»   » ಸಂಕ್ರಾಂತಿ ಹಬ್ಬಕ್ಕೆ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್!

ಸಂಕ್ರಾಂತಿ ಹಬ್ಬಕ್ಕೆ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್!

Written By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹೊಸ ವರ್ಷದ ಸ್ವಾಗತಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ಹೊಸ ವರ್ಷದ ಜೊತೆ ಈಗ ಸಂಕ್ರಾಂತಿ ಹಬ್ಬವನ್ನ ಮತ್ತಷ್ಟು ಅದ್ದೂರಿಯಾಗಿ ಆಚರಿಸಲು ಡಿ ಫ್ಯಾನ್ಸ್ ಪ್ಲಾನ್ ಮಾಡಿದ್ದಾರೆ.

ಇದಕ್ಕೆ ಕಾರಣ ದರ್ಶನ್ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ 'ಚಕ್ರವರ್ತಿ'. ಯಾಕಂದ್ರೆ, ಸಂಕ್ರಾಂತಿ ಹಬ್ಬದ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದ್ದಾರೆ.[ದರ್ಶನ್ 'ಚಕ್ರವರ್ತಿ' ಅಡ್ಡದಿಂದ ಬಂದ ಲೇಟೆಸ್ಟ್ ಸುದ್ದಿ ಇದು]

Darshans Chakravarthy Movie Audio Release Date Confirmed

ಹೌದು, 'ಚಕ್ರವರ್ತಿ' ಚಿತ್ರದ ಆಡಿಯೋ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಜನವರಿ 15 ರಂದು ದರ್ಶನ್ ಸಿನಿಮಾದ ಹಾಡುಗಳನ್ನ ಕೇಳಬಹುದಾಗಿದೆ. ಕೇವಲ ಹಾಡುಗಳು ಮಾತ್ರವಲ್ಲ, 'ಚಕ್ರವರ್ತಿ'ಯ ಟೀಸರ್ ಕೂಡ ರಿಲೀಸ್ ಮಾಡಲಿದೆ ಎಂದು ಚಿತ್ರತಂಡ ತಿಳಿಸಿದೆ.[ದರ್ಶನ್ 'ಚಕ್ರವರ್ತಿ' ಬಿಡುಗಡೆ ಡೇಟ್ ಫಿಕ್ಸ್ ಆಯ್ತಾ?]

Darshans Chakravarthy Movie Audio Release Date Confirmed

ಈಗಾಗಲೇ ಕಂಪ್ಲೀಟ್ ಚಿತ್ರೀಕರಣ ಮುಗಿಸಿರುವ 'ಚಕ್ರವರ್ತಿ' 45 ದಿನಗಳ ಕಾಲ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಳ್ಳಲಿದೆ. ಈ ಮಧ್ಯೆ ಚಿತ್ರದ ಫಸ್ಟ್ ಟೀಸರ್ ಹಾಗೂ ಹಾಡುಗಳನ್ನ ಪ್ರೇಕ್ಷಕರೆದರು ತರಲಿದೆ.['ಚಕ್ರವರ್ತಿ' ಚಿತ್ರೀಕರಣ ಮುಗಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]

Darshans Chakravarthy Movie Audio Release Date Confirmed

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಇದೇ ಮೊದಲ ಬಾರಿಗೆ ದರ್ಶನ್ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಚಿಂತನ್ 'ಚಕ್ರವರ್ತಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ಇನ್ನೂ ಅಣಜಿ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.[ರಿವಿಲ್ ಆಯ್ತು 'ಚಕ್ರವರ್ತಿ'ಯಲ್ಲಿ ದರ್ಶನ್ ಕಹಾನಿ!]

Darshans Chakravarthy Movie Audio Release Date Confirmed

'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದು, ದೀಪಾ ಸನ್ನಿಧಿ ನಾಯಕಿಯಾಗಿದ್ದಾರೆ. ಉಳಿದಂತೆ ಸೃಜನ್ ಲೋಕೇಶ್, ಆದಿತ್ಯ, ಕುಮಾರ್ ಬಂಗಾರಪ್ಪ ಹಾಗೂ ಮೊದಲ ಬಾರಿಗೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಚಿತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ.['ಚಕ್ರವರ್ತಿ' ಚಿತ್ರತಂಡ ಸೇರಿಕೊಂಡ ಹೊಸ ಅತಿಥಿ ಯಾರು ? ]

English summary
Read on to know the Details of the Audio Launch of Darshan's Much Awaited Movie Chakravarthy...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada