For Quick Alerts
  ALLOW NOTIFICATIONS  
  For Daily Alerts

  ರಾಮನವಮಿ ದಿನ 'ಖರಾಬು' ಅವತಾರ ತಾಳಲಿದ್ದಾರೆ ಅಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

  |

  ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷೆಯ ಪೊಗರು ಸಿನಿಮಾ ರಿಲೀಸ್ ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೆ ಚಿತ್ರದಿಂದ ರಿಲೀಸ್ ಆಗಿರುವ ಡೈಲಾಗ್ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

  ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ | Pogaru Song Release | Dhruva Sarja | Filmibeat kannada

  ಸದ್ಯ ಪೊಗರು ಚಿತ್ರದಿಂದ ಹಾಡೊಂದನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರತಂಡ ಪ್ಲಾನ್ ಮಾಡಿದ ಪ್ರಕಾರ ನಡೆದಿದ್ದರೆ ಹಾಡು ಈಗಾಗಲೆ ಬಿಡುಗಡೆಯಾಗಬೇಕಿತ್ತು. ಆದರೆ ಈ ಸಮಯದಲ್ಲಿ ಸಿನಿಮಾ ಹಾಡನ್ನು ರಿಲೀಸ್ ಮಾಡಿ ಜನರ ಮೇಲೆ ಸಂಭ್ರಮ ಹೇರುವುದು ಬೇಡ ಎನ್ನುವ ಕಾರಣಕ್ಕೆ ಹಾಡು ರಿಲೀಸ್ ಅನ್ನು ಮುಂದಕ್ಕೆ ಹಾಕಿದ್ದರು. ಆದರೀಗ ಬಹುನಿರೀಕ್ಷೆಯ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಮುಂದೆ ಓದಿ..

  ಮುಂದಿನ ಸಿನಿಮಾ ತಯಾರಿ ಆರಂಭ: ರೀಮೇಕ್‌ ಗೆ ಹೊರಳಿದ ಧ್ರುವ ಸರ್ಜಾಮುಂದಿನ ಸಿನಿಮಾ ತಯಾರಿ ಆರಂಭ: ರೀಮೇಕ್‌ ಗೆ ಹೊರಳಿದ ಧ್ರುವ ಸರ್ಜಾ

  ರಾಮನವಮಿಗೆ ಬರ್ತಿದೆ ಖರಾಬು ಹಾಡು

  ರಾಮನವಮಿಗೆ ಬರ್ತಿದೆ ಖರಾಬು ಹಾಡು

  ರಾಮನವಮಿಗೆ ಪೊಗರು ಸಿನಿಮಾದಿಂದ ಬಹುನಿರೀಕ್ಷೆಯ ಹಾಡು ತೆರೆಗೆ ಬರಲು ಸಿದ್ಧವಾಗಿದೆ. ಏಪ್ರಿಲ್ ರಂದು ರಿಲೀಸ್ ಆಗುವ ಖರಾಬು ಹಾಡನ್ನು ಕೇಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡನ್ನು ಕೇಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ ಹಾಡು ರಿಲೀಸ್ ಮುಂದಕ್ಕೆ ಹೋಗಿದೆ ಎಂದು ನಿರಾಸೆ ಪಟ್ಟುಕೊಂಡಿದ್ದ ಅಭಿಮಾನಿಗಳಿಗೆ ಈಗ ಸಂತಸದ ಸುದ್ದಿ ನೀಡಿದ್ದಾರೆ.

  ನಿಮ್ಮೆಲ್ಲರ ಒತ್ತಾಯದ ಮೇರೆಗೆ ಬರ್ತಿದೆ ಹಾಡು

  "ಹಾಯ್, ರಾಮನವಮಿಯ ಪ್ರಯುಕ್ತ ವಿಶೇಷ ಕಾಣಿಕೆ. ನಮ್ಮ ಬಾಸ್ ಆಂಜನೇಯ, ಅವ್ರ ಬಾಸ್ ಶ್ರೀರಾಮ. ಇದೇ ರಾಮನವಮಿಯಂದು ನಿಮ್ಮೆಲ್ಲರ ಒತ್ತಾಯದಂತೆ ಪೊಗರಿನ ಖರಾಬು ಹಾಡು @aanandaaudio ದಲ್ಲಿ ಸಂಜೆ 5:55ಕ್ಕೆ. ಮನೆಯಲ್ಲಿರಿ. ಆರೋಗ್ಯದಿಂದಿರಿ. ಹೊರಗಿದ್ರೆ ನೀವ್ ಮಾತ್ರ ನೋಡ್ತಿದ್ರಿ, ಈಗ ನಿಮ್ಮ ಸಮಸ್ತ ಕುಟುಂಬದ ಆಶೀರ್ವಾದವೂ ಪೊಗರಿಗೆ ಸಿಗಲಿದೆ ಜೈಆಂಜನೇಯ" ಎಂದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.

  ಪೊಗರು ಸಂಭ್ರಮ ಬೇಡ ಎಂದಿದ್ದ ಧ್ರುವ

  ಲಾಕ್ ಡೌನ್ ಸಮಯದಲ್ಲಿ ಪೊಗರು ಹಾಡು ರಿಲೀಸ್ ಮಾಡಿ ಸಂಭ್ರಮ ಹೇರುವುದು ಬೇಡ ಎಂದು ಧ್ರುವ ಸರ್ಜಾ ಹೇಳಿದ್ದರು. ಈ ಬಗ್ಗೆ ಧ್ರುವ "ಕೊರೊನಾದಿಂದಾಗಿರುವ ಅವಾಂತರ ಸೂಕ್ಷ್ಮಮಾಗಿ ಗಮನಿಸುತ್ತಲೇ ಬಂದಿದ್ದೀವಿ. ಯಾರೊಬ್ಬರ ಮನೆಯಲ್ಲೂ ಸಂಭ್ರಮವಿಲ್ಲ. ಇಂತ ವಾತಾವರಣದಲ್ಲಿ ನಮ್ಮ ಪೊಗರು ಸಿನಿಮಾದ ಸಂಭ್ರಮ ಹೇರುವುದು ಬೇಡವೆಂದು ನಮ್ಮ ತಂಡ ನಿರ್ಧರಿಸಿದೆ. ಅತೀ ಶೀಘ್ರದಲ್ಲೇ ಖರಾಬು ಹಾಡು ಬಿಡುಗಡೆಯಾಗಲಿದೆ. ಅಲ್ಲಿಯವರೆಗೂ ಅಭಿಮಾನಿಗಳ ಆರೋಗ್ಯವೇ ಮಹಾಭಾಗ್ಯ ಮನೆಯಲ್ಲಿರಿ. ಜೈ ಆಂಜನೇಯ" ಎಂದು ಟ್ವೀಟ್ ಮಾಡಿದ್ದರು.

  ರಿಲೀಸ್ ಆಯ್ತು ರಾಬರ್ಟ್ ಹಾಡು

  ರಿಲೀಸ್ ಆಯ್ತು ರಾಬರ್ಟ್ ಹಾಡು

  ರಾಮನವಮಿ ಪ್ರಯುಕ್ತ ಈಗಾಗಲೆ ರಾಬರ್ಟ್ ಸಿನಿಮಾತಂಡ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಸಿಕ್ಕಿದೆ. ಈಗಾಗಲೆ ಜೈ ಶ್ರೀರಾಮ್ ಹಾಡು ರಿಲೀಸ್ ಆಗಿತ್ತು. ಈ ಹಾಡಿನ ಹೊಸ ಅವತರಣಿಕೆ ಬಿಡುಗಡೆ ಮಾಡಿದೆ ಸಿನಿಮಾತಂಡ. ಹೊಸ ಅವತರಣಿಕೆ ಹಾಡು ಕೇಳಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.

  English summary
  Kannada Actor Dhruva Sarja starrer Pogaru Karbu song will release on April 2nd Ramanavami.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X