ಕಸದ ರಾಶಿ, ಕೆಟ್ಟ ವಾಸನೆ ನಡುವೆಯೂ ಚಿತ್ರೀಕರಣ ಮುಗಿಸಿಕೊಟ್ಟ ಪ್ರಿಯಾಂಕ

ಪ್ರಿಯಾಂಕ ಉಪೇಂದ್ರ ನಟನೆಯ 'ದೇವಕಿ' ಸಿನಿಮಾ ಜುಲೈ 5 ರಂದು ಬಿಡುಗಡೆಯಾಗುತ್ತಿದೆ. ಬೇರೆ ಬೇರೆ ರೀತಿಯಲ್ಲಿ ಸಿನಿಮಾವನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ಚಿತ್ರತಂಡ ಶುರು ಮಾಡಿದೆ.

ಸಿನಿಮಾದ ಚಿತ್ರೀಕರಣದಲ್ಲಿ ಆದ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಚಿತ್ರದ ಪ್ರಮೋಷನ್ಸ್ ನಡೆಯುತ್ತಿದೆ. ಅದೇ ರೀತಿ ಸಿನಿಮಾದ ಒಂದು ವಿಷಯವನ್ನು ಇದೀಗ ನಿರ್ದೇಶಕ ಲೋಹಿತ್ ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ.

'ದೇವಕಿ' ಸಿನಿಮಾದ ಬಹುಪಾಲು ಚಿತ್ರೀಕರಣ ಕೊಲ್ಕತ್ತಾದಲ್ಲಿ ಆಗಿದೆ. ಅಲ್ಲಿನ ರಿಯಲ್ ಸ್ಲಂ ನಲ್ಲಿ ಚಿತ್ರದ ಶೂಟಿಂಗ್ ಮಾಡಿದ್ದಾರೆ. ಬೃಹತ್ ಕಸದ ರಾಶಿಯ ನಡುವೆ ಪ್ರಿಯಾಂಕ ಉಪೇಂದ್ರ ಕೆಲ ದೃಶ್ಯಗಳಲ್ಲಿ ನಟಿಸಬೇಕಾಗಿತ್ತು.

devaki kannada movie shooting has been done in kolkata slums

ಈ ಸೀನ್ ಗಾಗಿ ಚಿತ್ರತಂಡ ಕೃತಕ ಕಸ ಹಾಕಿ ಶೂಟ್ ಮಾಡುವ ತಯಾರಿ ನಡೆಸಿತ್ತು. ಆದರೆ, ಮಳೆ ಬಂದ ಕಾರಣ ಅದನ್ನು ಮಾಡಲು ಆಗಲಿಲ್ಲ. ಆಗ ಪ್ರಿಯಾಂಕ ಚಿತ್ರೀಕರಣದ ಸಮಯ ಹಾಳು ಮಾಡುವುದು ಬೇಡ ಎಂದು ಸ್ಲಂ ಕಸದ ನಡುವೆಯೇ ಶೂಟ್ ಮಾಡೋಣ ಎಂದು ಚಿತ್ರತಂಡಕ್ಕೆ ಹೇಳಿದರು.

ಅಂತಹ ಕಸದ ರಾಶಿಯ ವಾಸನೆ ನಡುವೆ, ಒಂದು ನಿಮಿಷ ಇರುವುದು ಕಷ್ಟ. ಆದರೆ, ಪ್ರಿಯಾಂಕ ಮಾತ್ರ ಇಡೀ ದೃಶ್ಯದ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ. ಮೂಗಿಗೆ ವಾಸನೆ ಬಡಿಯುತ್ತಿದ್ದರೂ ತಲೆ ಕಡಿಸಿಕೊಳ್ಳದೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.

devaki kannada movie shooting has been done in kolkata slums

ಸಿನಿಮಾಗಾಗಿ ಪ್ರಿಯಾಂಕ ಉಪೇಂದ್ರ ಅವರ ಡೆಡಿಕೇಶನ್ ಕಂಡು ಚಿತ್ರತಂಡ ಖುಷಿಯಾಗಿದೆ. 'ದೇವಕಿ' ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಉಪ್ಪಿ ಪುತ್ರಿ ಐಶ್ವರ್ಯ ನಟನೆಯ ಮೊದಲ ಸಿನಿಮಾ ಇದಾಗಿದೆ.

'ದೇವಕಿ' ಚಿತ್ರದ ಮೇಕಿಂಗ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

More from Filmibeat

English summary
Actress Priyanka Upendra's 'Devaki' kannada movie shooting has been done in kolkata slums. The movie is directed by July 5th and directed bby Lohith H Manu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X