For Quick Alerts
  ALLOW NOTIFICATIONS  
  For Daily Alerts

  ಕತ್ರೀನಾ ಕೈಫ್ ಆಗಿ ಬದಲಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಮುದ್ದು ಮಗಳು

  |

  ಕ್ರಿಕೆಟ್‌ಗೂ ಬಾಲಿವುಡ್‌ಗೂ ಹಳೆಯ ನಂಟು, ಕ್ರಿಕೆಟಿಗರು ಬಾಲಿವುಡ್ ಪ್ರವೇಶ ಮಾಡುವುದು ಅಥವಾ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

  ಆದರೆ ಬಾಲಿವುಡ್ ಎಷ್ಟು ಜನಪ್ರಿಯವಾಗಿದೆಯೆಂದರೆ ವಿದೇಶಿ ಕ್ರಿಕೆಟಿಗರೂ ಸಹ ಬಾಲಿವುಡ್ ಪ್ರಭಾವಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿ ನಡೆಯುವ ಐಪಿಎಲ್ ಸಹ ಇದಕ್ಕೆ ಕಾರಣವೇ.

  ಬಹಳ ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಾ ಬಂದಿರುವ ಡೇವಿಡ್ ವಾರ್ನರ್ ಸಹ ಬಾಲಿವುಡ್‌ ಸಿನಿಮಾಗಳ ಅಭಿಮಾನಿ. ಅವರೊಬ್ಬರೇ ಅಲ್ಲ ಅವರ ಮುದ್ದು ಮಗಳೂ ಸಹ ಬಾಲಿವುಡ್ ಸಿನಿಮಾ, ಹಾಡುಗಳ ಅಭಿಮಾನಿ.

  ಸಾಮಾಜಿಕ ಜಾಲತಾಣದಲ್ಲಿ ಡೇವಿಡ್ ವಾರ್ನರ್ ಸಕ್ರಿಯ

  ಸಾಮಾಜಿಕ ಜಾಲತಾಣದಲ್ಲಿ ಡೇವಿಡ್ ವಾರ್ನರ್ ಸಕ್ರಿಯ

  ಮೊದಲಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಡೇವಿಡ್ ವಾರ್ನರ್, ಕೊರೊನಾ ಲಾಕ್‌ಡೌನ್ ಆದ ಬಳಿಕವಂತೂ ಇನ್ನಷ್ಟು ಸಕ್ರಿಯರಾಗಿಬಿಟ್ಟಿದ್ದಾರೆ. ತಮ್ಮ ಮಕ್ಕಳ ಜೊತೆಗಿನ ವಿಡಿಯೋಗಳನ್ನು ಅವರು ಪದೇ-ಪದೇ ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ.

  ಕತ್ರೀನಾ ಕೈಫ್ ಹಾಡಿಗೆ ಡೇವಿಡ್ ವಾರ್ನರ್ ಮಗಳ ಕುಣಿತ

  ಕತ್ರೀನಾ ಕೈಫ್ ಹಾಡಿಗೆ ಡೇವಿಡ್ ವಾರ್ನರ್ ಮಗಳ ಕುಣಿತ

  ಕತ್ರೀನಾ ಕೈಫ್ ನರ್ತಿಸಿರುವ 'ಶೀಲಾ ಕೀ ಜವಾನಿ' ಎಂಬ ಐಟಂ ಹಾಡಿಗೆ ಡೇವಿಡ್ ವಾರ್ನರ್ ಮತ್ತು ಅವರ ಮಗಳು ಈವ್ ಮೀ ವಾರ್ನರ್ ಒಟ್ಟಾಗಿ ನರ್ತಿಸಿರುವ ಟಿಕ್‌ಟಾಕ್ ವಿಡಿಯೋವನ್ನು ಡೇವಿಡ್ ವಾರ್ನರ್ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  ಹಲವು ಹಾಡುಗಳಿಗೆ ಟಿಕ್‌ಟಾಕ್ ವಿಡಿಯೋ

  ಹಲವು ಹಾಡುಗಳಿಗೆ ಟಿಕ್‌ಟಾಕ್ ವಿಡಿಯೋ

  ಇದು ಮಾತ್ರವಲ್ಲದೆ ಡೇವಿಡ್ ವಾರ್ನರ್ ತಮ್ಮ ಮಗಳೊಂದಿಗೆ ಇನ್ನೂ ಹಲವು ಹಾಡುಗಳಿಗೆ ಟಿಕ್‌ಟಾಕ್ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಆದರೆ ಈ ಬಾಲಿವುಡ್ ಹಾಡಿನ ಟಿಕ್‌ಟಾಕ್ ವಿಡಿಯೋ ಕೆಲವೇ ಗಂಟೆಗಳಲ್ಲಿ ಭಾರಿ ವೈರಸ್ ಆಗಿದೆ.

  ವಾರ್ನರ್ ಮಗಳು ಈವ್‌

  ವಾರ್ನರ್ ಮಗಳು ಈವ್‌

  ವಾರ್ನರ್ ಮಗಳು ಈವ್ ಭಾರತೀಯ ಶೈಲಿಯ ಉಡುಪು ಧರಿಸಿ, ಹಾಡಿನಲ್ಲಿ ಕತ್ರೀನಾ ಕೈಫ್ ನರ್ತಿಸಿರುವ ರೀತಿಯಲ್ಲೇ ಮುದ್ದು-ಮುದ್ದಾಗಿ ಅನುಕರಣೆ ಮಾಡಿ ಕುಣಿದಿದ್ದಾರೆ. ಡೇವಿಡ್ ವಾರ್ನರ್ ಸಹ ತುಂಬಾ ಚೆನ್ನಾಗಿಯೇ ಡಾನ್ಸ್ ಮಾಡಿದ್ದಾರೆ.

  English summary
  Cricketer David Warner's daughter Ivy Mae Warner dances for Bollywood song. Video went viral in few hours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X