»   » ಅರ್ಧ ಶತಕ ಬಾರಿಸಿದ 'ಭರ್ಜರಿ' ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ?

ಅರ್ಧ ಶತಕ ಬಾರಿಸಿದ 'ಭರ್ಜರಿ' ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ?

Posted By: Pavithra
Subscribe to Filmibeat Kannada
ಅರ್ಧ ಶತಕ ಬಾರಿಸಿದ 'ಭರ್ಜರಿ' ಸಿನಿಮಾದ ಕಲೆಕ್ಷನ್ ಎಷ್ಟು ಗೊತ್ತಾ? | Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಇವತ್ತಿಗೆ ಅರ್ಧ ಶತಕ ಪೂರೈಸಿದೆ. ಧ್ರುವ ಪರ್ಫಾಮೆನ್ಸ್ ನೋಡಿದ ಸಿನಿಮಾ ಪ್ರೇಕ್ಷಕ ಚಿತ್ರಕ್ಕೆ ಜೈಕಾರ ಹಾಕಿದ್ದ. ಎರಡು ವರ್ಷಗಳು ತಡವಾಗಿ ಬಂದರೂ ಕೂಡ ಸಿನಿಮಾವನ್ನ ಪ್ರೀತಿಯಿಂದಲೇ ಸ್ವೀಕರಿಸಿದ ಕನ್ನಡ ಸಿನಿಮಾ ಅಭಿಮಾನಿಗಳು 'ಭರ್ಜರಿ' ಚಿತ್ರಕ್ಕೆ ದೊಡ್ಡ ಮಟ್ಟದ ಯಶಸ್ಸನ್ನ ತಂದುಕೊಟ್ಟಿದ್ದಾರೆ.

ರಿಲೀಸ್ ಆದ ದಿನದಿಂದ ಹಿಡಿದು ಇಂದಿನವರೆಗೂ ದಾಖಲೆ ಮೊತ್ತದಲ್ಲಿ ಕಲೆಕ್ಷನ್ ಮಾಡಿದ್ಯಂತೆ 'ಭರ್ಜರಿ' ಸಿನಿಮಾ. ಮಲ್ಟಿಫ್ಲೆಕ್ಸ್ ನಲ್ಲಿ ಮಾತ್ರವಲ್ಲದೆ ಬಿ ಹಾಗೂ ಸಿ ಸೆಂಟರ್ ಗಳಲ್ಲಿ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು ಉತ್ತರಕರ್ನಾಟಕದ ಭಾಗದ ಚಿತ್ರಮಂದಿರಗಳಲ್ಲಿ ಇಂದಿಗೂ 'ಭರ್ಜರಿ' ಹೌಸ್ ಫುಲ್ ಆಗಿ ಓಡ್ತಿದೆ ಅನ್ನೋದು ಸ್ಪೆಷಲ್.

ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರ 'ಭರ್ಜರಿ'

ಸಾಕಷ್ಟು ಕಾರಣಗಳಿಂದ 'ಭರ್ಜರಿ' ಸಿನಿಮಾ ಲೇಟ್ ಆದರೂ ಲೇಟೆಸ್ಟ್ ಆಗಿ ಬಂದಿದೆ. ಈಗಿನ ಜನರೇಷನ್ ಗೆ ಬೇಕಿದ್ದ ಎಲ್ಲಾ ಕಂಟೆಂಟ್ ಸಿನಿಮಾದಲ್ಲಿ ಇರೋದ್ರಿಂದ ಪ್ರೇಕ್ಷಕರು ಚಿತ್ರವನ್ನ ಇಷ್ಟ ಪಟ್ಟಿದ್ದಾರೆ. ನಿರ್ದೇಶಕ ಚೇತನ್ ಕುಮಾರ್ ಸ್ಟೈಲ್ ಆಫ್ ಮೇಕಿಂಗ್ ಮತ್ತೆ ವರ್ಕ್ ಆಗಿದೆ.

'ಭರ್ಜರಿ' ಸೌಂಡು ಮಾಡ್ತಿದೆ ಟ್ರೆಂಡು

ಇಂದಿಗೆ ಐವತ್ತು ದಿನ ಪೂರೈಸಿರೋ 'ಭರ್ಜರಿ' ಸಿನಿಮಾ ರಾಜ್ಯದ 129 ಸೆಂಟರ್ ನಲ್ಲಿ 50 ದಿನಗಳನ್ನ ಪೂರೈಸಿದೆ. ಸುಮಾರು ಹತ್ತು ವರ್ಷದ ನಂತ್ರ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಸೆಂಟರ್ ನಲ್ಲಿ ಐವತ್ತು ದಿನಗಳು ಓಡಿರುವ ಸಿನಿಮಾ ಇದೇ ಅಂತಿದ್ದಾರೆ ಗಾಂಧಿನಗರದ ಮಂದಿ

ಐವತ್ತು ದಿನಕ್ಕೆ 69 ಕೋಟಿ ಗಳಿಕೆ

'ಭರ್ಜರಿ' ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ ಹಾಕಿದ ಬಂಡವಾಳವನ್ನ ವಾಪಸ್ ಪಡೆದುಕೊಂಡಿದೆ. ಗಾಂಧಿನಗರದ ವಿತರಕರ ಪ್ರಕಾರ 'ಭರ್ಜರಿ' ಚಿತ್ರ ಐವತ್ತು ದಿನಗಳಿಗೆ 69 ಕೋಟಿ ಗಳಿಕೆ ಮಾಡಿದೆ. ಬಿ ಮತ್ತು ಸಿ ಸೆಂಟರ್ ಗಳಲ್ಲಿ ಚಿತ್ರಕ್ಕೆ ಇನ್ನೂ ಡಿಮ್ಯಾಂಡ್ ಇದೆ.

ಧ್ರುವ ಅಭಿಮಾನಿಗಳಿಂದ ಸೆಲೆಬ್ರೇಷನ್

ಐವತ್ತು ದಿನಗಳು ಕಂಪ್ಲೀಟ್ ಮಾಡಿರೋದ್ರಿಂದ ಇಂದು ಥಿಯೇಟರ್ ಬಳಿ ಹಬ್ಬದಂತೆ ಆಚರಣೆ ಮಾಡೋದಕ್ಕೆ ಸಿನಿಮಾ ತಂಡ ಸಜ್ಜಾಗಿದೆ. ಇವತ್ತಿನ ಮಧ್ಯಾಹ್ನದ ಷೋನಲ್ಲಿ ಧ್ರುವ ಅಭಿಮಾನಿಗಳ ಜೊತೆ ಸಿನಿಮಾ ನೋಡಿ ಸಿಹಿ ಹಂಚಲಿದ್ದಾರೆ. ಅಭಿಮಾನಿಗಳು ಖುಷಿಗಾಗಿ ರಕ್ತದಾನ, ಅನ್ನದಾನ ಮಾಡೋದಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಒಟ್ಟಾರೆ 'ಭರ್ಜರಿ' ಸಿನಿಮಾದ ಅದ್ದೂರಿ ಯಶಸ್ಸಿನಿಂದ ಧ್ರುವ ಸರ್ಜಾಗೆ ಮತ್ತಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿರೋದಂತೂ ಸತ್ಯ.

English summary
According to the latest reports, Dhruva Sarja starrer 'Bharjari' movie has collected 69 crore in 50 days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X