For Quick Alerts
  ALLOW NOTIFICATIONS  
  For Daily Alerts

  ಕುಟುಂಬದ ಜೊತೆ ಧ್ರುವ-ಚಿರು ಸರ್ಜಾ ಪಗಡೆ ಆಟ: ವಿಡಿಯೋ ವೈರಲ್

  |

  ಕೊರೊನಾ ವೈರಸ್ ಹಾವಳಿಯಿಂದ ಇಡೀ ಭಾರತ ಲಾಕ್ ಡೌನ್ ಆಗಿದೆ. ಜನರು ಮನೆಯಿಂದ ಹೊರ ಬರದ ಸ್ಥಿತಿ ನಿರ್ಮಾಣವಾಗಿದೆ. ಕುಟುಂಬದ ಜೊತೆ ಮನೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ. ಅದರಲ್ಲೂ ವಿಶ್ರಾಂತಿ ಮೂಡಿನಲ್ಲಿರುವ ಸಿನಿ ಸೆಲೆಬ್ರಿಟಿಗಳು ಈ ಸಮಯವನ್ನು ಕುಟುಂಬದ ಜೊತೆ ಇದ್ದು ಎಂಜಾಯ್ ಮಾಡುತ್ತಿದ್ದಾರೆ.

  ಈ ಸಮಯದಲ್ಲಿ ಸರ್ಜಾ ಕುಟುಂಬ ಹೇಗೆ ಕಾಲಕಳೆಯುತ್ತೆ ಗೊತ್ತಾ? ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಇಬ್ಬರು ಕುಟುಂಬದ ಸದಸ್ಯರ ಜೊತೆ ಮನೆಯಲ್ಲಿಯೇ ಆಟಗಳನ್ನು ಆಡುತ್ತಾ ಟೈಂ ಪಾಸ್ ಮಾಡುತ್ತಿದ್ದಾರೆ. ಇಡೀ ಸರ್ಜಾ ಕುಟುಂಬ ಪಗಡೆ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮುಂದೆ ಓದಿ...

  ಪಗಡೆ ಆಡುತ್ತಿರುವ ಸರ್ಜಾ ಕುಟುಂಬ

  ಪಗಡೆ ಆಡುತ್ತಿರುವ ಸರ್ಜಾ ಕುಟುಂಬ

  ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಇಬ್ಬರು ಮನೆಯ ಸದಸ್ಯರ ಜೊತೆ ಪಗಡೆ ಆಡುತ್ತಿದ್ದಾರೆ. ಚಿರಂಜೀವಿ ಸರ್ಜಾ, ಧ್ರುವ, ಅವರ ಅಜ್ಜಿ ಮತ್ತು ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ. ಸದಾ ಶೂಟಿಂಗ್ ಅಂತ ಬ್ಯುಸಿ ಇರುತ್ತಿದ್ದ ಧ್ರುವ, ಚಿರು ಈಗ ಆಟ ಆಡುತ್ತಾ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ.

  ಆಟದಲ್ಲಿ ಭಾಗಿಯಾದ ಮೇಘನಾ ಮತ್ತು ಧ್ರುವ ಪತ್ನಿ

  ಆಟದಲ್ಲಿ ಭಾಗಿಯಾದ ಮೇಘನಾ ಮತ್ತು ಧ್ರುವ ಪತ್ನಿ

  ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಇಬ್ಬರೆ ಆಡುತ್ತಿಲ್ಲ. ಕುಟುಂಬದ ಜೊತೆ ಧ್ರುವ ಪತ್ನಿ ಪ್ರೇರಣಾ ಮತ್ತು ಚಿರಂಜೀವಿ ಪತ್ನಿ ನಟಿ ಮೇಘನಾ ರಾಜ್ ಸಹ ಆಟದಲ್ಲಿ ಭಾಗಿಯಾಗಿದ್ದಾರೆ. ಧ್ರುವ, ಚಿರು ಎಲ್ಲರೂ ಪಗಡೆ ಆಡುತ್ತಿದ್ದಾರೆ. ಮೇಘನಾ ಮತ್ತು ಪ್ರೇರಣಾ ಇಬ್ಬರೇ ಸೇರಿ ಮತ್ತೊಂದು ಆಟದಲ್ಲಿ ನಿರತಾಗಿದ್ದಾರೆ.

  ಗೆದ್ದ ಖುಷಿಯಲ್ಲಿ ಚಿರು

  ಗೆದ್ದ ಖುಷಿಯಲ್ಲಿ ಚಿರು

  ಕುಟುಂಬದ ಸದಸ್ಯರ ಜೊತೆ ಪಗಡೆ ಆಟಕ್ಕೆ ಇಳಿದಿರುವ ಚಿರು ಮತ್ತು ಧ್ರುವರಲ್ಲಿ ಚಿರು ಸರ್ಜಾ ಗೆದ್ದು ಬೀಗಿದ್ದಾರೆ. ಆಟದಲ್ಲಿ ಗೆದ್ದು ಸಂಭ್ರಮಿಸಿದ್ದಾರೆ. ಸರ್ಜಾ ಕುಟುಂಬ ಪಗಡೆ ಆಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಜಾ ಕುಟುಂಬದ ಅನ್ಯೋನ್ಯತೆ ಮತ್ತು ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  'ಅಮೂಲ್ಯವಾದ ಕ್ವಾರಂಟೈನ್ ಸಮಯ..'

  'ಅಮೂಲ್ಯವಾದ ಕ್ವಾರಂಟೈನ್ ಸಮಯ..'

  ಲಾಕ್ ಡೌನ್ ನಲ್ಲಿ ಮನೆಯಲ್ಲಿಯೆ ಇದ್ದು ಹೇಗಪ್ಪ ಕಾಲಕಳೆಯೋದು ಎಂದು ಅನೇಕರು ಯೋಚಿಸುತ್ತಿದ್ದರೆ, ಕೆಲವರು ಕುಟುಂಬದ ಜೊತೆ ಇರಲು ಇದು ಅಮೂಲ್ಯವಾದ ಸಮಯ ಎಂದು ಎಂಜಾಯ್ ಮಾಡುತ್ತಿದ್ದಾರೆ. ನಟ ಚಿರು ಸರ್ಜಾ ಪಗಡೆ ಆಡುತ್ತಿರುವ ವಿಡಿಯೋ ಶೇರ್ ಮಾಡಿ "ಕ್ವಾರಂಟೈನ್ ಸಮಯವು ಕುಟುಂಬದ ಜೊತೆ ಅಮೂಲ್ಯವಾದ ಸಮಯವಾಗಿದೆ" ಎಂದು ಬರೆದುಕೊಂಡು ವಿಡಿಯೋ ಶೇರ್ ಮಾಡಿದ್ದಾರೆ.

  ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ

  ಧ್ರುವ ಸರ್ಜಾ ಸದ್ಯ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಚಿತ್ರದ ಟ್ರೈಲರ್ ಮತ್ತು ಒಂದು ಹಾಡು ರಿಲೀಸ್ ಆಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇನ್ನೂ ಚಿರು ಸರ್ಜಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಆದ್ಯ, ಖಾಕಿ, ಏಪ್ರಿಲ್, ರಣಂ, ಕ್ಷತ್ರಿಯ ಸೇರಿದಂತೆ ಸಾಕಷ್ಟು ಸಿನಿಮಾಗಳಿವೆ.

  English summary
  Kannada Actor Dhruva Sarja And Chiranjeevi Sarja playing Padage with his family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X