಬದಲಾಯ್ತು ದರ್ಶನ್ '50'ನೇ ಚಿತ್ರ!

ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರು '50'ನೇ ಚಿತ್ರ ಬದಲಾಗಿದೆ. ಇಷ್ಟು ದಿನ ದಿನಕರ್ ತೂಗುದೀಪ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುತ್ತಿದ್ದ '50'ನೇ ಚಿತ್ರ, ಬೇರೆಯವರ ಪಾಲಾಗಿದೆ.[ಸಂಕ್ರಾಂತಿ ಹಬ್ಬಕ್ಕೆ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್!]

ಸದ್ಯಕ್ಕಿಲ್ಲ 'ಸರ್ವಾಂತರ್ಯಾಮಿ'!

ಮೂಲಗಳ ಪ್ರಕಾರ ದರ್ಶನ್ ಹಾಗೂ ದಿನಕರ್ ತೂಗುದೀಪ್ ಕಾಂಬಿನೇಷನ್ ನಲ್ಲಿ ಮೂಡಿಬರಬೇಕಿದ್ದ 'ಸರ್ವಾಂತರ್ಯಾಮಿ' ಚಿತ್ರ ಮುಂದಕ್ಕೆ ಹೋಗಿದೆ. 'ಸರ್ವಾಂತರ್ಯಾಮಿ' ದರ್ಶನ್ ಅವರ 50ನೇ ಚಿತ್ರವೆಂದು ಬಿಂಬಿತವಾಗಿತ್ತು. ಆದ್ರೀಗ, ಸಹೋದರರ ಈ ಸಿನಿಮಾ ಮತ್ತಷ್ಟು ಪೋಸ್ಟ್ ಫೋನ್ ಆಗಿದೆ.[ಬಾಹುಬಲಿ 'ಕಾಲಕೇಯ'ನ ಜೊತೆ ದರ್ಶನ್ ಕಾಳಗ]

ಸ್ನೇಹಿತರಿಗಾಗಿ ದಾಸನ 'ಹಾಫ್ ಸೆಂಚುರಿ' ಸಿನಿಮಾ!

ದರ್ಶನ್ ಅವರ 50ನೇ ಚಿತ್ರ ಈಗ ಸ್ನೇಹಿತರಿಗಾಗಿ ಮೀಸಲಿಟ್ಟಿದ್ದಾರಂತೆ ದರ್ಶನ್. ಈ ಚಿತ್ರದಿಂದ ಬಂದ ಹಣವನ್ನ ಮೈಸೂರಿನ ತಮ್ಮ ಗೆಳೆಯರು ಜೀವನಕ್ಕೆ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡಲಿದ್ದಾರಂತೆ.

ಎಂ.ಡಿ ಶ್ರೀಧರ್ ಸಾರಥ್ಯ!

ದರ್ಶನ್ ಅವರ 50ನೇ ಚಿತ್ರಕ್ಕೆ ನಿರ್ದೇಶಕ ಕೂಡ ಬದಲಾಗಿದ್ದು, ಈ ಚಿತ್ರವನ್ನ ಎಂ.ಡಿ ಶ್ರೀಧರ್ ನಿರ್ದೇಶನ ಮಾಡಲಿದ್ದಾರಂತೆ. ಮೂಲಗಳ ಪ್ರಕಾರ ಇದು ರೀಮೇಕ್ ಸಿನಿಮಾವಾಗಿದ್ದು, ಕನ್ನಡದ ನೇಟಿವೆಟಿಗೆ ತಕ್ಕಂತೆ ನಿರೂಪಣೆ ಮಾಡಲಿದ್ದಾರಂತೆ.

ತಂತ್ರಜ್ಞರಿಗಾಗಿ 'ಬುಲ್ ಬುಲ್'!

ಈ ಹಿಂದೆ ತಮ್ಮ ಚಿತ್ರಗಳಲ್ಲಿ ತಂತ್ರಜ್ಞರಾಗಿ ಕೆಲಸ ಮಾಡಿದ್ದವರಿಗಾಗಿ' ಬುಲ್ ಬುಲ್' ಸಿನಿಮಾ ಮಾಡಿದ್ದರು. ಈ ಚಿತ್ರದಿಂದ ಬಂದ ಹಣವನ್ನ ಅವರ ಕುಟುಂಬಗಳಿಗೆ ನೀಡಿದ್ದರು. ಈ ಚಿತ್ರವನ್ನ ಎಂ.ಡಿ ಶ್ರೀಧರ್ ಅವರೇ ನಿರ್ದೇಶನ ಮಾಡಿದ್ದರು. ಹೀಗಾಗಿ ಈ ಬಾರಿಯೂ ಇಂತಹದ್ದೇ ಪ್ರಯತ್ನ ಮಾಡುತ್ತಿದ್ದು, ಈ ಚಿತ್ರಕ್ಕೂ ಎಂ.ಡಿ ಶ್ರೀಧರ್ ಅವರನ್ನೇ ಕರೆತಂದಿದ್ದಾರೆ.

'ಸರ್ವಾಂತರ್ಯಾಮಿ' ಮುಂದೋಗಿದ್ದೇಕೆ?

'ಸರ್ವಾಂತರ್ಯಾಮಿ' ಚಿತ್ರದ ಸ್ಕ್ರಿಪ್ಟ್ ವರ್ಕ್ ಇನ್ನೂ ಮುಗಿದಿಲ್ಲ. ದಿನಕರ್ ತೂಗುದೀಪ ಅವರು ತಮ್ಮ ಬ್ಯಾನರ್ ನಲ್ಲಿ 'ಮದುವೆಯ ಮಮತೆಯ ಕರೆಯೋಲೆ' ಚಿತ್ರವನ್ನ ಈ ವರ್ಷ ನಿರ್ಮಾಣ ಮಾಡಿದರು. ಅದರ ಜೊತೆಗೆ 'ಚಕ್ರವರ್ತಿ' ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿದರು. ಹೀಗಾಗಿ 'ಸರ್ವಾಂತರ್ಯಾಮಿ' ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿಲ್ಲವಂತೆ. 'ಸರ್ವಾಂತರ್ಯಾಮಿ' ವಿಶೇಷವಾದ ಚಿತ್ರವಾಗಿರುವುದರಿಂದ ಅದಕ್ಕೆ ನ್ನು ಸ್ವಲ್ಪ ಸಮಯ ಕೂಡ ಬೇಕಾಗಿದೆಯಂತೆ.

English summary
Challenging Star Darshan 50Th Film Reserved For His Friends. MD Sridhar’s will helm Darshan 50th film, which will be produced by the star’s friends from Mysuru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada