Just In
Don't Miss!
- News
ಉದ್ಯಮಿ ಅಜೀಂ ಪ್ರೇಮ್ಜಿ ವಿರುದ್ಧದ ಪ್ರಕರಣ ರದ್ದು
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಯಜಮಾನ'ನಾದ ಡಿ ಬಾಸ್ : ಅಂದು ವಿಷ್ಣು ಇಂದು ದರ್ಶನ್

ನಟ ದರ್ಶನ್ ಈಗ 'ಯಜಮಾನ'ನಾಗಿದ್ದಾರೆ. ಅವರ 51ನೇ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದ್ದು, ಚಿತ್ರಕ್ಕೆ 'ಯಜಮಾನ' ಎಂಬ ಹೆಸರನ್ನು ಇಡಲಾಗಿದೆ.
'ಯಜಮಾನ' ಎಂಬ ಹೆಸರು ಹೇಳುತ್ತಿದ್ದ ಹಾಗೆ ನಟ ಸಾಹಸಸಿಂಹ ವಿಷ್ಣುವರ್ಧನ್ ನೆನಪಾಗುತ್ತಾರೆ. ವಿಷ್ಣು ಅಭಿನಯದ ಸೂಪರ್ ಹಿಟ್ ಸಿನಿಮಾ 'ಯಜಮಾನ' ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡ ಮೈಲಿಗಲ್ಲು. ಅಂತಹ ಶ್ರೇಷ್ಟ ಸಿನಿಮಾದ ಟೈಟಲ್ ಅನ್ನು ಮತ್ತೆ ಈಗ ಒಂದು ಸಿನಿಮಾಗೆ ಇಡಲಾಗಿದೆ. ಅದು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗೆ ಎನ್ನುವುದು ವಿಶೇಷ. ಮುಂದೆ ಓದಿ...

ದರ್ಶನ್ ಈಗ 'ಯಜಮಾನ'
ದರ್ಶನ್ ಅವರ 51ನೇ ಸಿನಿಮಾದ ಹೆಸರು ಏನು ಎಂಬುದು ದರ್ಶನ್ ಅಭಿಮಾನಿಗಳಲ್ಲಿ ಇದ್ದ ಕುತೂಹಲ. ಆದರೆ ಈಗ ಅದಕ್ಕೆ ಉತ್ತರ ಸಿಕ್ಕಿದೆ. ದರ್ಶನ್ ಅವರ ಹೊಸ ಸಿನಿಮಾಗೆ 'ಯಜಮಾನ' ಎಂಬ ಹೆಸರನ್ನು ಇಡಲಾಗಿದೆ.

18 ವರ್ಷಗಳ ಬಳಿಕ
ವಿಷ್ಣುವರ್ಧನ್ ಅಭಿನಯದ 'ಯಜಮಾನ' ಸಿನಿಮಾ 2000 ರಲ್ಲಿ ರಿಲೀಸ್ ಆಗಿತ್ತು. ಆದರೆ ಈಗ 18 ವರ್ಷದ ನಂತರ ಮತ್ತೆ ಅದೇ ಚಿತ್ರದ ಹೆಸರಿನಲ್ಲಿ ಸಿನಿಮಾ ಬರುತ್ತಿದ್ದು, ದರ್ಶನ್ ಮತ್ತು ವಿಷ್ಣು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

'ವಿಷ್ಣುವರ್ಧನ' ನಿರ್ದೇಶಕ
ಬಿ.ಸುರೇಶ್ ಅವರ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಪಿ.ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಹೇಳುತ್ತಿದ್ದಾರೆ. ವಿಶೇಷ ಅಂದರೆ ಪಿ.ಕುಮಾರ್ ಈ ಹಿಂದೆ 'ವಿಷ್ಣುವರ್ಧನ' ಸಿನಿಮಾವನ್ನು ಸುದೀಪ್ ಜೊತೆಗೆ ಮಾಡಿದ್ದರು.

ಈ ಬಂಧನ
ಈ ಹಿಂದೆ ವಿಷ್ಣುವರ್ಧನ್ ಅವರ 'ಈ ಬಂಧನ' ಸಿನಿಮಾದಲ್ಲಿ ದರ್ಶನ್ ಅಭಿನಯಿಸಿದ್ದರು. ಇದು ಅವರಿಬ್ಬರ ಜೋಡಿಯ ಮೊದಲವೂ ಹೌದು... ಅದೇ ರೀತಿ ಕೊನೆಯ ಸಿನಿಮಾವೂ ಹೌದು.

ಮೂರು ಜನ ವಿಲನ್ಸ್
'ಯಜಮಾನ' ಸಿನಿಮಾದಲ್ಲಿ ಮೂರು ಜನ ಖಳನಾಯಕರಿದ್ದಾರೆ. ನಟ ರವಿಶಂಕರ್, ಧನಂಜಯ್ ಜೊತೆಗೆ ಠಾಕೂರ್ ಅನೂಪ್ ಸಿಂಗ್ ಕೂಡ ದರ್ಶನ್ ಗೆ ಸವಾಲು ಹಾಕಿದ್ದಾರೆ.
ದರ್ಶನ್ ಗೆ ಸವಾಲು ಹಾಕಲು ಬಂದ 'ಸಿಂಗಂ 3' ವಿಲನ್

ರಶ್ಮಿಕಾ ಮಂದಣ್ಣ ನಾಯಕಿ
ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ದರ್ಶನ್ ಜೊತೆಗೆ ರಶ್ಮಿಕಾ ಸಿನಿಮಾ ಮಾಡುತ್ತಿದ್ದಾರೆ.
2017ರ ಅತ್ಯುತ್ತಮ ಕಮರ್ಷಿಯಲ್ ಸಿನಿಮಾ 'ತಾರಕ್'

ಅನೇಕ ಸಿನಿಮಾಗಳ ಹೆಸರು
ಈ ಹಿಂದೆ ವಿಷ್ಣುವರ್ಧನ್ ಅವರ ಅನೇಕ ಸಿನಿಮಾಗಳ ಹೆಸರು ಮತ್ತೆ ಮತ್ತೆ ಬಂದಿದೆ. 'ನಾಗರಹಾವು', 'ಕೋಟಿಗೊಬ್ಬ', 'ಖೈದಿ' ಸೇರಿದಂತೆ ಸಾಕಷ್ಟು ಹೆಸರನ್ನು ಮತ್ತೆ ಹೊಸ ಸಿನಿಮಾಗಳಲ್ಲಿ ಬಳಸಿಕೊಳ್ಳಲಾಗಿದೆ.