Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಡಾ.ರಾಜ್ ಮೊಮ್ಮಗಳು
Recommended Video
ಡಾ. ರಾಜ್ ಕುಮಾರ್ ಕುಟುಂಬದಿಂದ ಮತ್ತೋರ್ವರು ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೆ ರಾಜ್ ಮೊಮ್ಮಕ್ಕಳು ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್ ಕುಮಾರ್ ಮೂರು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಅಲ್ಲದೆ ಇನ್ನು ಎರಡು-ಮೂರು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಜೊತೆಗೆ ಡಾ.ರಾಜ್ ಮತ್ತೋರ್ವ ಮೊಮ್ಮಗ ಧೀರನ್ ರಾಮ್ ಕುಮಾರ್ ಸಹ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ಜೊತೆಗೀಗ ರಾಜ್ ಕುಮಾರ್ ಕುಟುಂಬದಿಂದ ಮೊದಲ ಬಾರಿಗೆ ನಾಯಕಿಯೊಬ್ಬಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ತಾತ
ಡಾ.ರಾಜ್
ಅಂತೆ
'ದಾರಿ
ತಪ್ಪಿದ
ಮಗ'ನಾದ
ಮೊಮ್ಮಗ
ಧೀರೇನ್.!
ಹೌದು, ಡಾ, ರಾಜ್ ಕುಮಾರ್ ಮಗಳ ಮಗಳು ಚಿತ್ರರಂಗದ ಪಯಣ ಶುರು ಮಾಡುತ್ತಿದ್ದಾರೆ. ಈ ಮೂಲಕ ರಾಜ್ ಕುಟುಂಬದಿಂದ ಚಿತ್ರರಂಗಕ್ಕೆ ಬರುವ ಮೊದಲ ನಾಯಕಿ ಎನ್ನುವ ವಿಶೇಷತೆ ಕೂಡ ಅವರದ್ದು. ರಾಜ್ ಮೊಮ್ಮಗಳಾದ ಧನ್ಯಾ ಮೊದಲ ಸಿನಿಮಾದ ತಯಾರಿಯಲ್ಲಿದ್ದಾರೆ. ಮುಂದೆ ಓದಿ..

ರಾಮ್ ಕುಮಾರ್-ಪೂರ್ಣಿಮ ಮಗಳು ಧನ್ಯಾ
ಧನ್ಯಾ ಡಾ.ರಾಜ್ ಕುಮಾರ್ ಮಗಳಾದ ಪೂರ್ಣಿಮ ರಾಮ್ ಕುಮಾರ್ ಮಗಳು. ಈಗಾಗಲೆ ಪೂರ್ಣಿಮ ರಾಮ್ ಕುಮಾರ್ ಮಗ ಧೀರನ್ ರಾಮ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೆ ಧೀರನ್ ಸಹೋದರಿ ಧನ್ಯಾ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಚಿತ್ರಕ್ಕೆ ಈಗಾಗಲೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಚಿತ್ರಕ್ಕೆ ಧನ್ಯಾ ಭರ್ಜರಿ ತಯಾರಿ
ಮೊದಲ ಬಾರಿಗೆ ಬಣ್ಣ ಹಚ್ಚುತ್ತಿರುವ ಧನ್ಯಾ ಈಗಾಗಲೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರಂತೆ. ನೃತ್ಯ, ಫಿಟ್ನೆಸ್, ನಟನೆ ಸೇರಿದಂತೆ ಮುಂತಾದ ವಿಚಾರಗಳಲ್ಲಿ ಈಗಾಗಲೆ ತರಬೇತಿ ಪಡೆದಿದ್ದಾರೆ. ಇನ್ನು ಪಾತ್ರಕ್ಕಾಗಿ ಒಂದು ತಿಂಗಳು ತಯಾರಿ ಮಾಡಿಕೊಳ್ಳಲಿದ್ದಾರಂತೆ ಧನ್ಯಾ.
ರಾಜ್
ಮೊಮ್ಮಗನ
ಚೊಚ್ಚಲ
ಸಿನಿಮಾದ
ಬಗ್ಗೆ
ಹೀಗೊಂದು
ಹೊಸ
ಸುದ್ದಿ

ಸೂರಜ್ ಗೌಡ ನಾಯಕ
ನಟ ಸೂರಜ್ ಗೌಡ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಧನ್ಯಾ ನಾಯಕಿಯಾಗುವ ಮೂಲಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬರುತ್ತಿದ್ದಾರೆ. 'ಮದುವೆಯ ಮಮತೆಯ ಕರೆಯೋಲೆ', 'ಕಹಿ' ಮತ್ತು 'ಸಿಲಿಕಾನ್ ಸಿಟಿ' ಚಿತ್ರಗಳಲ್ಲಿ ನಾಯಕನಾಗಿ ಮಿಂಚಿರುವ ಸೂರಜ್ ಈಗ ರಾಜ್ ಮೊಮ್ಮಗಳ ಜೊತೆ ರೋಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.

ಸೂರಜ್ ಕಥೆ-ಸುಮನ್ ನಿರ್ದೇಶನ
ವಿಶೇಷ ಅಂದ್ರೆ ಇನ್ನು ಹೆಸರಿಡದ ಈ ಹೊಸ ಚಿತ್ರಕ್ಕೆ ಸೂರಜ್ ಗೌಡ ಕಥೆ ಬರೆದಿದ್ದಾರೆ. ನಾಯಕನಾಗಿ ಮಿಂಚುವ ಜೊತೆಗೆ ಸೂರಜ್ ಮೊದಲ ಬಾರಿಗೆ ಕಥೆ ಬರೆದಿದ್ದಾರೆ. ಸಿನಿಮಾದ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡಬೇಕೆನ್ನುವ ಉದ್ದೇಶದಿಂದ ಕಥೆ ಕೂಡ ಬರೆದಿದ್ದಾರಂತೆ. ಇನ್ನು ಚಿತ್ರಕ್ಕೆ ಮೊದಲ ಬಾರಿಗೆ ಸುಮನ್ ಜಾದೂಗಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಜುಲೈನಲ್ಲಿ ಚಿತ್ರೀಕರಣ ಪ್ರಾರಂಭ
ಪ್ರಿ-ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಸಧ್ಯದಲ್ಲೇ ಮುಹೂರ್ತ ಮಾಡಿಕೊಂಡು, ಮುಂದಿನ ತಿಂಗಳು ಜುಲೈನಿಂದ ಚಿತ್ರೀಕರಣಕ್ಕೆ ಹೊರಡಲಿದೆ. ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸಧ್ಯದಲ್ಲೇ ಹೊರ ಬೀಳಬೇಕಿದೆ.