»   » ಮತ್ತೋರ್ವ ನಾಯಕ‌ ನಟ ರಾಜಕೀಯ ಕಣಕ್ಕೆ ಎಂಟ್ರಿ

ಮತ್ತೋರ್ವ ನಾಯಕ‌ ನಟ ರಾಜಕೀಯ ಕಣಕ್ಕೆ ಎಂಟ್ರಿ

Posted By:
Subscribe to Filmibeat Kannada

ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತಿನಿತ್ಯ ರಾಜಕೀಯರಂಗದಲ್ಲಿ ಕಲಾವಿದರ ಹೆಸರುಗಳು ಕೇಳಿ ಬರುತ್ತಲೇ ಇವೆ. ಅದೇ ರೀತಿಯಲ್ಲಿ ಈಗಾಗಲೇ ಕೆಲ ಸ್ಟಾರ್ ಗಳು ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಕಾರ್ಯಗಳನ್ನ. ಶುರು ಮಾಡಿಕೊಂಡಿದ್ದಾರೆ.

ದರ್ಶನ್, ಸುದೀಪ್, ಶಶಿಕುಮಾರ್, ರಂಗಾಯಣರಘು, ಉಪೇಂದ್ರ, ರೂಪ ಐಯ್ಯರ್, ಇವರುಗಳ ನಂತರ ಈಗ ಸ್ಯಾಂಡಲ್ ವುಡ್ ನ ಮತ್ತೊರ್ವ ನಟ ರಾಜಕೀಯ ಪಕ್ಷ‌ ಸೇರಲು ಸಿದ್ದತೆ ಮಾಡಿಕೊಂಡಿದ್ದಾರೆ. ಹೌದು ಶಿಷ್ಯ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಟ ದೀಪಕ್ ರಾಜಕೀಯ ಸೇರುವ ಆಸೆಯನ್ನ ವ್ಯಕ್ತ ಪಡಿಸಿದ್ದಾರೆ.

ತಾವು ಕಾಂಗ್ರೆಸ್ ಪಕ್ಷ ಸೇರುವುದಾಗಿ ದೀಪಕ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ರಾಜಕೀಯಕ್ಕೆ ಬರಲು ಮುಂದಾಗಿರುವ ದೀಪಕ್ ಅವರ ನಿರ್ಧಾರಕ್ಕೆ ಕೆಲ ಅಭಿಮಾನಿಗಳು ವಿರೋಧ ವ್ಯಕ್ತ ಪಡಿಸಿದರೆ ಇನ್ನೂ ಕೆಲವರು ಶುಭಾಶಯ ಕೋರಿದ್ದಾರೆ.

 Deepak has written on Facebook about joining the political party.

ಕಿಚ್ಚನ ರಾಜಕೀಯ ಭವಿಷ್ಯ ಹೇಳಿದ ರಾಜಗುರು

ಕಾಂಗ್ರೆಸ್ ಮೂಲಕ ಚುನಾವಣಾ ಕಣಕ್ಕೆ ಬರಲು ನಿರ್ಧರಿಸಿರುವ ದೀಪಕ್ ಯಾವಾಗ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎನ್ನುವ ಬಗ್ಗೆ ಮಾತ್ರ ಸುಳಿವು ನೀಡಿಲ್ಲ. ಒಟ್ಟಾರೆ ಈ ಭಾರಿಯ ಚುನಾವಣೆಯಲ್ಲಿ ಸ್ಯಾಂಡಲ್ ವುಡ್ ನ‌ ಬಹುತೇಕ ಸ್ಟಾರ್ ಕಲಾವಿದರು ಕಾಣಿಸಿಕೊಳ್ಳುವುದು ಖಚಿತವಾಗುತ್ತಿದೆ.

English summary
Kannada actor Deepak has written on Facebook about joining the political party.Deepak is an actor who is known for his Shishya movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X