For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟಿ ಸರೋಜಾ ದೇವಿಯನ್ನ ಭೇಟಿ ಮಾಡಿದ ದಾಸ ದರ್ಶನ್

  |

  ಚಾಲೆಂಜಿಗ್ ಸ್ಟಾರ್ ದರ್ಶನ್ ಸದ್ಯ ಕ್ರಾಂತಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮೊನ್ನೆಯಷ್ಟೆ ಚಿತ್ರದ ಮುಹೂರ್ತ ನೆರವೇರಿದ್ದು, ಶೂಟಿಂಗ್ ಕೂಡ ಆರಂಭವಾಗಲಿದೆ. ಇದರ ನಡುವಲ್ಲೇ ದಾಸ ದರ್ಶನ್ ಹಿರಿಯ ಕಲಾವಿದೆ ಸರೋಜಾ ದೇವಿ ಅವರನ್ನ ಭೇಟಿ ಮಾಡಿದ್ದಾರೆ. ದರ್ಶನ್ ಸಿನಿಮಾ ಶೂಟಿಗ್‌ನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ, ಕಷ್ಟ ಅಂತ ಬಂದವರಿಗೆ ನೆರವಿನ ಹಸ್ತ ಚಾಚುತ್ತಾರೆ. ಅಭಿಮಾನಿಗಳ ಕಷ್ಟಕ್ಕೆ ಸದಾ ಸ್ಪಂದಿಸುತ್ತಾರೆ. ಅಲ್ಲದೇ ಚಿತ್ರರಂಗದ ಹಿರಿಯ ಕಲಾವಿದರ ಯೋಗ ಕ್ಷೇಮ ವಿಚಾರಿಸೋ ದರ್ಶನ್ ಸದಾ ಅವರ ನೆರವಿಗೆ ಸನ್ನಧ್ಧರಾಗಿರುತ್ತಾರೆ.

  ಇದೇ ಕಾರಣಕ್ಕಾಗಿ ಇತ್ತೀಚೆಗೆ ದರ್ಶನ್ ಬಿ ಸರೋಜಾ ದೇವಿ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೇ ಅವರ ಆರೋಗ್ಯವನ್ನು ಕೂಡ ವಿಚಾರಿಸಿಕೊಂಡಿದ್ದಾರೆ. ಕೆಲ ಕಾಲ ಅಲ್ಲೆ ಸಮಯ ಕಳೆದ ದರ್ಶನ್, ಸರೋಜಾ ದೇವಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿಸಿದ್ದಾರೆ. ಅವರೊಂದಿಗೆ ಕಳೆದ ಒಂದಷ್ಟು ಫೋಟೊಗಳು ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿ ಸರೋಜಾ ದೇವಿ ಅಂದರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಬಿ.ಸರೋಜಾ ದೇವಿ ಅವರು ಚೆನೈನಿಂದ ಬೆಂಗಳೂರಿಗೆ ಬಂದಾಗಲೆಲ್ಲ ಹೋಗಿ ಅವರೊಂದಿಗೆ ಮಾತನಾಡಿಸೋ ದರ್ಶನ್, ಈ ಬಾರಿ ಕೂಡ ಅವರ ಮನೆಗೆ ಭೇಟಿ ನೀಡಿ ಒಂದಷ್ಟು ಸಮಯ ಕಳೆದಿದ್ದಾರೆ.

  ಎಂದಿನಂತೆ ಈ ಬಾರಿಯೂ ಸರೋಜಾ ದೇವಿ ಅವರನ್ನ ದರ್ಶನ್ ಭೇಟಿ ಆಗಿದ್ದಾರೆ. ಇದರ ಹಿಂದೆ ಬೇರೆ ಯಾವ ಕಾರಣನೂ ಇಲ್ಲ ಎಂಬ ಮಾಹಿತಿಯನ್ನ ದರ್ಶನ್ ಆಪ್ತ ಮೂಲಗಳು ನೀಡಿದ್ದು, ಸರೋಜಾ ದೇವಿ ಅವರು ದರ್ಶನ್ ಅವರ ಸಪ್ರೈಸ್ ವಿಸಿಟ್‌ಗೆ ಸಂತಸ ಪಟ್ಟಿದ್ದಾರೆ. ಇನ್ನು ದರ್ಶನ್ ಮತ್ತು ಬಿ.ಸರೋಜಾ ದೇವಿ ಭೇಟಿಯ ಸುಂದರ ಕ್ಷಣಗಳನ್ನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದು, ಹಲವರು ಇದಕ್ಕೆ ದರ್ಶನ್ ಯಾವತ್ತು ಹಿರಿಯರ ಕೈ ಬಿಡುವುದಿಲ್ಲ, ಸದಾ ಅವರ ನೆರವಿಗೆ ನಿಂತಿರುತ್ತಾರೆ ಎಂದೆಲ್ಲ ಕಮೆಂಟ್ ಮಾಡುತ್ತಿದ್ದಾರೆ.

  Dasa Darshan met senior actress B.Sroja Devi

  ಕನ್ನಡ,ತಮಿಳು, ಹಿಂದಿ, ತೆಲುಗು ಹೀಗೆ ಎಲ್ಲಾ ಚಿತ್ರರಂಗದಲ್ಲೂ ನಟಿಸಿ ಜನಮನ ಗೆದ್ದಿದ್ದ ನಟಿ ಬಿ.ಸರೋಜಾ ದೇವಿ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲೂ ನಟಿಸಿ ಗಮನ ಸೆಳೆದಿದ್ದರು. ಸದ್ಯ ಕುಟುಂಬದ ಜೊತೆ ಸಮಯ ಕಳೆಯುತ್ತಿರೋ ಬಿ.ಸರೋಜಾ ದೇವಿ ಆಗಾಗ ಕೆಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಚೆನ್ನೈ ಹಾಗೂ ಬೆಂಗಳೂರಿನಲ್ಲೂ ಮನೆ ಹೊಂದಿರೋ ಸರೋಜಾ ದೇವಿ ಅವರು ಈಗ ಬೆಂಗಳೂರಿನ ಮಲ್ಲೇಶ್ವರದಲ್ಲಿ ನೆಲೆಸಿದ್ದಾರೆ.

  English summary
  Darshan who always honors senior artists, he has recently met senior artist Saroja devi and He also spent some time caring her health.
  Monday, October 18, 2021, 13:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X