Don't Miss!
- News
ಪಿಎಸ್ಐ ಹಗರಣ; ತನಿಖಾ ವರದಿ ಸಲ್ಲಿಸಲು ಹೈಕೋರ್ಟ್ ತಾಕೀತು
- Sports
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲಂಡ್ ತಂಡ ಪ್ರಕಟ: ತಂಡಕ್ಕೆ ಮರಳಿದ ಸ್ಟಾರ್ ವೇಗಿ
- Automobiles
'ವಂದೇ ಮೆಟ್ರೋ' ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕ್ರಾಂತಿ' ಹವಾ: ಒಟ್ಟು ಶೋ ಎಷ್ಟು? ಮಾರಾಟವಾದ ಟಿಕೆಟ್ ಎಷ್ಟು? ಕಲೆಕ್ಷನ್ ಆದ ಹಣವೆಷ್ಟು?
ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆ ಆಗಲು ಎರಡು ದಿನವಷ್ಟೆ ಬಾಕಿ ಉಳಿದಿದೆ. ಸಿನಿಮಾದ ಕ್ರೇಜ್ ದಿನ ದಿನಕ್ಕೂ ಹೆಚ್ಚಾಗುತ್ತಲೇ ಸಾಗುತ್ತಿದೆ.
ಸಿನಿಮಾದ ಅಡ್ವಾನ್ಸ್ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ದಿನೇ ದಿನೇ ಟಿಕೆಟ್ ಬುಕಿಂಗ್, ಶೋ ಸಂಖ್ಯೆಗಳು ಹೆಚ್ಚುತ್ತಲೇ ಸಾಗಿದೆ.
ನಿನ್ನೆಯ ಲೆಕ್ಕದ ಪ್ರಕಾರ ಸಿನಿಮಾ ಸಿನಿಮಾ ಬಿಡುಗಡೆ ಆಗುವ ಮೊದಲೇ ಅಡ್ವಾನ್ಸ್ ಬುಕಿಂಗ್‌ನಿಂದಲೇ ಕೆಲವು ಕೋಟಿಗಳನ್ನು ಗಳಿಸಿಯಾಗಿದೆ. ಹಾಗಾದರೆ ಈವರೆಗೆ ಅಂದರೆ ಡಿಸೆಂಬರ್ 24 ರ ಬೆಳಿಗ್ಗಿನ ವರೆಗೆ 'ಕ್ರಾಂತಿ' ಸಿನಿಮಾಕ್ಕೆ ರಾಜ್ಯದಾದ್ಯಂತ ಸಿಕ್ಕ ಶೋಗಳೆಷ್ಟು, ಅಡ್ವಾನ್ಸ್ ಬುಕಿಂಗ್ ಆದ ಟಿಕೆಟ್‌ಗಳೆಷ್ಟು, ಗಳಿಸಿದ ಹಣವೆಷ್ಟು? ಮಾಹಿತಿ ಇಲ್ಲಿದೆ.

ಈವರೆಗೆ ಧಕ್ಕಿರುವ ಶೋಗಳ ಸಂಖ್ಯೆ
ರಾಜ್ಯದಾದ್ಯಂತ ಈವರೆಗೆ 837 ಶೋಗಳನ್ನು 'ಕ್ರಾಂತಿ'ಗೆ ನೀಡಲಾಗಿದೆ. ಈ ಶೋಗಳ ಸಂಖ್ಯೆ ಇನ್ನೆರಡು ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಿ ಸಾವಿರ ದಾಟಿದರೂ ಆಶ್ಚರ್ಯವೇನಿಲ್ಲ. ಬೆಂಗಳೂರು, ಮೈಸೂರಿನಂಥಹಾ ಮೆಟ್ರೊ ಸಿಟಿಗಳಲ್ಲಿ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ಅಬ್ಬರದ ನಡುವೆಯೂ 'ಕ್ರಾಂತಿ' ಸಿನಿಮಾ ದೊಡ್ಡ ಸಂಖ್ಯೆಯ ಶೋಗಳನ್ನು ತನ್ನದಾಗಿಸಿಕೊಂಡಿದೆ.

ಈವರೆಗೆ ಮಾರಾಟವಾಗಿರುವ ಟಿಕೆಟ್‌ಗಳೆಷ್ಟು?
ಇನ್ನು ಈವರೆಗೆ 1.40 ಲಕ್ಷ ಟಿಕೆಟ್‌ಗಳು ಅಡ್ವಾನ್ಸ್ ಆಗಿ ಬುಕಿಂಗ್ ಆಗಿವೆ ಎಂಬ ಮಾಹಿತಿ ಲಭ್ಯವಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೆರಡು ದಿನಗಳಿದ್ದು ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಡ್ವಾನ್ಸ್ ಬುಕಿಂಗ್ ಮಾತ್ರವೆ ಅಲ್ಲದೆ ಬಿಡುಗಡೆಯ ದಿನ ಟಿಕೆಟ್ ಕೌಂಟರ್‌ನಲ್ಲಿ ಟಿಕೆಟ್ ಖರೀದಿಸುವವರ ಸಂಖ್ಯೆಯೂ ಲಕ್ಷದ ಸಮೀಪಕ್ಕೇರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಈವರೆಗಿನ ಕಲೆಕ್ಷನ್ ಎಷ್ಟು?
ಅಡ್ವಾನ್ಸ್ ಟಿಕೆಟ್ ಬುಕಿಂಗ್‌ನಿಂದಲೇ ಈವರೆಗೆ 3.50 ಕೋಟಿ ಕಲೆಕ್ಷನ್ ಅನ್ನು 'ಕ್ರಾಂತಿ' ಸಿನಿಮಾ ಮಾಡಿದೆ ಎನ್ನಲಾಗುತ್ತಿದೆ. ಅಡ್ವಾನ್ಸ್ ಬುಕಿಂಗ್‌ನಲ್ಲಿಯೇ ಇಷ್ಟು ದೊಡ್ಡ ಮೊತ್ತದ ಹಣ ಕಲೆಕ್ಷನ್ ಅನ್ನು ಮಾಡಿದ ಈ ವರ್ಷದ ಮೊದಲ ಸಿನಿಮಾ ಎಂಬ ಖ್ಯಾತಿಗೆ 'ಕ್ರಾಂತಿ' ಪಾತ್ರವಾಗಿದೆ. ಮಾತ್ರವಲ್ಲ, ಅಡ್ವಾನ್ಸ್ ಬುಕಿಂಗ್‌ನಲ್ಲಿ ದೊಡ್ಡ ಮೊತ್ತದ ಹಣ ಕಲೆಕ್ಷನ್ ಮಾಡಿದ ಕೆಲವೇ ಕನ್ನಡ ಸಿನಿಮಾಗಳ ಪಟ್ಟಿಗೂ ದರ್ಶನ್‌ರ 'ಕ್ರಾಂತಿ' ಸೇರಿಕೊಂಡಿದೆ.

ಶಿಕ್ಷಣ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲಿರುವ 'ಕ್ರಾಂತಿ'
'ಕ್ರಾಂತಿ' ಸಿನಿಮಾ ಶಿಕ್ಷಣದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕಮರ್ಶಿಯಲ್ ಸಿನಿಮಾ ಆಗಿದ್ದು, ಜನವರಿ 26 ರಂದು ತೆರೆಗೆ ಬರಲಿದೆ. ಈ ಹಿಂದೆ ದರ್ಶನ್ ನಟಿಸಿದ್ದ 'ಯಜಮಾನ' ಸಿನಿಮಾದ ತಂಡವೇ 'ಕ್ರಾಂತಿ' ಸಿನಿಮಾವನ್ನು ತೆರೆಗೆ ತರುತ್ತಿದೆ. 'ಕ್ರಾಂತಿ' ಸಿನಿಮಾವನ್ನು ದರ್ಶನ್‌ರ ಗೆಳೆಯ ಹರಿಕೃಷ್ಣ ನಿರ್ದೇಶನ ಮಾಡಿದ್ದಾರೆ, ನಿರ್ಮಾಣ ಶೈಲಜಾ ನಾಗ್ ಅವರದ್ದು. ನಾಯಕಿಯಾಗಿ ನಟಿ ರಚಿತಾ ರಾಮ್ ನಟಿಸಿದ್ದಾರೆ. ಸಿನಿಮಾದ ಹಾಡು, ಟ್ರೈಲರ್‌ಗಳು ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿವೆ.