»   » 'ರಾಜಕುಮಾರ'ನಿಗಾಗಿ ಮತ್ತೆ ಕನ್ನಡಕ್ಕೆ ಬಂದ ದೇವಿಶ್ರೀ ಪ್ರಸಾದ್

'ರಾಜಕುಮಾರ'ನಿಗಾಗಿ ಮತ್ತೆ ಕನ್ನಡಕ್ಕೆ ಬಂದ ದೇವಿಶ್ರೀ ಪ್ರಸಾದ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಚಿತ್ರೀಕರಣ ಮುಗಿದಿದ್ದು, ಈಗ ಆಡಿಯೋ ಬಿಡುಗಡೆ ಮಾಡಲು ತಯಾರಾಗುತ್ತಿದೆ.

ಶರತ್ ಕುಮಾರ್, ಪ್ರಕಾಶ್ ರೈ, ನಟಿ ಪ್ರಿಯಾ ಆನಂದ್ ಹೀಗೆ ದಕ್ಷಿಣ ಭಾರತದ ಹಲವು ಸ್ಟಾರ್ ಕಲಾವಿದರು, 'ರಾಜಕುಮಾರ' ಚಿತ್ರದಲ್ಲಿ ಅಭಿನಯಿಸಿದ್ದಾರೆ.['ರಾಜಕುಮಾರ' ಚಿತ್ರದ ಚಿತ್ರೀಕರಣ ಮುಕ್ತಾಯ!]

ಇದೀಗ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಗಳ ನೆಚ್ಚಿನ ಸಂಗೀತ ನಿರ್ದೇಶಕ ದೇವಿಶ್ರಿ ಪ್ರಸಾದ್ ರಾಜಕುಮಾರ ತಂಡವನ್ನ ಸೇರಿಕೊಂಡಿದ್ದಾರೆ. ಮುಂದೆ ಓದಿ...

'ರಾಜಕುಮಾರ'ನಿಗಾಗಿ ಬಂದ ಡಿಎಸ್.ಪಿ

'ರಾಜಕುಮಾರ' ಚಿತ್ರಕ್ಕಾಗಿ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಕನ್ನಡಕ್ಕೆ ಮತ್ತೆ ಬಂದಿದ್ದಾರೆ.['ರಾಜಕುಮಾರ' ಚಿತ್ರದ ನಾಯಕಿಗೆ ಪುನೀತ್ ಗಿಫ್ಟ್: ಏನದು?]

ಟೈಟಲ್ ಹಾಡಿಗೆ ಡಿಎಸ್.ಪಿ ಧ್ವನಿ

'ರಾಜಕುಮಾರ' ಚಿತ್ರದ ಟೈಟಲ್ ಹಾಡನ್ನ ಡಿಎಸ್.ಪಿ ಹಾಡಿದ್ದಾರೆ. ಈ ಹಾಡಿಗೆ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದು, ಹರಿಕೃಷ್ಣ ಮ್ಯೂಸಿಕ್ ನೀಡಿದ್ದಾರೆ.['ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ರೋಮಾಂಚನಗೊಂಡ ಜಗ್ಗೇಶ್!]

'ರನ್ನ' ಚಿತ್ರದಲ್ಲಿ ಹಾಡಿದ್ದ ಡಿಎಸ್.ಪಿ

ಈ ಹಿಂದೆ ಕನ್ನಡದಲ್ಲಿ ಗಣೇಶ್ ಅಭಿನಯದ 'ಸಂಗಮ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಡಿಎಸ್.ಪಿ, ಸುದೀಪ್ ಅಭಿನಯದ 'ರನ್ನ' ಚಿತ್ರದ ಟೈಟಲ್ ಹಾಡನ್ನ ಹಾಡಿದ್ದರು. ಈ ಹಾಡು ಸೂಪರ್ ಹಿಟ್ ಆಗಿತ್ತು.[ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'! ]

ತೆಲುಗಿನ ಜಾನಿ ಮಾಸ್ಟರ್ ಕೊರಿಯೋಗ್ರಫಿ

'ರಾಜಕುಮಾರ' ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ತೆಲುಗಿನ ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್, 'ರಾಜಕುಮಾರ' ಚಿತ್ರದ ಹಾಡೊಂದಕ್ಕೆ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರದ ಮಾಸ್ ಹಾಡಿಗೆ ಅಪ್ಪು ಅವರಿಂದ ಜಬರ್ ದಸ್ತ್ ಸ್ಟೆಪ್ಸ್ ಹಾಕಿಸಿದ್ದಾರಂತೆ. ತೆಲುಗಿನ 'ನಾಯಕ್', 'ಖೈದಿ-150', 'ಬ್ರೂಸ್ ಲೀ' ಚಿತ್ರಗಳಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.

ಫೆಬ್ರವರಿಯಲ್ಲಿ ಆಡಿಯೋ ರಿಲೀಸ್!

ಸದ್ಯ, ಸಂಪೂರ್ಣ ಚಿತ್ರೀಕರಣ ಮುಗಿಸಿರುವ 'ರಾಜಕುಮಾರ', ಫೆಬ್ರವರಿ ಕೊನೆಯ ವಾರದಲ್ಲಿ ಆಡಿಯೋ ಬಿಡುಗಡೆ ಮಾಡಲಿದೆಯಂತೆ.

English summary
Audio of Raajakumara Will be out by February last week. Introduction song of puneeth rajkumar's is written by Director santhosh anandram & sung by Telugu Music Director DSP...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada