For Quick Alerts
  ALLOW NOTIFICATIONS  
  For Daily Alerts

  ಮೋಹಕತಾರೆ ರಮ್ಯಾ ಕಂಬ್ಯಾಕ್ ಚಿತ್ರ ಫಿಕ್ಸ್; ಮುಹೂರ್ತವೂ ಆಯಿತು, ಟೈಟಲ್ ಕೂಡ ಹೊರಬಿತ್ತು!

  |

  ನಟಿ ಮೋಹಕತಾರೆ ರಮ್ಯಾ ನಾಗರಹಾವು ಚಿತ್ರದ ನಂತರ ನಟನೆಯಿಂದ ದೂರ ಸರಿದಿದ್ದರು. ಹೀಗೆ ಐದಾರು ವರ್ಷಗಳ ಕಾಲ ಸಿನಿ ರಂಗದಿಂದೂರ ಉಳಿದಿದ್ದ ನಟಿ ರಮ್ಯಾ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು. ಆ ಪ್ರಶ್ನೆಗೆ ಉತ್ತರ ನೀಡಿದ ರಮ್ಯಾ ಇತ್ತೀಚಿಗಷ್ಟೆ ಆ್ಯಪಲ್ ಬಾಕ್ಸ್ ಎಂಬ ತಮ್ಮ ಒಡೆತನದ ಪ್ರೊಡಕ್ಷನ್ ಕಂಪನಿಯನ್ನು ಸಹ ಘೋಷಣೆ ಮಾಡಿ ಅದರಡಿಯಲ್ಲಿ ನಿರ್ಮಾಣವಾಗಲಿರುವ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದಲ್ಲಿ ತಾವೇ ನಟಿಯಾಗಿ ನಟಿಸುವ ಮೂಲಕ ಚಂದನವನಕ್ಕೆ ಎಂಟ್ರಿ ಕೊಡುವುದಾಗಿ ಬಹಿರಂಗಪಡಿಸಿದ್ದರು.

  ಆದರೆ ಈ ಚಿತ್ರದಿಂದ ರಮ್ಯಾ ಹೊರ ನಡೆದಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು. ರಮ್ಯಾ ಜಾಗಕ್ಕೆ ಯುವನಟಿಯೊಬ್ಬರು ಆಯ್ಕೆಯಾಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಹೀಗಾಗಿ ರಮ್ಯಾ ಸ್ವಾತಿಮುತ್ತಿನ ಮಳೆಹನಿಯೇ ಚಿತ್ರದ ಮೂಲಕ ಚಂದನವನಕ್ಕೆ ಮರು ಪ್ರವೇಶ ಮಾಡಲಿದ್ದಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರಾಸೆ ಉಂಟಾಗಿತ್ತು.

  ಆದರೀಗ ಮೋಹಕ ತಾರೆ ರಮ್ಯಾ ಡಾಲಿ ಧನಂಜಯ್ ಚಿತ್ರದಲ್ಲಿ ನಟಿಯಾಗಿ ಅಭಿನಯಿಸುತ್ತಿರುವ ಸುದ್ದಿ ಹೊರಬಿದ್ದಿದ್ದು, ನಿರಾಸೆಗೊಂಡಿದ್ದ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ. ಟ್ರೆಂಡಿಂಗ್ ಪಟ್ಟಿಯಲ್ಲಿರುವ ನಟ ಡಾಲಿ ಧನಂಜಯ್ ಜತೆ ರಮ್ಯಾ ಜೋಡಿಯಾಗಿ ಹೇಗೆ ಕಾಣಿಸಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹಾಗೂ ಸಿನಿ ಪ್ರಿಯರಲ್ಲಿ ಹೆಚ್ಚಾಗಿದೆ.

  ಡಾಲಿ ಮತ್ತು ರಮ್ಯಾ ಜೋಡಿಯ ಚಿತ್ರವಿದು

  ಡಾಲಿ ಮತ್ತು ರಮ್ಯಾ ಜೋಡಿಯ ಚಿತ್ರವಿದು

  ನಟ ಧನಂಜಯ್ ಅಭಿನಯದ 'ಉತ್ತರಕಾಂಡ' ಎಂಬ ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ನಟಿಯಾಗಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಕೆಲ ದಿನಗಳ ಹಿಂದಷ್ಟೆ ಈ ಸಿನಿಮಾದಲ್ಲಿ ನಟಿ ರಮ್ಯಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಎಲ್ಲಿಯೂ ಈ ಕುರಿತಾಗಿ ಅಧಿಕೃತ ಘೋಷಣೆ ಆಗಿರಲಿಲ್ಲ. ಆದರೆ ಇಂದು ( ನವೆಂಬರ್ 6 ) ನಡೆದ ಚಿತ್ರದ ಮುಹೂರ್ತ ಸಮಾರಂಭದ ಮೂಲಕ ರಮ್ಯಾನೇ ಈ ಚಿತ್ರದ ನಾಯಕಿ ಎಂಬುದು ರಿವೀಲ್ ಆಗಿದೆ. ನಟಿ ರಮ್ಯಾ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಫೋಟೋಗಳು ವೈರಲ್ ಆಗಿವೆ, ಚಿತ್ರದ ಪೋಸ್ಟರ್‌ನಲ್ಲೂ ಸಹ ಧನಂಜಯ್ ಹಾಗೂ ರಮ್ಯಾ ಇಬ್ಬರ ಹೆಸರಿದೆ. ಈ ಚಿತ್ರಕ್ಕೆ ರತ್ನನ್ ಪ್ರಪಂಚ ನಿರ್ದೇಶನ ಮಾಡಿದ್ದ ರೋಹಿತ್ ಪದಕಿ ನಿರ್ದೇಶನವಿದ್ದು, ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬಂಡವಾಳ ಹೂಡಲಿದ್ದಾರೆ.

  'ಸ್ವಾತಿ ಮುತ್ತಿನ ಮಳೆ ಹನಿಯೇ'ಗೆ ಸಿರಿ ರವಿಕುಮಾರ್ ನಾಯಕಿ

  'ಸ್ವಾತಿ ಮುತ್ತಿನ ಮಳೆ ಹನಿಯೇ'ಗೆ ಸಿರಿ ರವಿಕುಮಾರ್ ನಾಯಕಿ

  ಇನ್ನು ರಾಜ್ ಬಿ ಶೆಟ್ಟಿ ಜತೆ ರಮ್ಯಾ ನಾಯಕಿಯಾಗಿ ನಟಿಸಬೇಕಿದ್ದ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದ ಚಿತ್ರೀಕರಣ ಆರಂಭವಾಗುವ ಮುನ್ನವೇ ನಟಿ ರಮ್ಯಾ ಹೊರ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದರ ಬೆನ್ನಲ್ಲೇ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಸಕುಟುಂಬ ಸಮೇತ ಚಿತ್ರದಲ್ಲಿ ನಟಿಯಾಗಿ ಅಭಿನಯಿಸಿದ್ದ ಸಿರಿ ರವಿಕುಮಾರ್ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರಕ್ಕೆ ನಾಯಕಿಯಾಗಿ ರಮ್ಯಾ ಬದಲಾಗಿ ಆಯ್ಕೆಗೊಂಡಿದ್ದಾರೆ ಎಂಬ ಸುದ್ದಿಯೂ ಹೊರಬಿತ್ತು.

  ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಪ್ರೋಮೊದಲ್ಲಿ ರಮ್ಯಾ

  ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಪ್ರೋಮೊದಲ್ಲಿ ರಮ್ಯಾ

  ಇನ್ನು ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದಿಂದ ರಮ್ಯಾ ಹೊರ ನಡೆದ ನಂತರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಯುವ ಚಿತ್ರತಂಡದ ಜತೆ ಕೈ ಜೋಡಿಸಿದ್ದಾರೆ ಎನ್ನಲಾಗಿತ್ತು. ಈ ಕುರಿತಾಗಿ ಪುಟ್ಟ ಟೀಸರ್ ಕೂಡ ಬಿಡುಗಡೆಯಾಗಿತ್ತು. ಆದರೆ ಇದೊಂದು ಪ್ರಮೋಷನಲ್ ಕಂಟೆಂಟ್ ಎಂಬ ಮಾತುಗಳಿವೆ. ಏಕೆಂದರೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ಜತೆ ಹಿಂದೆ ಇದೇ ರೀತಿ ಪುನೀತ್ ರಾಜ್ ಕುಮಾರ್ ಕೂಡಾ ಪ್ರಚಾರಕ್ಕಾಗಿ ಕೈಜೋಡಿಸಿದ್ದರು.

  English summary
  Dhananjaya and Ramya Starrer Uttarakaanda pooja function happened today
  Sunday, November 6, 2022, 18:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X