»   » 'ಭರ್ಜರಿ'ಯಾಗಿ ಬರುತ್ತಿದ್ದಾರೆ 'ಬಹದ್ದೂರ್' ಧ್ರುವ ಸರ್ಜಾ

'ಭರ್ಜರಿ'ಯಾಗಿ ಬರುತ್ತಿದ್ದಾರೆ 'ಬಹದ್ದೂರ್' ಧ್ರುವ ಸರ್ಜಾ

Posted By:
Subscribe to Filmibeat Kannada

'ಬಹದ್ದೂರ್' ಸಿನಿಮಾ ಸೂಪರ್ ಹಿಟ್ ಆಯ್ತು. ಕಲೆಕ್ಷನ್ ನಲ್ಲಿ ದಾಖಲೆ ಬರೆಯಿತು. ಅನೇಕ ಸೆಂಟರ್ ಗಳಲ್ಲಿ ಶತ ದಿನೋತ್ಸವವನ್ನೂ ಆಚರಿಸಿಕೊಂಡಿತು. ಇದೆಲ್ಲಾ ಆಗಿ ತಿಂಗಳುಗಳೇ ಕಳೆಯಿತು. ಇಷ್ಟಾದರೂ, ನಟ ಧ್ರುವ ಸರ್ಜಾ ತಮ್ಮ ಮೂರನೇ ಚಿತ್ರವನ್ನ ಅನೌನ್ಸ್ ಮಾಡಿರಲಿಲ್ಲ.

ಹಾಗಂತ ಧ್ರುವ ಸರ್ಜಾ ನಾಪತ್ತೆ ಆಗಿರಲಿಲ್ಲ. ಸುಮ್ಮನೆ ಅಂತೂ ಕೂತಿರಲೇ ಇಲ್ಲ. ಖ್ಯಾತ ನಿರ್ದೇಶಕರೂ ಸೇರಿದಂತೆ ಹಲವರ ಹತ್ತಿರ ಸ್ಕ್ರಿಪ್ಟ್ ಡಿಸ್ಕಷನ್ ಮಾಡಿದ್ದಾರೆ. ಕೊನೆಗೂ ಒಂದು ಕಥೆ ಓಕೆ ಮಾಡಿ ಈಗ ತಮ್ಮ ಮುಂದಿನ ಚಿತ್ರದ ಸಸ್ಪೆನ್ಸ್ ಗೆ ಬ್ರೇಕ್ ಹಾಕಿದ್ದಾರೆ.

Dhruva Sarja's next with 'Bahaddur' Chetan titled as 'Bharjari'

ಹಾಗೆ, ಧ್ರುವ ಸರ್ಜಾ ಗ್ರೀನ್ ಸಿಗ್ನಲ್ ನೀಡಿರುವ ಚಿತ್ರ 'ಭರ್ಜರಿ'. ಧ್ರುವ ಸರ್ಜಾಗೆ 'ಬಹದ್ದೂರ್' ಹಿಟ್ ಕೊಟ್ಟ ನಿರ್ದೇಶಕ ಚೇತನ್ 'ಭರ್ಜರಿ'ಯಾಗಿ ಆಕ್ಷನ್ ಕಟ್ ಹೇಳಿದ್ದಾರೆ. ಇದರ ಹಿಂದೆ ಕೂಡ ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದೆ. 'ಬಹದ್ದೂರ್' ಸಿನಿಮಾ ಆದ್ಮೇಲೆ ಧ್ರುವ ಸರ್ಜಾ ಕೇಳಿರುವ ಕಥೆಗಳ ಸಂಖ್ಯೆ 53.

ಕಥೆ-ಚಿತ್ರಕಥೆ ವಿಷಯದಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಆಗಿರುವ ಧ್ರುವ ಸರ್ಜಾ, ಬರೋಬ್ಬರಿ 53 ಕಥೆಗಳನ್ನ ಕೇಳಿ ರಿಜೆಕ್ಟ್ ಮಾಡಿದ್ದರು. ಅದೇ ಗ್ಯಾಪ್ ನಲ್ಲಿ ತೆಲುಗಿನ 'ಕಂದಿರೀಗ' ರೀಮೇಕ್ ಮಾಡುವುದಕ್ಕೂ ಮುಂದಾಗಿದ್ದರು. [ನಿರ್ಮಾಪಕರ ಪಾಲಿಗೆ ನಿಲುಕದ ನಕ್ಷತ್ರವಾದ ಧ್ರುವ ಸರ್ಜಾ]

ಆದ್ರೆ, ಎರಡು ಸ್ವಮೇಕ್ ಹಿಟ್ಸ್ ಕೊಟ್ಟಿರುವ ಧ್ರುವ, ಹ್ಯಾಟ್ರಿಕ್ ಮಾಡುವ ಉತ್ಸಾಹದಲ್ಲಿ ರೀಮೇಕ್ ಗೆ ಕೈಹಾಕುವುದು ಬೇಡ ಅಂತ ನಿರ್ಧಾರ ಕೈಗೊಂಡಿರುವ ಪರಿಣಾಮ 'ಭರ್ಜರಿ' ಚಿತ್ರಕ್ಕೆ ಚಾಲನೆ ಸಿಗುತ್ತಿದೆ. [ರೀಮೇಕ್ ಗೆ ಕೈಹಾಕಿದರೆ ಸ್ವಮೇಕ್ ಕಿಂಗ್ ಧ್ರುವ ಸರ್ಜಾ?]

Dhruva Sarja's next with 'Bahaddur' Chetan titled as 'Bharjari'

ಇದೇ ತಿಂಗಳ 23 ರಂದು ಸಾಂಗ್ ರೆಕಾರ್ಡಿಂಗ್ ನಡೆಯಲಿದ್ದು, ಮುಂದಿನ ತಿಂಗಳಲ್ಲಿ 'ಭರ್ಜರಿ'ಯಾಗಿ ಸೆಟ್ಟೇರಲಿದೆ. ಧ್ರುವ ಸರ್ಜಾಗೆ ಜೋಡಿ ಹುಡುಕುವ ಕೆಲಸ ಈಗ ನಡೆಯುತ್ತಿದೆ. ತಾಂತ್ರಿಕ ವರ್ಗದಲ್ಲಿ 'ಬಹದ್ದೂರ್' ಟೀಮ್ ಇಲ್ಲಿ ಯಥಾವತ್ ಆಗಿ ಮುಂದುವರಿಯಲಿದೆ. ['ಅಣ್ಣಾಬಾಂಡ್' ಪುನೀತ್ ಜೇಮ್ಸ್ ಫಸ್ಟ್ ಲುಕ್ ಔಟ್]

ಅತ್ತ 'ಜೇಮ್ಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ತಯಾರಿಯಲ್ಲಿರುವ ಚೇತನ್ ಗೆ ಅಪ್ಪು ಕಾಲ್ ಶೀಟ್ ಸಿಗುವುದು 'ದೊಡ್ಮನೆ ಹುಡುಗ' ಮತ್ತು 'ರಾಜಕುಮಾರ' ಆದ್ಮೇಲೆ. ಆದ್ರಿಂದ ಈಗಲೇ 'ಭರ್ಜರಿ' ಶುರುಮಾಡುವುದಕ್ಕೆ ಮುಂದಾಗಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Dhruva Sarja has finally given a nod to his new film titled as 'Bharjari', which is directed by Chetan Kumar of 'Bahaddur' fame. 'Bharjari' is set to go on floors in the next month.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada