»   » ಡಿಸೆಂಬರ್ ಧಮಾಕ: ಕನ್ನಡ ಸಿನಿಮಾ vs ಪರಭಾಷೆ ಸಿನಿಮಾಗಳು

ಡಿಸೆಂಬರ್ ಧಮಾಕ: ಕನ್ನಡ ಸಿನಿಮಾ vs ಪರಭಾಷೆ ಸಿನಿಮಾಗಳು

Posted By:
Subscribe to Filmibeat Kannada

ವರ್ಷದ ಕೊನೆಯ ತಿಂಗಳು ಡಿಸೆಂಬರ್. ಇದು ಸಿನಿ ಲೋಕಕ್ಕೆ ಅತ್ಯಂತ ಯಶಸ್ವಿ ತಿಂಗಳು. ಯಾಕಂದ್ರೆ, ಡಿಸೆಂಬರ್ ನಲ್ಲಿ ತೆರೆಕಂಡ ಸಿನಿಮಾಗಳು ಬಹುತೇಕ ಸೂಪರ್ ಹಿಟ್ ಆಗಿದೆ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.

ನಿರೀಕ್ಷೆಯಂತೆ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲು ಹಲವು ದೊಡ್ಡ ಚಿತ್ರಗಳು ಸಿದ್ದವಾಗಿವೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ. ತಮಿಳು, ತೆಲುಗು, ಮತ್ತು ಹಿಂದಿಯಲ್ಲೂ ಸಿನಿಮಾಗಳ ಪಟ್ಟಿ ಸಿದ್ದವಾಗಿದೆ.

ಕೆಲವು ಸಿನಿಮಾಗಳು ಈಗಾಗಲೇ ದಿನಾಂಕ ಘೋಷಿಸಿಕೊಂಡಿದ್ದರೇ, ಮತ್ತೆ ಕೆಲವು ಸಿನಿಮಾಗಳು ರೇಸ್ ನಲ್ಲಿದೆ. ಹಾಗಿದ್ರೆ, ವರ್ಷದ ಕೊನೆಯಲ್ಲಿ ಬರುವ ಬಹುಭಾಷಾ ಚಿತ್ರಗಳ ಕಡೆ ಒಂದು ನೋಟ. ಮುಂದೆ ಓದಿ......

ಕನ್ನಡದಲ್ಲಿ ಪಕ್ಕಾ ಆಗಿರುವುದು.!

ದುನಿಯಾ ವಿಜಯ್ ಅಭಿನಯದ 'ಕನಕ' ಮತ್ತು ಶ್ರೀಮುರಳಿ-ಶಿವರಾಜ್ ಕುಮಾರ್ ಅಭಿನಯದ 'ಮಫ್ತಿ' ಸಿನಿಮಾಗಳು ಡಿಸೆಂಬರ್ ನಲ್ಲಿ ಅಪ್ಪಳಿಸುವುದು ಬಹುತೇಕ ಖಚಿತ. ಮೂಲಗಳ ಪ್ರಕಾರ ಡಿಸೆಂಬರ್ 1 ರಂದು ಇವೆರಡು ಚಿತ್ರಗಳು ಚಿತ್ರಮಂದಿರಕ್ಕೆ ಬರುವ ಲೆಕ್ಕಾಚಾರದಲ್ಲಿದೆ.

ಪುನೀತ್ 'ಅಂಜನಿಪುತ್ರ'ನ ಸೀಕ್ರೆಟ್ ಇನ್ನೂ ಬಹಿರಂಗ ಆಗಿಲ್ಲ.!

ರೇಸ್ ನಲ್ಲಿರುವ ಚಿತ್ರಗಳು

ಪವರ್ ಸ್ಟಾರ್ ಪುನೀತ್ ಅಭಿನಯದ 'ಅಂಜನಿಪುತ್ರ', ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚಮಕ್', ಗುರುನಂದನ್-ಸುದೀಪ್ ಅಭಿನಯದ 'ರಾಜು ಕನ್ನಡ ಮೀಡಿಯಂ', ಹಾಗೂ ಅರ್ಜುನ್ ಸರ್ಜಾ ಪುತ್ರಿ ಅಭಿನಯದ 'ಪ್ರೇಮ ಬರಹ' ಚಿತ್ರಗಳು ಬಿಡುಗಡೆಯ ರೇಸ್ ನಲ್ಲಿದೆ. ಆದ್ರೆ, ಈ ಚಿತ್ರಗಳ ರಿಲೀಸ್ ಡೇಟ್ ಇನ್ನು ನಿಗದಿಯಾಗಿಲ್ಲ.

ಶ್ರೀಮುರಳಿ, ಧ್ರುವ ಸರ್ಜಾ 'ಅಯ್ಯೋ ರಾಮ' ಅಂತಿರೋದು ಯಾಕೆ.?

ತಮಿಳಿನಲ್ಲಿ ಯಾವ ಚಿತ್ರಗಳು ಬರುತ್ತಿದೆ

ಶಶಿ ಕುಮಾರ್ ಅಭಿನಯದ 'ಕೋಡಿವೀರನ್' ಸಿನಿಮಾ ಡಿಸೆಂಬರ್ 1 ರಂದು ಬರಲಿದೆ. 'ಉಳಿದವರು ಕಂಡಂತೆ' ಚಿತ್ರದ ತಮಿಳು ರೀಮೇಕ್ ಸಿನಿಮಾ 'ರಿಚ್ಚಿ' ಡಿಸೆಂಬರ್ 8 ರಂದು ತೆರೆ ಕಾಣಲಿದೆ. ಇನ್ನು ಶಿವಕಾರ್ತಿಕೇಯನ್ ಅಭಿನಯದ 'ವೆಲೈಕಾರನ್' ಸಿನಿಮಾ ಡಿಸೆಂಬರ್ 22 ರಂದು ರಿಲೀಸ್ ಆಗಲಿದೆ.

ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳು

ತೆಲುಗು ನಟ ನಾನಿ ಅಭಿನಯದ 'ಎಂಸಿಎ' ಹಾಗೂ ಅಖಿಲ್ ಅಕ್ಕಿನೇನಿ ಅಭಿನಯದ 'ಹಲೋ' ಚಿತ್ರಗಳು ಡಿಸೆಂಬರ್ 21 ಮತ್ತು 22 ಬರಲಿದ್ದು, ಗೋಪಿಚಂದ್ ಅಭಿನಯದ 'ಆಕ್ಸಿಜನ್' ಸಿನಿಮಾ ಡಿಸೆಂಬರ್ 29ಕ್ಕೆ ತೆರೆ ಕಾಣಲಿದೆ. ಇದರ ಜೊತೆ ಮತ್ತಷ್ಟು ಚಿತ್ರಗಳು ರಿಲೀಸ್ ಆಗುವ ಸಾಧ್ಯತೆ ಇದೆ.

ಬಾಲಿವುಡ್ ರೇಸ್ ನಲ್ಲಿ ಯಾವ ಚಿತ್ರಗಳು

ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ ಅಭಿನಯದ '102 ನಾಟ್ ಔಟ್' ಸಿನಿಮಾ ಡಿಸೆಂಬರ್ 1 ರಂದು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ಸಲ್ಮಾನ್ ಖಾನ್ ಅಭಿನಯದ 'ಟೈಗರ್ ಜಿಂದಾ ಹೈ' ಸಿನಿಮಾ ಡಿಸೆಂಬರ್ 22 ರಂದು ಅದ್ಧೂರಿ ಓಪನಿಂಗ್ ಮಾಡಲಿದೆ. ಇನ್ನು ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಸಿನಿಮಾ ಡಿಸೆಂಬರ್ 1 ಕ್ಕೆ ಬರಬೇಕಿತ್ತು. ಆದ್ರೆ, ವಿವಾದ ಹಿನ್ನೆಲೆ ಜನವರಿ ಅಥವಾ ಫೆಬ್ರವರಿಯಲ್ಲಿ ರಿಲೀಸ್ ಆಗಲಿದೆ.

English summary
December Release Movies in Kannada, Tamil, Telugu and hindi. ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಿವು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada