»   »  ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

ವಿವಾದಗಳ ಸುಳಿಯಲ್ಲೇ ಒಂದಾಗಿದ್ದ ಶ್ರೀದೇವಿ-ಬೋನಿ ಕಪೂರ್

Posted By:
Subscribe to Filmibeat Kannada
ವಾದಗಳ ನಡುವೆ ಒಂದಾಗಿದ್ದ ಶ್ರೀದೇವಿ-ಬೋನಿ | Filmibeat Kannada

ನಟಿ ಶ್ರೀದೇವಿ ಮತ್ತು ಪತಿ ಬೋನಿ ಕಪೂರ್ ಬಾಲಿವುಡ್ ನ ಯಶಸ್ವಿ ತಾರಾ ದಂಪತಿ. ಸುಮಾರು 22 ವರ್ಷಗಳ ಕಾಲ ಸುಖವಾದ ಜೀವನ ನಡೆಸಿರುವ ಈ ದಂಪತಿಯ ಹಿಂದೆ ದೊಡ್ಡ ವಿವಾದಗಳೇ ಇತ್ತು. ಸಂಕಷ್ಟ, ವಿವಾದಗಳನ್ನ ಮೀರಿ ಶ್ರೀದೇವಿ ಮತ್ತು ಬೋನಿ ಕಪೂರ್ ಒಂದಾಗಿದ್ದರು.

ಮೂಲಗಳ ಪ್ರಕಾರ ಶ್ರೀದೇವಿ ಮತ್ತು ಬೋನಿ ಕಪೂರ್ ಇಬ್ಬರಿಗೂ ಇದು ಎರಡನೇ ಮದುವೆ. ಪ್ರತ್ಯೇಕವಾಗಿ ಇಬ್ಬರು ಬೇರೆಯವರೊಂದಿಗೆ ಸಹ ಜೀವನ ನಡೆಸಿದ್ದರು. ನಂತರ ಇಬ್ಬರು ಆ ಜೀವನಕ್ಕೆ ಗುಡ್ ಬೈ ಹೇಳಿ ಹೊಸ ಜೀವನಕ್ಕೆ ನಾಂದಿ ಹಾಡಿದ್ದರು.

ಶ್ರೀದೇವಿ ಮತ್ತು ಬೋನಿ ಕಪೂರ್ ಹಿಂದೆ ಒಂದು ರೋಚಕ ಲವ್ ಸ್ಟೋರಿ ಇದೆ. ಶ್ರೀದೇವಿಗಾಗಿ ತಮ್ಮ ಮೊದಲ ಹೆಂಡತಿಗೆ ಗುಡ್ ಬೈ ಹೇಳಿದ್ದರು ಬೋನಿ ಕಪೂರ್. ಶ್ರೀದೇವಿ ಬೇರೆಯವರೊಂದಿಗೆ ಜೀವನ ನಡೆಸಿದ್ದರೂ ಸಹ ಆಕೆಗೆ ಆಶ್ರಯ ನೀಡಿ ತನ್ನ ಪ್ರೀತಿಯನ್ನ ಉಳಿಸಿಕೊಂಡಿದ್ದರು. ಶ್ರೀದೇವಿ-ಬೋನಿ ಕಪೂರ್ ಲವ್ ಸ್ಟೋರಿ ಹಿಂದೆ ಇರುವ ರೋಚಕ ಕಥೆಯನ್ನ ಮುಂದೆ ಓದಿ...

ಶ್ರೀದೇವಿಯ ಸೌಂದರ್ಯಕ್ಕೆ ಮರುಳಾಗಿದ್ದ ಬೋನಿ ಕಪೂರ್

ಅದು 1970 ರ ದಶಕ. ಬೋನಿ ಕಪೂರ್ ಬಾಲಿವುಡ್ ನ ಖ್ಯಾತ ನಿರ್ಮಾಪಕರಾಗಿದ್ದರು. ಶ್ರೀದೇವಿಯನ್ನ ತಮಿಳು ಚಿತ್ರದಲ್ಲಿ ಮೊದಲ ಸಲ ನೋಡಿದಾಗಲೇ ಆಕೆಯ ಸೌಂದರ್ಯಕ್ಕೆ ಮನಸೋತಿದ್ದರು. 1979ರಲ್ಲಿ ಬಾಲಿವುಡ್ನ ಮೊದಲ ಸಿನಿಮಾ 'Solva Sawan' ಚಿತ್ರದ ಚಿತ್ರೀಕರಣದ ವೇಳೆ ಮೊದಲ ಬಾರಿಗೆ ಭೇಟಿ ಮಾಡಿದರು. ಆದ್ರೆ, ಆ ವೇಳೆ ಸರಿಯಾಗಿ ಮಾತನಾಡಲಿಲ್ಲ.

ಆತ್ಮೀಯತೆ ಬೆಳೆಸಲು ಸಿನಿಮಾ ಆಫರ್ ನೀಡಿದರು

ಶ್ರೀದೇವಿಯ ಜೊತೆ ಆತ್ಮೀಯತೆ ಬೆಳಸಿಕೊಳ್ಳಬೇಕು ಎಂಬ ಕಾರಣಕ್ಕೆ 'ಮಿಸ್ಟರ್ ಇಂಡಿಯಾ' ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು. ನಿರೀಕ್ಷೆಯಂತೆ ಶ್ರೀದೇವಿ ಮತ್ತು ಬೋನಿ ಅವರ ನಡುವೆ ಸ್ನೇಹವೂ ಉತ್ತಮವಾಯಿತು.

ಕೇಳಿದ್ದಕ್ಕಿಂತೆ ಹೆಚ್ಚು ಸಂಭಾವನೆ ಕೊಟ್ಟ ಬೋನಿ

ಶ್ರೀದೇವಿಯ ಸಂಭಾವನೆ ವಿಚಾರವಾಗಿ ಶ್ರೀದೇವಿ ಅವರ ತಾಯಿಯೇ ಎಲ್ಲವನ್ನ ನೋಡಿಕೊಳ್ಳುತ್ತಿದ್ದರು. 'ಮಿಸ್ಟರ್ ಇಂಡಿಯಾ' ಚಿತ್ರದಲ್ಲಿ ಅಭಿನಯಿಸಲು ಶ್ರೀದೇವಿ ತಾಯಿ 10 ಲಕ್ಷ ಸಂಭಾವನೆ ಕೇಳಿದರು. ಆದ್ರೆ, ಬೋನಿ ಕಪೂರ್ 11 ಲಕ್ಷ ದುಡ್ಡು ನೀಡಿದರು. ಇದರಿಂದ ಜೊತೆಯಲ್ಲಿ ಕೆಲಸ ಮಾಡಿದ ಹಾಗೂ ಆಗುತ್ತೆ, ಅದೇ ರೀತಿ ಸ್ನೇಹವೂ ಬೆಳೆಸಬಹುದು ಎಂಬ ಲೆಕ್ಕಾಚಾರ ಬೋನಿ ಕಪೂರ್ ತಲೆಯಲ್ಲಿತ್ತು. ಒಂದು ರೀತಿ ಒನ್ ಸೈಡ್ ಲವ್ ಸ್ಟೋರಿ ಆಗಿತ್ತು.

ಮಿಥುನ್ ಚಕ್ರವರ್ತಿ ಜೊತೆ ಶ್ರೀದೇವಿ ಮದುವೆ.?

ಬೋನಿ ಕಪೂರ್ ಆಗ ಮದುವೆ ಆಗಿರಲಿಲ್ಲ. ಶ್ರೀದೇವಿಯನ್ನೇ ಪ್ರೀತಿಸಲು ಅರಂಭಿಸಿದ್ದರು. ಆದ್ರೆ, ಶ್ರೀದೇವಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಜೊತೆ ಸೀಕ್ರೆಟ್ ಆಗಿ ಮದುವೆಯಾಗಿಬಿಟ್ಟಿದ್ದರು ಎಂಬ ಸುದ್ದಿ ಹೊರಬಿತ್ತು. ಇದು ಸಹಜವಾಗಿ ಬೋನಿ ಕಪೂರ್ ಗೂ ಆಘಾತ ಉಂಟು ಮಾಡಿತ್ತು.

ಬೇರೆ ಮದುವೆಯಾದ ಬೋನಿ ಕಪೂರ್

ಶ್ರೀದೇವಿ ಮತ್ತು ಮಿಥುನ್ ಚಕ್ರವರ್ತಿ ಇಬ್ಬರು ಮದುವೆ ಆಗಿದ್ದಾರೆ ಸುದ್ದಿ ಕೇಳಿದ ನಂತರ ಬೋನಿ ಕಪೂರ್ ಬೇರೆ ಮದುವೆಯಾದರು. ಮೋನಾ ಅವರೊಂದಿಗೆ ಸಪ್ತಪದಿ ತುಳಿದ ಬೋನಿ ಕಪೂರ್ 13 ವರ್ಷ ಸಂಸಾರ ಮಾಡಿದರು. ಬೋನಿ-ಮೋನಾ ದಂಪತಿಗೆ ಅರ್ಜುನ್ ಕಪೂರ್ ಮತ್ತು ಅನ್ಷುಲ ಕಪೂರ್ ಇಬ್ಬರು ಮಕ್ಕಳು.

ಮಿಥುನ್ ಚಕ್ರವರ್ತಿಗೂ ಬೇರೆ ಮದುವೆ ಆಗಿತ್ತು

ಶ್ರೀದೇವಿಯ ಜೊತೆ ಗೌಪ್ಯವಾಗಿ ಮದುವೆಯಾಗಿದ್ದ ಮಿಥುನ್ ಚಕ್ರವರ್ತಿ ಅದಕ್ಕೂ ಮುಂಚೆಯೇ ನಟಿ ಯೋಗಿತಾ ಬಾಲಿ ಜೊತೆ ವಿವಾಹವಾಗಿದ್ದರು. ನಂತರ ಶ್ರೀದೇವಿ ಜೊತೆಯೂ ಸಂಬಂಧ ಮುಂದವರಿಸಿದ್ದರು. ಈ ಮಧ್ಯೆ ಶ್ರೀದೇವಿಯ ಜೊತೆ ಸಂಬಂಧ ಮುರಿದುಕೊಂಡ ಮಿಥುನ್ ಚಕ್ರವರ್ತಿ ಯೋಗಿತಾ ಬಾಲಿ ಅವರ ಜೊತೆಯಲ್ಲಿಯೇ ಜೀವನ ನಡೆಸಲು ತೀರ್ಮಾನಕ್ಕೆ ಬರುತ್ತಾರೆ.

ಒಂಟಿಯಾದ ಶ್ರೀದೇವಿಗೆ ಜೊತೆಯಾದ ಬೋನಿ

ಹೀಗೆ, ಮಿಥುನ್ ಚಕ್ರವರ್ತಿ ಜೊತೆಗಿನ ಸಂಬಂಧ ಮುರಿದುಬಿದ್ದ ನಂತರ ಶ್ರೀದೇವಿ ಒಂಟಿಯಾದರು. ಈ ನಡುವೆ ಬೋನಿ ಕಪೂರ್ ಶ್ರೀದೇವಿಗೆ ಆಶ್ರಯ ನೀಡಿದರು. ತಮ್ಮ ಸ್ನೇಹ ಮತ್ತೆ ಚಿಗುರಿತು.

ಮದುವೆಗೂ ಮುಂಚೆ ತಾಯಿಯಾದ ಶ್ರೀದೇವಿ

ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಸ್ನೇಹದ ಸಂಬಂಧ ಪ್ರೀತಿಯ ರೂಪ ಪಡೆಯಿತು. ಇದರ ಪ್ರತಿಫಲವಾಗಿ ಶ್ರೀದೇವಿ ಮದುವೆಗೂ ಮುಂಚೆಯೇ ಗರ್ಭಿಣಿ ಆದರು. ಈ ವಿಷ್ಯ ಬಹಿರಂಗವಾಗುತ್ತಿದ್ದಂತೆ ಬೋನಿ ಕಪೂರ್ ತಮ್ಮ ಮೊದಲ ಪತ್ನಿ ಮೋನಾಗೆ ವಿಚ್ಛೇದನ ನೀಡಿ 1996ರಲ್ಲಿ ಶ್ರೀದೇವಿಯನ್ನ ಮದುವೆ ಆದರು.

ಇಬ್ಬರು ಮಕ್ಕಳು ಮತ್ತು ಸಂತೋಷದ ಕುಟುಂಬ

ಅಲ್ಲಿಂದ ಸುಖವಾದ ಜೀವನ ನಡೆಸಿರುವ ಬೋನಿ ಮತ್ತು ಶ್ರೀದೇವಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್. ಜಾಹ್ನವಿ ಈಗಾಗಲೇ 'ದಡ್ಕನ್' ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಬಿಡುಗಡೆಯಾಗಬೇಕಿದೆ.

English summary
Intimate Details About Sridevi, Boney Kapoor Controversial Affair. Smitten by Sridevi, Boney Kapoor cast her in Mr. India to be close to her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada